ಡಿಸೆಂಬರ್ 9 ರಂದು ಕರಕುಶಲ ಕರ್ಮಿಗಳಿಗೆ ರಾಷ್ಟ್ರಪತಿ ಸನ್ಮಾನ
ನವದೆಹಲಿ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 9 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಕರಕುಶಲ ಪ್ರಶಸ್ತಿ ಮತ್ತು ಶಿಲ್ಪ್ ಗುರು ಪ್ರಶಸ್ತಿಗಳನ್ನು 2023–24 ರ ಅತ್ಯುತ್ತಮ ಕುಶಲಕರ್ಮಿಗಳಿಗೆ ಪ್ರದಾನಿಸಲಿದ್ದಾರೆ. ಜವಳಿ ಸಚಿವಾಲಯದ ಪ್ರಕಾರ, ಇದರ ಉದ್ದೇಶ ಕ
Honour


ನವದೆಹಲಿ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 9 ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಕರಕುಶಲ ಪ್ರಶಸ್ತಿ ಮತ್ತು ಶಿಲ್ಪ್ ಗುರು ಪ್ರಶಸ್ತಿಗಳನ್ನು 2023–24 ರ ಅತ್ಯುತ್ತಮ ಕುಶಲಕರ್ಮಿಗಳಿಗೆ ಪ್ರದಾನಿಸಲಿದ್ದಾರೆ. ಜವಳಿ ಸಚಿವಾಲಯದ ಪ್ರಕಾರ, ಇದರ ಉದ್ದೇಶ ಕುಶಲಕರ್ಮಿಗಳ ಜೀವನೋಪಾಯವನ್ನು ಬಲಪಡಿಸುವುದು ಮತ್ತು ದೇಶದ ಕರಕುಶಲ ಪರಂಪರೆಯನ್ನು ಗೌರವಿಸುವುದು.

ಈ ಕಾರ್ಯಕ್ರಮವು ಡಿಸೆಂಬರ್ 8–14ರ ರಾಷ್ಟ್ರೀಯ ಕರಕುಶಲ ಸಪ್ತಾಹದ ಪ್ರಮುಖ ಭಾಗವಾಗಿದ್ದು, ದೇಶಾದ್ಯಂತ ಕರಕುಶಲ ವಸ್ತುಗಳ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿಹಿಡಿಯುವ ಚಟುವಟಿಕೆಗಳು ನಡೆಯಲಿವೆ. ಜವಳಿ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಹಾಜರಾಗಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande