ಸಿಂಧನೂರು, ಮಸ್ಕಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ
ಸಿಂಧನೂರು, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಿಂಧನೂರು, ಮಸ್ಕಿ ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಆಭಿಯಾನ ಯೋಜನೆಯಡಿ ತಾಜಾ ಮೀನು ಮಾರಾಟ ಮಾಡಲು ಜಿಲ್ಲೆಗೆ ನಿಗದಿಯಾಧ ಗುರಿಗಳಾದ ದ್
ಸಿಂಧನೂರು, ಮಸ್ಕಿ ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ


ಸಿಂಧನೂರು, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಿಂಧನೂರು, ಮಸ್ಕಿ ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಆಭಿಯಾನ ಯೋಜನೆಯಡಿ ತಾಜಾ ಮೀನು ಮಾರಾಟ ಮಾಡಲು ಜಿಲ್ಲೆಗೆ ನಿಗದಿಯಾಧ ಗುರಿಗಳಾದ ದ್ವಿಚಕ್ರ ವಾಹನ-23, ತ್ರಿಚಕ್ರ ವಾಹನ-04 ಮತ್ತು ನೇರ ಮೀನು ಮಾರಾಟ-02 ಘಟಕಗಳನ್ನು ಅನುಷ್ಟಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

ಸಿಂಧನೂರು ತಾಲೂಕಿನ ವೀರಾಪೂರು, ಕರಡಚಿಲಮಿ, ಯಾಪಲಪರ್ವಿ, ರಾಗಲಪರ್ವಿ, ಪುಲದಿನ್ನಿ, ಧುಮತಿ, ಹುಲಗುಂಚಿ, ಚಿಂತಮಾನದೊಡ್ಡಿ, ಯದ್ದಲದೊಡ್ಡಿ ಹಾಗೂ ಮಸ್ಕಿ ತಾಲೂಕಿನ ರತ್ನಾಪೂರು, ಗುಂಡ, ಹೊಕ್ರಾಣಿ, ಹೊಗರನಾಳ, ಗುಡಿಹಾಳ, ಬಪ್ಪೂರು, ಮಾಟೂರು, ಚಿಕ್ಕಕಡಬೂರು, ಕ್ಯಾತ್ನಟ್ಟಿ, ಉದ್ಬಾಳ, ದೀನಸಮುದ್ರ, ಪರಾಪೂರು, ನಂಜಲದಿನ್ನಿ, ಹಂಪನಾಳ, ಗುಡಗಲದಿನ್ನಿ, ಹಂಚಿನಾಳ (ಯು), ಕಣ್ಣೂರು, ಹುಲ್ಲುರು, ರಂಗಾಪೂರು, ಮುದ್ದಾಪೂರು, ಕೊಳಬಾಳ, ಗೌಡನಬಾವಿ, ಬೆಳ್ಳಿಗನೂರು, ಸುಲ್ತಾನಾಪೂರು ಮಹಾಂಪೂರು, ಗದ್ರಟಗಿ, ಬೊಗಾಪೂರ, ಬುದ್ದಿನ್ನಿ, ಅಮರಾಪೂರು. ಗ್ರಾಮಗಳ ಆಸಕ್ತ ಅರ್ಜಿದಾರರು ಡಿಸೆಂಬರ್ 24ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ವಿವರಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು ಸಿಂಧನೂರು ಅವರ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಿಂಧನೂರಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande