
ಕುಡತಿನಿ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕುಡತಿನಿ ಪಟ್ಟಣ ಪಂಚಾಯಿತಿ ವತಿಯಿಂದ 2025-26ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಟಿಎಸ್‌ಪಿ ಯೋಜನೆಯಡಿ ಹಾಗೂ 2019-20 ರಿಂದ 2024-25ನೇ ಸಾಲಿನ ಎಸ್‌ಎಫ್‌ಸಿ ಅನುದಾನದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಾಗೂ ಶೇ.7.25ರ ಯೋಜನೆಗಳಡಿ ವೈಯಕ್ತಿಕ ಕಾರ್ಯಕ್ರಮಗಳ ಅನುಷ್ಟಾನದ ವಿವಿಧ ಸೌಲಭ್ಯಗಳಡಿ ಸಹಾಯಧನ ಪಡೆಯಲು ಕುಡತಿನಿ ಪಟ್ಟಣದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೌಲಭ್ಯಗಳು :
ಕುಡತಿನಿ ಪಟ್ಟಣದ ಪರಿಶಿಷ್ಟ ಪಂಗಡದ ವರ್ಗದವರಿಗೆ ನಳ ಸಂಪರ್ಕ ಶುಲ್ಕ ವೆಚ್ಚ ಭರಿಸಲು ಸಹಾಯಧನ, ಪರಿಶಿಷ್ಟ ಜಾತಿ ವರ್ಗದ ಮೆಡಿಕಲ್, ಇಂಜಿನಿಯರಿ0ಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ ಸಹಾಯಧನ, ಪರಿಶಿಷ್ಟ ವರ್ಗದ ಮೆಡಿಕಲ್, ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ ಸಹಾಯಧನ ಮತ್ತು ಇತರೆ ಹಿಂದುಳಿದ ವರ್ಗದ ಮೆಡಿಕಲ್, ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ ಸಹಾಯಧನ ನೀಡಲಾಗುತ್ತದೆ.
ಅರ್ಜಿಗಳನ್ನು ಕುಡತಿನಿ ಪಟ್ಟಣ ಪಂಚಾಯಿತಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಡಿ.22 ರ ಸಂಜೆ 4.30 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕುಡತಿನಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಅಥವಾ ದೂ. 08392-248025 ಗೆ ಸಂಪರ್ಕಿಬಹುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್