ಇಂಡಿಗೋ ಕಾರ್ಯಾಚರಣಾ ಬಿಕ್ಕಟ್ಟು ತೀವ್ರ ; 500ಕ್ಕೂ ಹೆಚ್ಚು ವಿಮಾನ ರದ್ದು
ನವದೆಹಲಿ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಕಳೆದ ಮೂರು ದಿನಗಳಿಂದ ಎದುರಿಸುತ್ತಿರುವ ಕಾರ್ಯಾಚರಣಾ ಬಿಕ್ಕಟ್ಟು ಇಂದು ಕೂಡ ಮುಂದುವರಿದಿದೆ. ಸಿಬ್ಬಂದಿ ಕೊರತೆ ಮತ್ತು ಆಂತರಿಕ ಯೋಜನಾ ದೋಷಗಳ ಕಾರಣದಿಂದ, ದೇಶದ ವಿಮಾನ ನಿಲ್ದಾಣಗಳಲ್ಲಿ 550 ಕ್ಕೂ
Indigo


ನವದೆಹಲಿ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಕಳೆದ ಮೂರು ದಿನಗಳಿಂದ ಎದುರಿಸುತ್ತಿರುವ ಕಾರ್ಯಾಚರಣಾ ಬಿಕ್ಕಟ್ಟು ಇಂದು ಕೂಡ ಮುಂದುವರಿದಿದೆ.

ಸಿಬ್ಬಂದಿ ಕೊರತೆ ಮತ್ತು ಆಂತರಿಕ ಯೋಜನಾ ದೋಷಗಳ ಕಾರಣದಿಂದ, ದೇಶದ ವಿಮಾನ ನಿಲ್ದಾಣಗಳಲ್ಲಿ 550 ಕ್ಕೂ ಹೆಚ್ಚು ವಿಮಾನಗಳು ರದ್ದುಗೊಳ್ಳುವಂತೆ ಮಾಡಿದ ಪರಿಣಾಮ ಸಾವಿರಾರು ಪ್ರಯಾಣಿಕರು ಗಂಭೀರ ತೊಂದರೆ ಅನುಭವಿಸಿದ್ದಾರೆ.

ಗುರುವಾರ ಒಂದೇ ದಿನ ದೇಶದ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ, ಜೈಪುರ, ಇಂದೋರ್ ಸೇರಿದಂತೆ 10 ಕ್ಕೂ ಹೆಚ್ಚು ಪ್ರಮುಖ ನಗರಗಳಿಂದ ಇಂಡಿಗೋ ವಿಮಾನಗಳು ರದ್ದುಗೊಂಡಿದ್ದು, ಟರ್ಮಿನಲ್‌ಗಳಲ್ಲಿ ಪ್ರಯಾಣಿಕರ ಗದ್ದಲ, ಅಸಮಾಧಾನ ಮತ್ತು ದೀರ್ಘ ಸಾಲುಗಳು ಕಾಣಿಸಿಕೊಂಡಿವೆ.

ಇಂಡಿಗೋ ಸಂಸ್ಥೆಯೇ ಸಿಬ್ಬಂದಿ ಸಮಸ್ಯೆಗಳನ್ನು ಸಮರ್ಪಕವಾಗಿ ಅಂದಾಜಿಸಲು ವಿಫಲವಾದುದು ಹಾಗೂ ಯೋಜನಾ ದೋಷಗಳು ನಡೆದಿರುವುದನ್ನು ಒಪ್ಪಿಕೊಂಡಿದ್ದು, ಪರಿಸ್ಥಿತಿಯನ್ನು ಶೀಘ್ರ ಸಾಮಾನ್ಯಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ. ಆದರೆ ಬಿಕ್ಕಟ್ಟು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಅಧಿಕೃತ ವಲಯಗಳು ಸೂಚಿಸುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande