
ಕೊಪ್ಪಳ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ವಿಭಾಗೀಯ ಅಂಚೆ ಕಚೇರಿ ವತಿಯಿಂದ ಅಂಚೆ ಇಲಾಖೆ ಮೂಲಕ ಪಿಂಚಣಿ ಪಡೆಯುವ ಪಿಂಚಣಿದಾರರ ಅಹವಾಲು, ದೂರು ಸ್ವೀಕಾರಕ್ಕಾಗಿ ವಿಭಾಗೀಯ ಅಂಚೆ ಕಚೇರಿಯಲ್ಲಿ ಡಿಸೆಂಬರ್ 12 ರಂದು ಸಂಜೆ 4 ಗಂಟೆಗೆ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳು ಇದ್ದಲ್ಲಿ ಅವುಗಳನ್ನು ಅದಾಲತ್ ನಲ್ಲಿ ಆಲಿಸಲಾಗುವುದು.
ನಿವೃತ್ತಿ ಹೊಂದಿದ ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲತ್ ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ.
ಅಂಚೆ ಮೂಲಕ ಪಿಂಚಣಿ ಪಡೆಯುವ ಪಿಂಚಣಿದಾರರು, ಅವಲಂಬಿತರು ಪಿಂಚಣಿ ಅದಾಲತ್‌ನಲ್ಲಿ ಚರ್ಚಿಸುವ ಯಾವುದೇ ತರಹದ ಭತ್ಯೆ ಅಹವಾಲುಗಳಿದ್ದಲ್ಲಿ ಅವುಗಳನ್ನು ಅಂಚೆ ಅಧೀಕ್ಷಕರ ಕಚೇರಿ, ಕೊಪ್ಪಳ ವಿಭಾಗ, ಎಲ್‌ಐಸಿ ಆಫೀಸ್ ಎದುರುಗಡೆ, ಕೊಪ್ಪಳ-583231 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸ : dokoppal.ka@indiapost.gov.in ಗೆ ಡಿಸೆಂಬರ್ 11 ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್