ನಾಯಿಗಳ ಹಾವಳಿ ತಡೆ : ಪಾಲಿಕೆಯಿಂದ ಸಮನ್ವಯ ಸಭೆ ಡಿ.08ಕ್ಕೆ
ರಾಯಚೂರು, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಮತ್ತು ನಾಯಿಗಳ ಕಲ್ಯಾಣ ಎರಡಕ್ಕೂ ಸಮತೋಲಿತ ಮತ್ತು ಕಾನೂನುಬದ್ಧ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸುಪ್ರೀಂ ಕೋರ್ಟಿನ ನಿ
ನಾಯಿಗಳ ಹಾವಳಿ ತಡೆ : ಪಾಲಿಕೆಯಿಂದ ಸಮನ್ವಯ ಸಭೆ ಡಿ.08ಕ್ಕೆ


ರಾಯಚೂರು, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಮತ್ತು ನಾಯಿಗಳ ಕಲ್ಯಾಣ ಎರಡಕ್ಕೂ ಸಮತೋಲಿತ ಮತ್ತು ಕಾನೂನುಬದ್ಧ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಪಾಲಿಸಲು ಮತ್ತು ಕಾರ್ಯಯೋಜನೆ ರೂಪಿಸುವ ಬಗ್ಗೆ ಚರ್ಚಿಸಲು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿನ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಡಿಸೆಂಬರ್ 8ರ ಬೆಳಿಗ್ಗೆ 11 ಗಂಟೆಗೆ ಸಮನ್ವಯ ಸಭೆ ಹಮ್ಮಿಕೊಳ್ಳಲಾಗಿದೆ.

ಸಭೆಯಲ್ಲಿ, ನಿರಾಶ್ರಿತ ನಾಯಿಗಳನ್ನು ಮಾನವೀಯವಾಗಿ ನಿರ್ವಹಿಸುವ ಮಾರ್ಗಗಳು, ದತ್ತು ಸ್ವೀಕಾರ, ಸೈರಿಲೈಸೇಶನ್/ನ್ಯೂಟರಿಂಗ್ (ಎಬಿಸಿ) ಕಾರ್ಯಕ್ರಮಗಳನ್ನು ಬಲಪಡಿಸುವುದು, ಸಾರ್ವಜನಿಕರಲ್ಲಿ ಮೌಲ್ಯಮಾಪನ ಮತ್ತು ಜಾಗೃತಿ ಮೂಡಿಸುವುದು, ಸ್ಥಳೀಯ ಸರ್ಕಾರ, ಪಶುವೈದ್ಯಕೀಯ ಸೇವೆಗಳು ಮತ್ತು ಸ್ವಯಂಸೇವಕ ಸಂಘಟನೆಗಳ ನಡುವೆ ಸಹಕಾರ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಎಲ್ಲಾ ನೋಂದಾಯಿತ ಮತ್ತು ಸಕ್ರಿಯ ಪ್ರಾಣಿ ಪ್ರೇಮಿ ಸಂಘಟನೆಗಳು, ಪ್ರಾಣಿ ಕಲ್ಯಾಣ ಸಮಿತಿಯ ಸದಸ್ಯರು, ಪಶು ಚಿಕಿತ್ಸಾಲಯಗಳು ಮತ್ತು ಪಶುವೈದ್ಯರು ಹಾಗೂ ಈ ವಿಷಯದಲ್ಲಿ ಆಸಕ್ತಿ ಹೊಂದಿರುವ ನಾಗರಿಕರಿಂದ ಈ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿಲಾಗಿದ್ದು, ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande