ಬಸರಕೋಡು ಗೂಳ್ಯಂ ಹಗರಿ ನದಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹ
ಬಳ್ಳಾರಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದ ಗಡಿ ಗ್ರಾಮವಾಗಿರುವ ಬಸರಕೋಡು – ಆಂಧ್ರದ ಗಡಿ ಗ್ರಾಮವಾಗಿರುವ ಗೂಳ್ಯಂ ಮಧ್ಯೆ ಹರಿಯುತ್ತಿರುವ ವೇದಾವತಿ (ಹಗರಿ) ನದಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ ಬಳ್ಳಾರಿ ಗ್ರಾಮೀಣ
ಬಸರಕೋಡು – ಗೂಳ್ಯಂ ಹಗರಿ ನದಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹ


ಬಳ್ಳಾರಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ ಗಡಿ ಗ್ರಾಮವಾಗಿರುವ ಬಸರಕೋಡು – ಆಂಧ್ರದ ಗಡಿ ಗ್ರಾಮವಾಗಿರುವ ಗೂಳ್ಯಂ ಮಧ್ಯೆ ಹರಿಯುತ್ತಿರುವ ವೇದಾವತಿ (ಹಗರಿ) ನದಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ ಬಳ್ಳಾರಿ ಗ್ರಾಮೀಣ ಸ್ಥಳೀಯ ಸಮಿತಿಯು ಸಂಸದರಾದ ಇ. ತುಕಾರಾಂ ಅವರಿಗೆ ಮನವಿ ಸಲ್ಲಿಸಿದೆ.

ಕರ್ನಾಟಕದ ಬಳ್ಳಾರಿ ತಾಲೂಕಿನಲ್ಲಿ ಗಡಿ ಗ್ರಾಮವಾಗಿರುವ ಬಸರಕೋಡು ಗ್ರಾಮವು ಆಂಧ್ರ - ಕರ್ನಾಟಕದ ಗಡಿಭಾಗದಲ್ಲಿದೆ. ಬಸರಕೋಡಿನ ಪಕ್ಕದಲ್ಲಿ ಗೂಳ್ಯಂ ಗ್ರಾಮವಿದ್ದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇದೆ. ಈ ಗ್ರಾಮಗಳ ಮಧ್ಯೆ ವೇದಾವತಿ (ಹಗರಿ) ನದಿಯು ಹರಿಯುತ್ತಿವೆ.

ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಸಂಚರಿಸುವ ವಾಹನಗಳಾಗಲೀ ಪಾದಾಚಾರಿಗಳಾಗಲೀ ಈ ನದಿಯ ನೀರಿನಲ್ಲಿ ಒಂದು ಕಿ.ಮೀ ಅಂತರವನ್ನು ಕ್ರಮಿಸಬೇಕು. ಈ ನದಿಯು ಉಸುಕಿನಿಂದ ಕೂಡಿರುವುದರಿಂದ ವಾಹನಗಳು ಉಸುಕಿನಲ್ಲಿ ಸಿಕ್ಕಿಕೊಳ್ಳುತ್ತವೆ. ಕಾಲ್ನಡಿಗೆಯಿಂದ ಹೋಗುವವರಿಗೂ ಉಸುಕಿನಲ್ಲಿ ಕಾಲು ಸಿಲುಕುತ್ತವೆ. ಪ್ರಸ್ತುತ ಎರಡೂ ಗ್ರಾಮಗಳ ಜನರುಕಾಲುದಾರಿಯನ್ನೇ ಅವಲಂಭಿಸಿದ್ದಾರೆ. ಕಾರಣ ಸೇತುವೆಯ ಅಗತ್ಯವಿದೆ ಎಂದು ಸಮಿತಿ ತಿಳಿಸಿದೆ.

ಈ ಎರಡೂ ಗ್ರಾಮಗಳು ಆಂಧ್ರ - ಕರ್ನಾಟಕದ ಗಡಿ ಭಾಗಗಳಾಗಿ ಇರುವುದರಿಂದ ವ್ಯಾಪಾರ-ವಹಿವಾಟು ಹಾಗೂ ಜನರಲ್ಲಿ ಪರಸ್ಪರ ಕೌಟುಂಬಿಕ ಸಂಬಂಧಗಳು ಇರುವುದರಿಂದ ನೂರಾರು ಜನ ನದಿಯ ಮುಖಾಂತರವೇ ಸಾಗಬೇಕಾಗಿದೆ. ಆಂಧ್ರದ ಕರ್ನೂಲ್ ಜಿಲ್ಲೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾರಿಗೆ ಬರುವ ಅನೇಕರು ಶಿಕ್ಷಣ, ವೈದ್ಯಕೀಯ ಇತರೆಗಳಿಗಾಗಿ ಬಳ್ಳಾರಿಯನ್ನು ಅವಲಂಭಿಸಿದ್ದಾರೆ. ಕಾರಣ ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿರ್ಮಾಣ ಮಾಡಬೇಕು ಎಂದು ಸಮಿತಿಯು ಕೋರಿದೆ.

ಎಸ್,ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಎ. ದೇವದಾಸ್, ಸದಸ್ಯರಾದ ಹನುಮಂತಪ್ಪ, ಮತ್ತು ಬಸರಕೋಡು ಗ್ರಾಮದ ಗ್ರಾಮಸ್ಥರಾದ ಕೆ. ಸಿದ್ದಪ್ಪ, ಅಂಜಿನಪ್ಪ, ಮಾಳಪ್ಪ, ಮಲ್ಲಯ್ಯ ಹಂದ್ಯಾಳು, ಮಲ್ಲಿಕಾರ್ಜುನ, ಶ್ರೀನಿವಾಸ, ಬಿ. ತಿಪ್ಪಯ್ಯ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande