ಮೂರು ದಿನ ಅಮಿತ್ ಶಾ, ಗುಜರಾತ್ ಪ್ರವಾಸ
ಅಹಮದಾಬಾದ್, 05 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ ಅವರು ಅಹಮದಾಬಾದ್–ಗಾಂಧಿನಗರದಲ್ಲಿ ₹1,506 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಸೇರಿದಂತೆ 20 ಕ್ಕೂ ಹೆಚ್ಚು ಕಾರ್ಯಕ್ರಮ
Amit sha


ಅಹಮದಾಬಾದ್, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ ಅವರು ಅಹಮದಾಬಾದ್–ಗಾಂಧಿನಗರದಲ್ಲಿ ₹1,506 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಸೇರಿದಂತೆ 20 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇಂದು ಅವರು ವಸ್ತ್ರಾಪುರ ಕೊಳದ ನವೀಕರಣ, ವಿವಿಧ ನಗರಾಭಿವೃದ್ಧಿ ಕಾಮಗಾರಿಗಳು, ಗೋಟಾ ದೇವನಗರದ ಮಿನಿ ಕ್ರೀಡಾ ಸಂಕೀರ್ಣ, ಪಿಎಂ‌ಎವೈ ಅಡಿಯಲ್ಲಿ 1,370 ಮನೆಗಳ ಲೋಕಾರ್ಪಣೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸಾಯಂಕಾಲ ಸ್ವದೇಶೋತ್ಸವ, ಅರ್ಥ್ ಸಮ್ಮಿಟ್ 2025 ಹಾಗೂ ಅಹಮದಾಬಾದ್ ಶಾಪಿಂಗ್ ಫೆಸ್ಟಿವಲ್ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.

ಡಿಸೆಂಬರ್ 6ರಂದು ಅವರು ಬನಾಸ್ ಡೈರಿಯ ಜೈವಿಕ-CNG ಮತ್ತು ಪುಡಿ ಘಟಕಗಳಿಗೆ ಶಿಲಾನ್ಯಾಸ ಮಾಡಿ, ಮಹಿಳಾ ಹಾಲು ಉತ್ಪಾದಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಡಿಸೆಂಬರ್ 7ರಂದು ಗೋಟಾದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಆನಂದಿಬೆನ್ ಪಟೇಲ್ ಅವರ ಪುಸ್ತಕ ಬಿಡುಗಡೆ ಹಾಗೂ ಸಾಬರಮತಿ ರಿವರ್‌ಫ್ರಂಟ್‌ನಲ್ಲಿ ಪ್ರಮುಖ ವರ್ಣಿ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande