ಹಾಸ್ಯ ನಾಟಕ ಮುದುಕನ ಮದುವೆ ಪ್ರದರ್ಶನ
ಹಾಸ್ಯ ನಾಟಕ ಮುದುಕನ ಮದುವೆ ಪ್ರದರ್ಶನ
ಕೋಲಾರದ ಟಿ. ಚನ್ನಯ್ಯ ರಂಗಮAದಿರದಲ್ಲಿ ರಂಗ ನಿರ್ದೇಶಕ ಬ್ಯಾಡಬಲೆ ಮುರಳಿ ನಿರ್ದೇಶನದಲ್ಲಿ ಮುದುಕನ ಮದುವೆ ನಾಟಕ ಪ್ರದರ್ಶನವಾಯಿತು.


ಕೋಲಾರ, ೦೮ ಡಿಸೆಂಬರ್ (ಹಿ.ಸ) :

ಆ್ಯಂಕರ್ : ನಗರದ ಟಿ.ಚನ್ನಯ್ಯ ರಂಗಮ0ದಿರದಲ್ಲಿ ಕಲಾವಿದ ಬ್ಯಾಡಬಲೆ ಕೆ.ಮುರಳಿ ರವರ ನಿರ್ದೇಶನದಲ್ಲಿ ಮುದುಕನ ಮದುವೆ ಎಂಬ ಹಾಸ್ಯಮಯ ನಾಟಕ ಪ್ರದರ್ಶಿಸಲಾಯಿತು. ಇಡೀ ನಾಟಕದ ಉದ್ದಕ್ಕೂ ಹಾಸ್ಯ ಪ್ರಸಂಗಗಳು ಪ್ರೇಕ್ಷಕರನ್ನು ರಂಜಿಸಿದವು.

ಕೋಲಾರ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಬೆಳಮಾರನಹಳ್ಳಿ ಆನಂದ್ ಮಾತನಾಡಿ ಇಂದಿನ ಯುವ ಪೀಳಿಗೆ ಮೊಬೈಲ್ , ಟಿ.ವಿ, ಸಿನಿಮಾಗಳಿಗೆ ಮಾರುಹೋಗಿ ನಾಟಕ, ಜಾನಪದ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಕ್ಷೀಣಿಸುತ್ತಿದೆ. ಬ್ಯಾಡಬಲೆ ಕೆ.ಮುರಳಿ ರವರು ಇಂತಹ ಮನರಂಜನಾ ಮೂಲಕ ನೈತಿಕತೆಯ ಸಾಮಾಜಿಕ ವೈವಿಧ್ಯಮಯ ನಾಟಕ ಪ್ರದರ್ಶನಗಳನ್ನು ಕರ್ನಾಟಕದ ಹೆಸರಾಂತ ಚಲನಚಿತ್ರ ನಟನಟಿಯರೊಂದಿಗೆ ಅಭಿನಯಿಸಿ ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜು ಮಾತನಾಡಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬ್ಯಾಡಬಲೆ ಗ್ರಾಮದ ರೈತನ ಮಗನಾಗಿ ಜನಿಸಿದ ಮುರಳಿ ತಮ್ಮ ಶಾಲಾ ಕಾಲೇಜಿನ ದಿನಗಳಲ್ಲಿಯೇ ಸಂಗೀತ, ನಾಟಕ, ಜಾನಪದ ಮುಂತಾದ ಕಲೆಗಳನ್ನು ಮೈಗೂಡಿಸಿಕೊಂಡು ಪೋಷಿಸುತ್ತಾ ಬಂದಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲೂ ಅವರಿಗೆ ನನ್ನ ಎಲ್ಲಾ ರೀತಿಯ ಸಹಕಾರ ಇರುತ್ತದೆ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ವಿಜಯಲಕ್ಷ್ಮಿ ಮಾತನಾಡಿ, ಮೂವತ್ತೈದು ವರ್ಷಗಳಿಂದಲೂ ನಿರಂತರವಾಗಿ ರಂಗಭೂಮಿಯಲ್ಲಿ ಮುರಳಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ನೆರೆದಿರುವ ಎಲ್ಲಾ ಕಲಾಭಿಮಾನಿಗಳು ಇನ್ನೂ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕೆಂದು ತಿಳಿಸಿ, ಇವರಿಗೆ ನನ್ನ ಕಡೆಯಿಂದ ಸರಕಾರದಲ್ಲಿ ಸಿಗಬೇಕಾದ ಅನುಕೂಲಗಳನ್ನು ಮಾಡಿಕೊಡಲು ನಾನು ಸದಾ ಸಿದ್ಧ ಎಂದು ತನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಮಾಜಿ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಮುರಳಿ ರವರು ತಮ್ಮ ಜೀವನವನ್ನೇ ಕಲೆಗಾಗಿ ಮುಡಿಪಾಗಿಟ್ಟು ನಮ್ಮ ಕೋಲಾರ ಜಿಲ್ಲೆಯಾದ್ಯಂತ ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆಂದರೆ. ಅದಕ್ಕೆ ಈಗ ಇಲ್ಲಿ ಸೇರಿರುವ ಅಭಿಮಾನಿಗಳೇ ಸಾಕ್ಷಿ. ನಾಡು, ನುಡಿ, ಕನ್ನಡ, ಸಂಸ್ಕೃತಿಯ ಬಗ್ಗೆ ಅವರಿಗಿರುವ ಕಾಳಜಿಗೆ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿದ್ದು ಸಂತೋಷದ ವಿಚಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಮಚಂದ್ರಪ್ಪ, ಅಂತರಗ0ಗೆ ಬುದ್ಧಿಮಾಂದ್ಯರ ಸಂಸ್ಥೆ ಸಂಸ್ಥಾಪಕ ಕೆ.ಎಸ್.ಶಂಕರ್, ಬೆಂಗಳೂರು ಕೆ.ಪಿ.ಸಿ.ಸಿ. ಸೇವಾದಳದ ಕಾರ್ಯದರ್ಶಿ ಡಾ.ಬಿ. ಶಂಕರಪ್ಪ, ಬಿ.ಎಸ್. ರಮೇಶ್ ಬಾಬು, ನಾಗರಾಜ್, ಕಲಾಪೋಷಕರಾದ ಸಂಪತ್‌ಕುಮಾರ್, ಎಂ.ವಿ ವೆಂಕಟಾಚಲ, ಅಮರೇಶ್, ಟೊಮೊಟೊ ಮಂಡಿ ಮಾಲೀಕರಾದ ಚೌಡಪ್ಪ, ರಾಜಾರಾವ್, ರಾಜಶೇಖರ್ ಶರ್ಮಾ, ಚೇತನ್ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.

ಚಲನಚಿತ್ರ ನಟ ನಟಿಯರಾದ ರೇಖಾ ದಾಸ್, ಮೂಗು ಸುರೇಶ್, ಶೋಭಾ ರೈ, ಮಂಡ್ಯ ಜಯರಾಮ್, ಮಲ್ಲಿಕಾರ್ಜುನ, ಶರಣ, ಮಾಲಾ ಡಿಂಗ್ರಿ ನಾಗರಾಜ್, ಮಹೇಶ್ವರಿ, ಬ್ಯಾಡಬಲೆ ಕೆ.ಮುರಳಿ ಅಭಿನಯಿಸಿದರು.

ಚಿತ್ರ : ಕೋಲಾರದ ಟಿ. ಚನ್ನಯ್ಯ ರಂಗಮAದಿರದಲ್ಲಿ ರಂಗ ನಿರ್ದೇಶಕ ಬ್ಯಾಡಬಲೆ ಮುರಳಿ ನಿರ್ದೇಶನದಲ್ಲಿ ಮುದುಕನ ಮದುವೆ ನಾಟಕ ಪ್ರದರ್ಶನವಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande