ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಡಾ ರಾಜೇಂದ್ರ ಗಡಾದ
ಗದಗ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪ್ಲಾಸ್ಟಿಕ್‌ನಂತಹ ವಿಷಕಾರಿ ವಸ್ತುಗಳು ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ನೀರು ಗಾಳಿ ಇವುಗಳೊಂದಿಗೆ ಬೆರೆಯುವುದರಿಂದ ಮತ್ತು ಇನ್ನಿತರ ಹಾನಿಕಾರಕ ಪದಾರ್ಥಗಳು ಪರಿಸರದೊಂದಿಗೆ ಬೆರೆತು ಜೀವಿಗಳ ಆರೋಗ್ಯಕ್ಕೆ ಸಂಚಕಾರವನ್ನು ಉಂಟು ಮಾಡಿ ಮಾರಣಾಂತಿಕ ಕಾಯಿಲೆಗಳಿಗ
ಫೋಟೋ


ಗದಗ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ಲಾಸ್ಟಿಕ್‌ನಂತಹ ವಿಷಕಾರಿ ವಸ್ತುಗಳು ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ನೀರು ಗಾಳಿ ಇವುಗಳೊಂದಿಗೆ ಬೆರೆಯುವುದರಿಂದ ಮತ್ತು ಇನ್ನಿತರ ಹಾನಿಕಾರಕ ಪದಾರ್ಥಗಳು ಪರಿಸರದೊಂದಿಗೆ ಬೆರೆತು ಜೀವಿಗಳ ಆರೋಗ್ಯಕ್ಕೆ ಸಂಚಕಾರವನ್ನು ಉಂಟು ಮಾಡಿ ಮಾರಣಾಂತಿಕ ಕಾಯಿಲೆಗಳಿಗೆ ನೂಕುತ್ತಿವೆ ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಜವಾಬ್ದಾರಿಯಿಂದ ರಕ್ಷಣೆ ಮಾಡಬೇಕು ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.

ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವತಿಯಿಂದ ಇಲ್ಲಿಯ ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಸರ ಮಾಲಿನ್ಯ ಜೀವಸಂಕುಲದ ಮೇಲೂ ಅಪಾರವಾದ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದ್ದು ಇದು ಹಲವು ರೋಗಗಳಿಗೆ ಕಾರಣವಾಗಿದೆ ಮುಂದಿನ ಪೀಳಿಗೆಗೆ ಉತ್ತಮ ಜೀವನ ನೀಡಲು ಉತ್ತಮ ಪರಿಸರ ಅಗತ್ಯವಾಗಿದ್ದು ಮಾಲಿನ್ಯ ಮುಕ್ತ ಪರಿಸರಕ್ಕೆ ಸಾರ್ವಜನಿಕರು ನಾಗರಿಕರು ವಿದ್ಯಾರ್ಥಿಗಳು ಮಹಿಳೆಯರು ಸ್ವಯಂ ಜಾಗೃತರಾಗಿ ಶ್ರಮಿಸಬೇಕಾಗಿದೆ ಮತ್ತು ಇವುಗಳ ಬಗ್ಗೆ ಇತರರಿಗೆ ತಿಳಿಸಬೇಕಾಗಿರುವುದು ತೀರ ಅವಶ್ಯವಾಗಿದೆ ಎಂದರು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಶ್ರೀಮತಿ ಸುಧಾ ಬೆಂತೂರ, ಗುಡದಪ್ಪ ಜಗ್ಗಿನ ಭೂದೇಶ್ ಸಿದ್ದನಗೌಡರ ಆಸೀನರಾಗಿದ್ದರು.

ಆರಂಭದಲ್ಲಿ ಶ್ರೀಮತಿ ನಿರ್ಮಲ ಮರಿಗೌಡ ಪ್ರಾರ್ಥಿಸಿದರು ಲೀಲಾವತಿ ಚಲವಾದಿ ಸ್ವಾಗತಿಸಿದರು. ಬಿಎಸ್ ಸಿದ್ದನಗೌಡ ಕಾರ್ಯಕ್ರಮ ರೂಪಿಸಿದರು ಕೊನೆಯಲ್ಲಿ ಮೌಲಾನ ಸಿದ್ದಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ವಿದ್ಯಾರ್ಥಿಗಳು ಮಕ್ಕಳು ಮತ್ತು ರೋಗಿಗಳು ಪಾಲಕರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande