
ಬಳ್ಳಾರಿ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯುತ್ ವಲಯ ಹಾಗೂ ವಿದ್ಯುತ್ ನೌಕರರ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ ದೇಶವ್ಯಾಪಿ ಬಲಿಷ್ಠ ಹೋರಾಟವನ್ನು ಬಲಪಡಿಸಲು ಆಲ್ ಇಂಡಿಯಾ ಪವರ್‍ಮೆನ್ ಫೆಡರೇಶನ್ ಕೋಲ್ಕೊತ್ತಾದಲ್ಲಿ ಡಿಸೆಂಬರ್ 13 ಮತ್ತು 14 ರಂದು 3ನೇ ಅಖಿಲ ಭಾರತ ಸಮ್ಮೇಳನವನ್ನು ಏರ್ಪಡಿಸಿದೆ.
ಅಖಿಲ ಭಾರತ ಅಧ್ಯಕ್ಷರಾದ ಕೆ. ಸೋಮಶೇಖರ್ ಅವರು ಸಮ್ಮೇಳನದ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಿ, ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿ, ಕೋಲ್ಕತ್ತಾದ ಮೌಲಾಲಿ ಯುವ ಕೇಂದ್ರದಲ್ಲಿ ಸಮ್ಮೇಳನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸ್ವಪನ್ ಘೋμï, ಶಂಕರ್ ದಾಸ್ ಗುಪ್ತಾ, ಸಮರ್ ಸಿನ್ಹಾ, ಅಶೋಕ್ ದಾಸ್ ಇನ್ನಿತರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಎ. ದೇವದಾಸ್, ಎಐಪಿಎಫ್ ಸಂಘಟನಕಾರರಾದ ಡಾ. ಎನ್. ಪ್ರಮೋದ್, ಸುರೇಶ್.ಜಿ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕ ಸಂಘದ ಕಿರಣ್ ಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್