ಕುಷ್ಟಗಿ : ವಿಶೇಷ ಚೇತನ ಮಕ್ಕಳಿಗೆ ಡಿ.10 ರಂದು ವೈದ್ಯಕೀಯ ತಪಾಸಣಾ ಶಿಬಿರ
ಕುಷ್ಟಗಿ, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಕುಷ್ಟಗಿ ತಾಲೂಕ ಮಟ್ಟದ ವೈದ್ಯಕೀಯ ತಪಾಸಣಾ ಶಿಬಿರವನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 9.30 ಗಂಟೆಗೆ ಕುಷ್ಟಗಿ ಪಟ್ಟಣದ ವಿದ್ಯಾನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲ
ಕುಷ್ಟಗಿ : ವಿಶೇಷ ಚೇತನ ಮಕ್ಕಳಿಗೆ ಡಿ.10 ರಂದು ವೈದ್ಯಕೀಯ ತಪಾಸಣಾ ಶಿಬಿರ


ಕುಷ್ಟಗಿ, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಕುಷ್ಟಗಿ ತಾಲೂಕ ಮಟ್ಟದ ವೈದ್ಯಕೀಯ ತಪಾಸಣಾ ಶಿಬಿರವನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 9.30 ಗಂಟೆಗೆ ಕುಷ್ಟಗಿ ಪಟ್ಟಣದ ವಿದ್ಯಾನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶ್ರವಣ ದೋಷ( HEARING IMPAIRED ), ಪೂರ್ಣ ದೃಷ್ಟಿದೋಷ( COMPLETE BLINDNESS ), ಮೆದುಳು ವಾತ( CEREBRAL PALSY ), ದೈಹಿಕ ನ್ಯೂನ್ಯತೆ( LOCOMOTOR DISABILITY ), ಬುದ್ಧಿಮಾಂದ್ಯತೆ( INTELLECTUAL DISABILITY ), ಬಹು ಅಂಗಾAಗದೋಷ (ಶ್ರವಣ, ಅಂಧತ್ವ ಸೇರಿದಂತೆ) ( MULTIPLE DISABILITY INCLUDING DEAF BLINDNESS ) ಸೇರಿದಂತೆ ನ್ಯೂನ್ಯತೆಯುಳ್ಳ ಮಕ್ಕಳನ್ನು ತಜ್ಞ ವೈದ್ಯರು ತಪಾಸಣೆ ಮಾಡಲಿದ್ದಾರೆ.

ಮೇಲ್ಕಂಡ ನ್ಯೂನ್ಯತೆಯಡಿಯಲ್ಲಿ ಬರುವ ಸರಕಾರಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.

ಪೂರ್ವ ಪ್ರಾಥಮಿಕ ಮತ್ತು 1 ರಿಂದ 12ನೇ ತರಗತಿಯವರೆಗಿನ ಈ ಮೇಲ್ಕಾಣಿಸಿದ ನ್ಯೂನ್ಯತೆ ಹೊಂದಿರುವ ಮಕ್ಕಳು ಶಿಬಿರಕ್ಕೆ ಹಾಜರಾಗಿ ಚಿಕಿತ್ಸೆ ಪಡೆಯಲು ಕೋರಲಾಗಿದೆ.

ಪ್ರಾಚಾರ್ಯರು ಹಾಗೂ ಮುಖ್ಯೋಪಾಧ್ಯಾಯರು ಶಿಬಿರಕ್ಕೆ ಹಾಜರಾಗುವ ವಿಶೇಷ ಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ), ಮಕ್ಕಳ ಪೋಷಕರ ಆಧಾರಕಾರ್ಡ್, 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ ಬಿ.ಪಿ.ಎಲ್. ಕಾರ್ಡ್ ನಕಲು ಪ್ರತಿಗಳೊಂದಿಗೆ ಮಕ್ಕಳನ್ನು ಪಾಲಕರೊಂದಿಗೆ ಕರೆತರಬೇಕು ಎಂದು ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande