ರಾಜಸ್ಥಾನ ಹೈಕೋರ್ಟ್‌ಗೆ ಬಾಂಬ್ ಬೆದರಿಕೆ ; ಆವರಣ ತೆರವು
ಜೈಪುರ, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶುಕ್ರವಾರ ಬೆಳಿಗ್ಗೆ ಬಂದ ಬಾಂಬ್ ಬೆದರಿಕೆ ಇಮೇಲ್‌ನ ನಂತರ ಜೈಪುರದಲ್ಲಿರುವ ರಾಜಸ್ಥಾನ ಹೈಕೋರ್ಟ್‌ ಆವರಣವನ್ನು ತಕ್ಷಣವೇ ತೆರವುಗೊಳಿಸಲಾಯಿತು. ರಿಜಿಸ್ಟ್ರಾರ್‌ ಅವರ ಅಧಿಕೃತ ಐಡಿಗೆ ಬಂದ ಇಮೇಲ್ ಬಳಿಕ ಕಟ್ಟಡದೊಳಗಿನ ಎಲ್ಲಾ ವಿಚಾರಣೆಗಳನ್ನು ಮುಂದೂಡಲಾಗಿದ್
Bomb threat


ಜೈಪುರ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶುಕ್ರವಾರ ಬೆಳಿಗ್ಗೆ ಬಂದ ಬಾಂಬ್ ಬೆದರಿಕೆ ಇಮೇಲ್‌ನ ನಂತರ ಜೈಪುರದಲ್ಲಿರುವ ರಾಜಸ್ಥಾನ ಹೈಕೋರ್ಟ್‌ ಆವರಣವನ್ನು ತಕ್ಷಣವೇ ತೆರವುಗೊಳಿಸಲಾಯಿತು. ರಿಜಿಸ್ಟ್ರಾರ್‌ ಅವರ ಅಧಿಕೃತ ಐಡಿಗೆ ಬಂದ ಇಮೇಲ್ ಬಳಿಕ ಕಟ್ಟಡದೊಳಗಿನ ಎಲ್ಲಾ ವಿಚಾರಣೆಗಳನ್ನು ಮುಂದೂಡಲಾಗಿದ್ದು, ಭದ್ರತೆ ಬಿಗಿಗೊಳಿಸಲಾಗಿದೆ.

ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಹೈಕೋರ್ಟ್‌ ಆವರಣವನ್ನು ಸಂಪೂರ್ಣವಾಗಿ ಶೋಧಿಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಆವರಣಕ್ಕೆ ಪ್ರವೇಶಿಸುವ ಅಥವಾ ಹೊರಡುವ ಎಲ್ಲರಿಗೂ ಕಟ್ಟುನಿಟ್ಟಿನ ತಪಾಸಣೆ ಜಾರಿಯಲ್ಲಿದೆ.

ಇತ್ತೀಚೆಗೆ ಅಜ್ಮೀರ್ ದರ್ಗಾ ಷರೀಫ್ ಮತ್ತು ಕಲೆಕ್ಟರೇಟ್‌ಗೂ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದರೂ ತನಿಖೆಯಲ್ಲಿ ಅದು ಸುಳ್ಳು ಎನಿಸಿತ್ತು. ಅಕ್ಟೋಬರ್ 31ರಲ್ಲಿಯೂ ಹೈಕೋರ್ಟ್‌ ಬೆದರಿಕೆ ಪ್ರಕರಣ ವರದಿಯಾಗಿತ್ತು. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande