
ಬಳ್ಳಾರಿ, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹರಿ ಸರ್ವೋತ್ತಮ, ವಾಯು ಜೀವೋತ್ತಮ, ಶ್ರೀ ಮೂಲರಾಮೋ ವಿಜಯತೇ ಎಂದು ಸಂಕಲ್ಪಿಸುತ್ತ ಪ್ರತಿ ದಿನ ಲೋಕ ಕಲ್ಯಾಣ ಕಾರ್ಯಕ್ಕೆ ಎಳಸುತ್ತಿರುವ ಮಧ್ವ ವಿಜಯ ಪುರಸ್ಕೃತ ಜ್ಯೋತಿಷ್ಯ ರತ್ನ ಗುರುರಾಜ ಕುಲಕರ್ಣಿ ವಿರಚಿತ ಶ್ರೀ ಗೌತಮ ಸೂರ್ಯ ಸಿದ್ಧಾಂತ ದಿನದರ್ಶಿಕೆಯನ್ನು ನ್ಯಾಯಾಧೀಶರಾದ ವಾಸುದೇವ ಆರ್.ಗುಡಿ ಇವರು ನಾಳೆ ಡಿ.28 ರಂದು ಬಿಡುಗಡೆಗೊಳಿಸಲಿದ್ದಾರೆ.
ಶ್ರೀ ಸತ್ಯನಾರಾಯಣ ಪೇಟೆಯ ಶ್ರೀ ಶನೇಶ್ವರ ಗುಡಿಯಲ್ಲಿ ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ೧೯೪೭ನೇ ಶಕೆ ಪೌಪ್ಯ ಶುದ್ಧ ಅಷ್ಟಮಿ ಬೆಳಿಗ್ಗೆ ೧೦-೩೦ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಂಡಿತ ಗುರುರಾಜಾಚಾರ್ ಬದರಿನಾರಾಯಣ ಗುಡಿ ಇವರು ದಿನದರ್ಶಿಕೆಯ ಪರಿಚಯ ಮಾಡಿಕೊಡಲಿದ್ದಾರೆ. ಆರಂಭದಲ್ಲಿ ಬೆ.೧೦.೪೫ ಕ್ಕೆ ಶಿಲ್ಪ ಜಡೇಶ ಇವರು ದೇವರ ಪ್ರಾರ್ಥನೆ ಮಾಡಲಿದ್ದು, ಕೆ. ವಿನ್ಮಯಿ, ಅವನಿ ಗಂಗಾವತಿ ಇವರು ಭರತನಾಟ್ಯ ಪ್ರದರ್ಶಿಸಲಿದ್ದಾರೆ.
೧೧.೩೦ ಕ್ಕೆ ನ್ಯಾಯಾಧೀಶರಾದ ವಾಸುದೇವ ಆರ್. ಗುಡಿ ಇವರಿಗೆ ವಿಶ್ರಾಂತ ಪ್ರಾಚಾರ್ಯರಾದ ಕೆ.ಹೆಚ್.ಹರಿಕುಮಾರ್ ಇವರು ಸನ್ಮಾನಿಸಲಿದ್ದಾರೆ. ೧೧.೪೫ ಕ್ಕೆ ಸುನಿತಾ ಕೊಳಗಲ್ ಮತ್ತು ಡಾ. ರಾಮ್ ಕಿರಣ್ ಕೊಳಗಲ್ ಇವರಿಂದ ವೀಣಾವಾದನ ಇರಲಿದೆ. ಶ್ರೀ ಮೇಧಾ ಸಂಗೀತ ಮತ್ತು ಪ್ರದರ್ಶನ ಕಲಾ ಕಾಲೇಜು, ಹರ್ಷಚಾರ್ ಇವರಿಂದ ತಬಲಾ ವಾದನವಿದೆ. ೧೨.೧೫ ರಿಂದ ಕುಮಾರಿ ಸ್ಮೃತಿ ದೇಸಾಯಿ ಇವರಿಂದ ದಾಸವಾಣಿ ಕಾರ್ಯಕ್ರಮ ಇರಲಿದ್ದು, ತಬಲ ಪವಮಾನ ಅರಳಿಕಟ್ಟೆ, ಹಾರ್‌ಮೋನಿಯಂ, ಕು.ಸೌ. ಪದ್ಮಜಾ ಅರಳಿಕಟ್ಟೆ ಇವರಿಂದ ಜೊತೆಗೆ ವಿಜಯಲಕ್ಷ್ಮಿ ಭೀಮರಾವ ಕುಲಕರ್ಣಿ ಇವರಿ ಭಕ್ತಿ ಗೀತೆ ಹಾಡಲಿದ್ದಾರೆ. ಎಲ್ಲಾ ಭಜನಾ ಮಂಡಳಿ ಯಿಂದ ಸಾಮೂಹಿಕ ಗೀತೆಗಳು ಜರುಗಲಿವೆ.ನಿರೂಪಣೆಯನ್ನು ಇಂಜನಿಯರಾದ ಸಂಜೀವ್ ಪ್ರಸಾದ್, ಶಿಕ್ಷಕಿ ವಸುಧ ಶಿಲ್ಪ ಜಡೇಶ್ ಇವರು ನಡೆಸಿಕೊಡಲಿದ್ದಾರೆ.
ಶನಿವಾರ ರಾಘವ ಕಲಾ ಮಂದಿರದಲ್ಲಿ ಶ್ರೀ ಗೌತಮ ಸೂರ್ಯ ಸಿದ್ಧಾಂತ ಪಂಚಾ0ಗ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಡಾ.ವಿದ್ಯಾಭೂಷಣ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಇದೇ ವೇಳೆ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜ್ಯೋತಿಷ್ಯ ರತ್ನ ಗುರುರಾಜ ಕುಲಕರ್ಣಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್