ವೀರಬಾಲ ದಿನಾಚರಣೆ ; ಗುರು ಗಾನ ಲಹರಿ
ಕೊಪ್ಪಳ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಗುರುಕುಲ ಸಂಗೀತ ಕಲಾ ಸಂಸ್ಥೆಯು ಕೊಪ್ಪಳದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ಆವರಣದಲ್ಲಿ ನಡೆದ ವೀರಬಾಲ ದಿನಾಚರಣೆಯ ಅಂಗವಾಗಿ ಗುರು ಗಾನ ಲಹರಿ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ವೆಂಕಟೇಶ ಪಾಟೀಲ
ವೀರಬಾಲ ದಿನಾಚರಣೆ : ಗುರು ಗಾನ ಲಹರಿ


ವೀರಬಾಲ ದಿನಾಚರಣೆ : ಗುರು ಗಾನ ಲಹರಿ


ವೀರಬಾಲ ದಿನಾಚರಣೆ : ಗುರು ಗಾನ ಲಹರಿ


ವೀರಬಾಲ ದಿನಾಚರಣೆ : ಗುರು ಗಾನ ಲಹರಿ


ಕೊಪ್ಪಳ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಗುರುಕುಲ ಸಂಗೀತ ಕಲಾ ಸಂಸ್ಥೆಯು ಕೊಪ್ಪಳದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ಆವರಣದಲ್ಲಿ ನಡೆದ ವೀರಬಾಲ ದಿನಾಚರಣೆಯ ಅಂಗವಾಗಿ ಗುರು ಗಾನ ಲಹರಿ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ಶಿಕ್ಷಕರಾದ ವೆಂಕಟೇಶ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ದಿನದಿತ್ಯದ ಬದುಕಿನಲ್ಲಿ ಸರ್ವರೂ ಯಾಂತ್ರಿಕವಾಗಿ ಬದುಕುತ್ತಿದ್ದಂತೆ ಭಾಸವಾಗಿದೆ ಶಾಲೆಗಳಲ್ಲಿಯೂ ಕೂಡ ಪಠ್ಯೇತರ ಚಟುವಟಿಕೆಗಳ ಕೊರತೆಯಿಂದಾಗಿ ಶಿಕ್ಷಕರು ವಿದ್ಯಾರ್ಥಿಗಳು ಒತ್ತಡದ ಬದುಕಿನಲ್ಲಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮನಸ್ಸಿಗೆ ಮುಧ ನೀಡುವಂತಹ ಸಂಗೀತ ಸಾಹಿತ್ಯ ಕಲೆಗಳ ಆಸ್ವಾದನೆ ಪಡೆಯಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಶಾಲೆಗಳಲ್ಲಿ ಇಂತಹ ಸಂಸ್ಥೆಗಳಿಂದ ಅನುμÁ್ಠನಗೊಂಡರೆ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಒಂದು ಹೊಸ ರೀತಿಯ ಹುಮ್ಮಸ್ಸನ್ನು ತರುವಲ್ಲಿ ದಾರಿಯಾಗುತ್ತದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯರಾದ ವೀರಯ್ಯ ಸೂಡಿಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಎಷ್ಟು ರೋಗಗಳಿಗೆ ವಾಸಿ ಮಾಡಲು ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಸಂಗೀತ ಒಂದು ಒಳ್ಳೆಯ ಚಿಕಿತ್ಸೆಯಾಗಿದೆ ಎಂದು ದೃಢಪಟ್ಟಿದೆ ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಶಾಲೆ ಟ್ಯೂಷನ್ ಓದು ಬರಹ ಹೀಗೆ ಇತ್ಯಾದಿ ಅತಿ ಹೆಚ್ಚು ಸಮಯ ಅದರಲ್ಲಿಯೇ ಕಳೆದು ಹೋಗುತ್ತಿರುತ್ತದೆ ಆಗಾಗ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ಒಂದು ಸುಸಂಸ್ಕøತ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಲೆಯ ಶಿಕ್ಷಕ ವೃಂದದವರಾದ ದೇವಪ್ಪ ಕೆ, ಸುನಿತಾ ಎಲೆಗಾರ, ದೀಪ ಸಾಹುಕಾರ್, ಕೃಷ್ಣಮೂರ್ತಿ, ಜಗನ್ನಾಥ ಮತ್ತಿತರರು ಉಪಸ್ಥಿತರಿದ್ದರು.

ಭೂಮಿಕಾ ಕಲಾಲ ಅವರ ಭರತನಾಟ್ಯ, ರಾಘವೇಂದ್ರ ಗಂಗಾವತಿಯವರ ತಬಲಾ ಸೋಲೋ, ಲತಾಮೇಟಿ ಅವರ ಸುಗಮ ಸಂಗೀತ, ಅಲ್ಲಾಭಕ್ಷಿ ವಾಲಿಕಾರರ ಜಾನಪದ ಸಂಗೀತ, ಶಿವರಾಜಕುಮಾರ ಅವರ ಬಾನ್ಸೂರಿ ವಾದನ, ಕೀರ್ತಿಮೇಟಿ ಅವರ ಭಕ್ತಿ ಸಂಗೀತ, ವಿಜಯಲಕ್ಷ್ಮಿ ನಾಗರಾಜರ ಭಾವಗೀತೆಗಳು ವಿದ್ಯಾರ್ಥಿಗಳಿಗೆ ಸಂಗೀತದ ರಸದೌತಣವನ್ನು ಉಣಬಡಿಸಿದವು.

ವಾದ್ಯ ವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ಯಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿಧಮ ಪ್ಯಾಡನಲ್ಲಿ ಸಂಜನ ಬೆಲ್ಲದ ಸಾಥ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande