
ಬಳ್ಳಾರಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಅಲ್ಲೀಪುರ ಮಹಾದೇವತಾತನವರ ಶ್ರೀಮಠದ ಮಹಾರಥೋತ್ಸವವು ಡಿಸೆಂಬರ್ 30ರ ಮಂಗಳವಾರ ಸಂಜೆ 4.40 ಕ್ಕೆ ನೆರವೇರಲಿದೆ. ಡಿಸೆಂಬರ್ 31ರ ಬುಧವಾರ ಸಂಜೆ 4 ಗಂಟೆಗೆ ಶ್ರೀಮಠದ ಆವರಣದಲ್ಲಿ ಕಡುಬಿನ ಕಾಳಗ ನಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಆರ್.ಎಚ್.ಎಂ. ಚನ್ನಬಸವಸ್ವಾಮಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಡಿಸೆಂಬರ್ 30ರ ಮಂಗಳವಾರ ಬ್ರಾಹ್ಮೀ ಮುಹೂರ್ತದಲ್ಲಿ ಮಂಗಲ ಕಲಶ ಹಾಗೂ ವೀರಗಾಸೆ ನೃತ್ಯದೊಂದಿಗೆ ಗಂಗೆಯನ್ನು ತಂದು ಬೆಳಗ್ಗೆ 5 ಘಂಟೆಗೆ ಶ್ರೀ ಮಹಾದೇವತಾತನವರ ಮಡಿತೇರು ಎಳೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 29ರ ರಾತ್ರಿಯಿಂದ ಅಲ್ಲೀಪುರದ ಶ್ರೀ ಆಂಜನೇಯಸ್ವಾಮಿ ಭಜನಾ ಮಂಡಳಿ, ಶ್ರೀಧರಗಡ್ಡೆಯ ಶ್ರೀ ಬಸವೇಶ್ವರ ಯುವಕ ಸಂಘ, ಬಲ್ಲನಗುಡ್ಡದ ಶ್ರೀ ಹರ್ಲಾಪುರ ಲಿಂ. ತೋಟಪ್ಪಜ್ಜ ರವರ ಶಿಷ್ಯವೃಂದ, ಕೊಳಗಲ್ಲುನ ಶ್ರೀ ಶಿವರಾಜಧೂತರ ಭಜನ ಮಂಡಳಿ ಮತ್ತು ಎರ್ರಿತಾತ ಭಜನಾ ಮಂಡಳಿ, ಕರ್ಚೇಡು ಗ್ರಾಮದ ಶ್ರೀ ಮಲ್ಲೇಶ್ವರ ಸಂಘ ಭಜನಾ ಮಂಡಳಿ ಮತ್ತು ಸಂಗನಕಲ್ಲು ಗ್ರಾಮದ ಶ್ರೀ ಸಂಗಮೇಶ್ವರ ಭಜನ ಮಂಡಳಿಯವರಿಂದ ಭಜನೆ ನಡೆಯಲಿದೆ. ನಂತರ, ಮಡಿತೇರನ್ನು ಎಳೆಯಲಾಗುತ್ತದೆ.
ಮಹಾರಥೋತ್ಸವದ ಅಂಗವಾಗಿ ದಿನಾಂಕ ಡಿಸೆಂಬರ್ 21 ರಿಂದ ನಡೆಯುತ್ತಿರುವ `ಶ್ರೀ ಗುರುಕೊಟ್ಟೂರು ಬಸವೇಶ್ವರ’ ಪುರಾಣ ಪ್ರವಚನವು ಡಿಸೆಂಬರ್ 29 ರಂದು ಸಂಜೆ ಸಮಾರೋಪಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್