





ರಾಯಚೂರು, 05 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ ಅವರು ಇತ್ತೀಚೆಗೆ ರಾಯಚೂರು ಪ್ರವಾಸ ಕೈಗೊಂಡ ವೇಳೆ ನಾನಾ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯ ಪೂರ್ವದಲ್ಲಿ ಮೊದಲಿಗೆ ಎ.ಹೆಚ್.ಪಿ ಮನೆಗಳ ಹಕ್ಕುಪತ್ರವನ್ನು ಲಾಯುಕ್ ಅಂಜುಮ್ ಗಂಡ ಮಸಿಂ ಅಕ್ರಮನ್, ಮಹಾದೇವಿ ಗಂಡ ಯುವರಾಜ್, ಪರಶುರಾಮ ತಂದೆ ದೊಡ್ಡ ಸುಗಪ್ಪ, ಶೇಖರ ತಂದೆ ಯಸುದಾಸ್, ನಜೀಯಾ ಬೇಗಂ ಗಂಡ ಮೌಲಾ ಅವರಿಗೆ ವಿತರಣೆ ಮಾಡಲಾಯಿತು.
ಶಿಲ್ಪ ತಂದೆ ಕೆ.ಜಯಪ್ರಕಾಶ್, ಮಮತಾ ತಂದೆ ಶಿವರಾಜ, ಸುಮತಿ ಗಂಡ ಸೂಗೂರಪ್ಪ, ಲಕ್ಷ್ಮೀ ಗಂಡ ನರಸಿಂಹ ಹಾಗೂ ವಿದ್ಯಾ ಗಂಡ ವಿನೋದ್ ಅವರಿಗೆ ಕಮ್ಯುನಿಟಿ ಮೊಬೈಲ್ ಲೈಜರ್ ಆದೇಶದ ಪತ್ರ ವಿತರಣೆ ಮಾಡಲಾಯಿತು.
ಲಲಿತಾ / ಮಲ್ಲಿಕಾರ್ಜುನ, ವೆಂಕಟೇಶ / ಮಲ್ಲಿಕಾರ್ಜುನ, ಕಮಲಾಬಾಯಿ ಗಂಡ ಶಿವಗೇಣಿ, ಪದ್ಮಾ ಗಂಡ ಆಂಜನೇಯ್ಯ ಹಾಗೂ ಹನುಮಂತ ತಂದೆ ನರಸಿಂಹ ಅವರಿಗೆ ಕಂದಾಯ ಆದಾಲತ್ ನಲ್ಲಿ ಎಕ್ಸ್ಪ್ರೆಸ್ ಖಾತ ವಿತರಣೆ ಮಾಡಲಾಯಿತು.
ಅತ್ಯುತ್ತಮವಾಗಿ ತೆರಿಗೆ ಪಾವತಿಸಿದ್ದಕ್ಕೆ ರಾಯಚೂರ ಸಿಟಿಯ ನಾಗರಿಕರಾದ ಆಂಜನೇಯ, ತ್ರಿವಿಕ್ರಮ ಜೋಶಿ, ರಾಘವೇಂದ್ರ ಕಮಲಾಪುರ, ಅರ್ಪತಾ ಅಗರವಾಲ್, ಗೋವಿಂದ ನಾರಾಯಣ, ಪ್ರಕಾಶ ಮುಂಡಾ0ಡ ಅವರಿಗೆ ಗೌರವಿಸಲಾಯಿತು.
ಅತ್ಯುತ್ತಮ ಕರವಸೂಲಿಗಾರರಾದ ಶಾಹೀದಾ ಬೇಗಂ, ಬಸವರಾಜ, ವಿನಯ ಕುಮಾರ್, ರಾಜು ಹಾಗೂ ನಾರಾಯಣ ಅವರಿಗೆ ಸಹ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್