ಶ್ರೀಲಂಕಾ ವಿರುದ್ಧದ ಟಿ೨೦ ಸರಣಿ ವಶಪಡಿಸಿಕೊಂಡ ಭಾರತ
ತಿರುವನಂತಪುರಂ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾವನ್ನು ಐದನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 15 ರನ್‌ಗಳಿಂದ ಸೋಲಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 5–0 ಅಂತರದಲ್ಲಿ ವಶಪಡಿಸಿಕೊಂಡಿತು. ಇದು ಟಿ20 ಸರಣಿಯಲ್ಲಿ ಭಾರತ ತಂಡ ಸಾಧಿಸಿದ ಮ
Wt20


ತಿರುವನಂತಪುರಂ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾವನ್ನು ಐದನೇ ಹಾಗೂ ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 15 ರನ್‌ಗಳಿಂದ ಸೋಲಿಸುವ ಮೂಲಕ ಐದು ಪಂದ್ಯಗಳ ಸರಣಿಯನ್ನು 5–0 ಅಂತರದಲ್ಲಿ ವಶಪಡಿಸಿಕೊಂಡಿತು. ಇದು ಟಿ20 ಸರಣಿಯಲ್ಲಿ ಭಾರತ ತಂಡ ಸಾಧಿಸಿದ ಮೂರನೇ ವೈಟ್‌ವಾಶ್ ಆಗಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ವಿರುದ್ಧವೂ ಇದೇ ಸಾಧನೆ ಮಾಡಿತ್ತು.

ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್‌ಗಳ ಗುರಿ ನಿಗದಿಪಡಿಸಿತು. ಪ್ರತಿಯಾಗಿ ಶ್ರೀಲಂಕಾ 7 ವಿಕೆಟ್‌ಗೆ 160 ರನ್ ಗಳಿಸಿ 15 ರನ್‌ಗಳಿಂದ ಸೋಲು ಅನುಭವಿಸಿತು.

ಭಾರತದ ಪರ ಹರ್ಮನ್‌ಪ್ರೀತ್ ಕೌರ್ 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 68 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಅರುಂಧತಿ ರೆಡ್ಡಿ 27 ರನ್ ಮತ್ತು ಅಮನ್‌ಜೋತ್ ಕೌರ್ 21 ರನ್ ಗಳಿಸಿದರು. ಶ್ರೀಲಂಕಾ ಪರ ಚಮರಿ ಅಟಪಟ್ಟು, ಕವಿಶಾ ದಿಲ್ಹಾರಿ ಮತ್ತು ರಶ್ಮಿಕಾ ಸೇವಂಡಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಎರಡನೇ ಓವರ್‌ನಲ್ಲೇ ನಾಯಕಿ ಚಮರಿ ಅಟಪಟ್ಟು ಔಟಾದರು. ಬಳಿಕ ಹಸಿನಿ ಪೆರೆರಾ ಮತ್ತು ಇಮೇಶಾ ದುಲಾನಿ 79 ರನ್‌ಗಳ ಮಹತ್ವದ ಪಾಲುದಾರಿಕೆ ನೀಡಿದರು. ಇಮೇಶಾ ದುಲಾನಿ ಅರ್ಧಶತಕ ಗಳಿಸಿದರೆ, ಹಸಿನಿ ಪೆರೆರಾ 65 ರನ್ ಗಳಿಸಿದರು. ಆದರೆ ಇವರಿಬ್ಬರು ಔಟಾದ ನಂತರ ಶ್ರೀಲಂಕಾ ಇನ್ನಿಂಗ್ಸ್ ಕುಸಿದುಬಿದ್ದು ಗೆಲುವಿನಿಂದ ವಂಚಿತವಾಯಿತು.

ಭಾರತದ ಪರ ಶ್ರೀ ಚರಣಿ, ಸ್ನೇಹ್ ರಾಣಾ, ವೈಷ್ಣವಿ ಶರ್ಮಾ, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ ಮತ್ತು ಅಮನ್‌ಜೋತ್ ಕೌರ್ ತಲಾ ಒಂದು ವಿಕೆಟ್ ಪಡೆದರೆ, ಒಬ್ಬ ಬ್ಯಾಟ್ಸ್‌ಮನ್ ರನ್‌ಔಟ್ ಆದರು.

ಸರಣಿಯ ಮೊದಲ ಎರಡು ಪಂದ್ಯಗಳು ವಿಶಾಖಪಟ್ಟಣದಲ್ಲಿ, ಉಳಿದ ಮೂರು ಪಂದ್ಯಗಳು ತಿರುವನಂತಪುರದಲ್ಲಿ ನಡೆದವು. ಭಾರತ ಮೊದಲ ಮೂರು ಪಂದ್ಯಗಳನ್ನು ಕ್ರಮವಾಗಿ 8, 7 ಮತ್ತು 8 ವಿಕೆಟ್‌ಗಳಿಂದ ಗೆದ್ದರೆ, ನಾಲ್ಕನೇ ಪಂದ್ಯವನ್ನು 30 ರನ್‌ಗಳಿಂದ ಹಾಗೂ ಐದನೇ ಪಂದ್ಯವನ್ನು 15 ರನ್‌ಗಳಿಂದ ಗೆದ್ದಿತು.

ಸರಣಿಯಲ್ಲಿ ಶಫಾಲಿ ವರ್ಮಾ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಅವರು ಐದು ಪಂದ್ಯಗಳಲ್ಲಿ 80.33 ಸರಾಸರಿಯಲ್ಲಿ 36 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಒಟ್ಟು 241 ರನ್ ಗಳಿಸಿದರು. ಶ್ರೀಲಂಕಾ ಪರ ಹಸಿನಿ ಪೆರೆರಾ 165 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು.

ಬೌಲಿಂಗ್ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ, ವೈಷ್ಣವಿ ಶರ್ಮಾ ಹಾಗೂ ಶ್ರೀ ಚರಣಿ ತಲಾ ಐದು ವಿಕೆಟ್‌ಗಳನ್ನು ಪಡೆದರೆ, ಶ್ರೀಲಂಕಾದ ಕವಿಶಾ ದಿಲ್ಹಾರಿ ಐದು ವಿಕೆಟ್‌ಗಳೊಂದಿಗೆ ತಂಡದ ಯಶಸ್ವಿ ಬೌಲರ್ ಆದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande