ದೆಹಲಿಯಲ್ಲಿ ಇಂದು 23ನೇ ಭಾರತ–ರಷ್ಯಾ ಶೃಂಗಸಭೆ
ಸ್
Putin


ನವದೆಹಲಿ, 05 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತ–ರಷ್ಯಾ ದ್ವಿಪಕ್ಷೀಯ ಸಂಬಂಧಗಳಿಗೆ ನಿರ್ಣಾಯಕವಾಗಿರುವ 23ನೇ ವಾರ್ಷಿಕ ಶೃಂಗಸಭೆ ಇಂದು ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ನಡೆಯಲಿದೆ.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಗುರುವಾರ ಸಂಜೆ ದೆಹಲಿಯಲ್ಲಿ ಸ್ವಾಗತಿಸಲಾಯಿತು. ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಪುಟಿನ್ ಒಂದೇ ವಾಹನದಲ್ಲಿ ಪ್ರಧಾನಮಂತ್ರಿಗಳ ನಿವಾಸಕ್ಕೆ ತೆರಳಿದರು.

ಇಂದು ಬೆಳಿಗ್ಗೆ 11:50ಕ್ಕೆ ಆರಂಭವಾಗಲಿರುವ ಶೃಂಗಸಭೆಯಲ್ಲಿ ರಕ್ಷಣಾ, ಇಂಧನ, ತಂತ್ರಜ್ಞಾನ, ವ್ಯಾಪಾರ ಸೇರಿದಂತೆ ಪರಸ್ಪರ ಆಸಕ್ತಿಯ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಒಪ್ಪಂದಗಳಿಗೆ ವೇದಿಕೆ ಸಿಗಲಿದೆ ಎಂದು ವಲಯಗಳು ನಿರೀಕ್ಷಿಸುತ್ತಿವೆ. ವಿಶೇಷವಾಗಿ, ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು, ಭಾರತ–ರಷ್ಯಾ ವ್ಯಾಪಾರವನ್ನು ಬಾಹ್ಯ ಒತ್ತಡಗಳಿಂದ ದೂರವಿಟ್ಟು ಸುಗಮಗೊಳಿಸುವುದು, ಹಾಗೂ ಸ್ಮಾಲ್ ಮ್ಯಾಡ್ಯೂಲರ್ ನ್ಯೂಕ್ಲಿಯರ್ ರಿಯಾಕ್ಟರ್‌ಗಳು ಸೇರಿದಂತೆ ಇಂಧನ ಕ್ಷೇತ್ರದ ಹೊಸ ಸಹಕಾರ ಸಾಧ್ಯತೆಗಳನ್ನು ಪರಿಗಣಿಸುವುದು ಸಭೆಯ ಮುಖ್ಯ ಅಜೆಂಡಾಗಿವೆ.

ಈ ಶೃಂಗಸಭೆಯನ್ನು ಅಮೆರಿಕಾ, ಚೀನಾ, ಪಾಕಿಸ್ತಾನ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವಿನ ಆತ್ಮೀಯ ಸಂಬಂಧಗಳ ಬಗ್ಗೆ ಜಾಗತಿಕ ಮಾಧ್ಯಮವೂ ವಿಶೇಷವಾಗಿ ಚರ್ಚಿಸುತ್ತಿದೆ.

ರಷ್ಯಾದಿಂದ ತೈಲ ಆಮದು ಮಾಡುವ ಭಾರತದ ಮೇಲೆ ಅಮೆರಿಕ ಇತ್ತೀಚೆಗೆ 50% ಸುಂಕ ವಿಧಿಸಿರುವುದರಿಂದ ಭಾರತ–ಅಮೆರಿಕಾ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲೇ ಈ ಶೃಂಗಸಭೆ ನಡೆಯುತ್ತಿರುವುದು ಗಮನಾರ್ಹ. ಜೊತೆಗೆ, ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕಾ ನಡೆಸುತ್ತಿರುವ ಮಧ್ಯಸ್ಥಿಕೆ ಜಾಗತಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಿರುವ ಹಿನ್ನಲೆಯಲ್ಲಿ, ಇಂದು ಎರಡೂ ದೇಶಗಳು ತಲುಪುವ ನಿರ್ಧಾರಗಳು ವಿಶ್ವದ ಗಮನಕ್ಕೆ ಒಳಪಡುವ ಸಾಧ್ಯತೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande