
ನವದೆಹಲಿ, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜೀವನ ಸುಗಮತೆ ಯನ್ನು ಉತ್ತೇಜಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ದೃಢವಾಗಿ ನಿಂತಿದ್ದು, ಮುಂಬರುವ ದಿನಗಳಲ್ಲಿ ಸುಧಾರಣೆಗಳ ವೇಗವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2025ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಸುಧಾರಣಾತ್ಮಕ ಕ್ರಮಗಳು ಸಾಮಾನ್ಯ ಜನರ ಬದುಕು ಮತ್ತು ವಿವಿಧ ವಲಯಗಳ ಕಾರ್ಯವೈಖರಿಯನ್ನು ಹೇಗೆ ಸುಲಭಗೊಳಿಸಿವೆ ಎಂಬುದನ್ನು ವಿವರಿಸುವ MyGovIndia ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುತ್ತಾ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಜೀವನ ಸುಗಮತೆ’ಯನ್ನು ಸರ್ಕಾರದ ಪ್ರಮುಖ ಆದ್ಯತೆಯಾಗಿ ಪರಿಗಣಿಸಲಾಗಿದ್ದು, ಆಡಳಿತ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸುವತ್ತ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಈ ದಿಕ್ಕಿನಲ್ಲಿ ಇನ್ನಷ್ಟು ವೇಗದ ಮತ್ತು ಪರಿಣಾಮಕಾರಿ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಿಳಿಸಿದ್ದಾರೆ.
ಈ ಸಂಬಂಧವಾಗಿ, ಆಡಳಿತ, ಸೇವಾ ವಿತರಣಾ ವ್ಯವಸ್ಥೆ, ಡಿಜಿಟಲ್ ಪ್ರಕ್ರಿಯೆಗಳು ಮತ್ತು ನೀತಿ ಸುಧಾರಣೆಗಳ ಮೂಲಕ ಸರ್ಕಾರ ಹೇಗೆ ಜನಜೀವನವನ್ನು ಸುಗಮಗೊಳಿಸಿದೆ ಎಂಬುದನ್ನು ವಿವರಿಸುವ ‘ಎಕ್ಸ್’ ಥ್ರೆಡ್‌ನನ್ನೂ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಜನಸಾಮಾನ್ಯರ ಸಮಯ, ಶ್ರಮ ಮತ್ತು ವೆಚ್ಚವನ್ನು ಉಳಿಸುವ ಉದ್ದೇಶದಿಂದ ಸರ್ಕಾರ ಕೈಗೊಂಡಿರುವ ಈ ಕ್ರಮಗಳು ‘ವಿಕಸಿತ ಭಾರತ’ದ ಕನಸಿಗೆ ಬಲ ತುಂಬಲಿವೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa