ಅಪರೂಪದ ಸ್ನೇಹ, ಓರ್ವನ ಬೀಕರ ಕೊಲೆಯಲ್ಲಿ ಅಂತ್ಯ : ಬೆಚ್ಚಿ ಬಿದ್ದ ಜನತೆ
ಅಪರೂಪದ ಸ್ನೇಹ ಓರ್ವನ ಬೀಕರ ಕೊಲೆಯಲ್ಲಿ ಅಂತ್ಯ : ಬೆಚ್ಚಿ ಬಿದ್ದ ಜನತೆ
ಚಿತ್ರ : ಕೊಲೆಯಾದ ಸಂದೀಪ್ ಕುಮಾರ್ ಸಿಂಗ್


ಕೋಲಾರ, ೨೬ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಪರಿಚಯದ ಯುವಕನೊಬ್ಬನನ್ನು ಚಾಕುವಿನಿಂದ ಹಿರಿದು ಬೀಕರ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.

ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದ ಲಿಕೋ ಎಂಬ ಖಾಸಗಿ ಕಂಪನಿಯಲ್ಲಿ ಕಾಂಟ್ರಾಕ್ಟ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಾಂಡ್ ಮೂಲದ ಸಂದೀಪ್ ಕುಮಾರ್ ಸಿಂಗ್ (೨೯) ಎಂಬುವರನ್ನ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಲಿಕೋ ಕಂಪನಿಯಲ್ಲಿ ಸುಮಾರು ೧೫-೨೦ ದಿನದಿಂದ ಸಂದೀಪ್ ಕುಮಾರ್ ಸಿಂಗ್ ಕೆಲಸವು ಬಿಟ್ಟಿರುತ್ತಾನೆ.

ಜಾರ್ಖಾಂಡ್ ಮೂಲದ ಸಂದೀಪ್ ಕುಮಾರ್ ಸಿಂಗ್ ವೇಮಗಲ್ ಕೈಗಾರಿಕಾ ಪ್ರದೇಶದ ಲಿಕೋ ಕಂಪನಿಯಲ್ಲಿ ಮ್ಯಾನ್ ಪವರ್ ಕಾಂಟ್ರಾಕ್ಟ್ ಸೂಪರ್ ವೈಸರ್ ಆಗಿ ಕೆಲಸ ಮಾಡುವ ಸಂದರ್ಭದಲ್ಲಿ, ಕುರುಗಲ್ ಗೇಟ್ನ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬಳ್ಳಾರಿ ಮೂಲದ ರಾಜರೆಡ್ಡಿ ಎಂಬುವನ ಜೊತೆ ಸ್ನೇಹವಾಗುತ್ತದೆ.

ಅದರಂತೆಯೇ ಬೆಂಗಳೂರು ಮೂಲದ ಮನೋಜ್ ಓಡೆಯರ್ ಹಾಗೂ ಒರಿಸ್ಸಾ ಮೂಲದ ಅನಿರುಧ್ ಒಟ್ಟಾರೆ ನಾಲ್ಕು ಜನ ಬೇರೆ ರಾಜ್ಯಗಳಿಂದ ಬಂದು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ಸ್ನೇಹಿತರಾಗಿರುತ್ತಾರೆ.

ಈ ನಾಲ್ಕು ಜನ ಮದ್ಯಪಾನ ಮಾಡಿಕೊಂಡು ತಮ್ಮ ಸ್ನೇಹವನ್ನು ಮುಂದುವರೆಸಿರುತ್ತಾರೆ. ಅದರಂತೆಯೇ ದಿ ೨೫ ಡಿಸೆಂಬರ್ ೨೦೨೫ ರ ಮಧ್ಯರಾತ್ರಿಯೂ ಸಹ ಈ ನಾಲ್ಕು ಜನ ಮದ್ಯಪಾನ ಮಾಡಿರುತ್ತಾರೆ.

ಸಂದೀಪ್ ಕುಮಾರ್ ಸಿಂಗ್ ಗೆ ಕುಡಿತ ಹೆಚ್ಚಾದ ಕಾರಣ ತನ್ನ ರೂಂ ಗೆ ಬೀಡಲು ಅನಿರುಧ್ ಮತ್ತು ಮನೋಜ್ ಬರುತ್ತಾರೆ, ಆಗ ಸಂದೀಪ್ ಕುಮಾರ್ ಸಿಂಗ್ ಇನ್ನು ಕುಡಿಯಬೇಕು ಎಂದಾಗ ಕುರುಗಲ್ ಗೇಟ್ ಹೊಟೆಲ್ ಒಂದರಲ್ಲಿ ಕೆಲಸ ಮಾಡುವ ರಾಜರೆಡ್ಡಿ ಎಂಬುವರನ್ನು ಕರೆದು ನನಗೆ ಡ್ರಿಂಕ್ಸ್ ತೆಗೆದುಕೊಂಡು ಬಾ ಎಂದು ಹೇಳಿದಾಗ ತಂದುಕೊಡುತ್ತಾನೆ.

ಅದರೆ ದುರದೃಷ್ಟವಶಾತ್ ಅದೇನು ಮಾತು ಬಂತು ಏನೋ ಕ್ಷುಲ್ಲಕ ಕಾರಣಕ್ಕೆ ಮಾತು ಮಾತು ಬೆಳೆದಾಗ ರಾಜರೆಡ್ಡಿ ಚಾಕುವಿನಿಂದ ಕತ್ತು ಸೀಳುತ್ತಾನೆ, ಜೊತೆಗೆ ಮನೋಜ್ ಕೂಡ ಇದಕ್ಕೆ ಸಾಥ್ ನೀಡುತ್ತ ಸಂದೀಪ್ ಕುಮಾರ್ ಸಿಂಗ್ ದೇಹವನ್ನೆಲ್ಲ ಚಾಕುವಿನಿಂದ ಕೊಯ್ದಿರುತ್ತಾರೆ.

ಏನೋ ಆಗಿದ್ದು ಆಗಿದೆ ಎಂದುಕೊಂಡು ಕುಡಿದ ಮತ್ತಿನಲ್ಲೆ ಹೆಚ್ ಕ್ರಾಸ್ ಆಸ್ಪತ್ರೆಗೆ ದಾಖಲಿಸೋಣ ಎಂದು ಕರೆದುಕೊಂಡು ಹೋಗುವ ಮಾರ್ಗ ಮದ್ಯೆ ಮತ್ತೆ ಸಂದೀಪ್ ಕುಮಾರ್ ಸಿಂಗ್ ಇವರನ್ನ ಏನೋ ಅವಾಚ್ಯ ಶಬ್ದಗಳಿಂದ ಬೈದ ಕಾರಣ ಇವನು ಬದುಕಿದರೆ ನಮಗೆ ಸಮಸ್ಯೆ ಎಂದುಕೊಂಡೋ ಏನೋ ಕೈಗಾರಿಕಾ ಪ್ರದೇಶದ ಮಲಿಯಪ್ಪನಹಳ್ಳಿ ಯ ೨ ನೇ ಹೊಸ ರಸ್ತೆಯ ಚರಂಡಿಯಲ್ಲಿ ಹಾಕಿ ಮತ್ತೆ ಕಲ್ಲಿನಿಂದ ಹಾಕಿ ಕೊಚ್ಚಿ ಕೊಲೆ ಮಾಡಿದ ರಾಜರೆಡ್ಡಿ ಮತ್ತು ಮನೋಜ್ ತಮ್ಮ ದ್ವಿಚಕ್ರ ವಾಹನದಲ್ಲಿ ಮಧ್ಯರಾತ್ರಿ ೨ ರಿಂದ ೩ ಗಂಟೆಯ ಸಮಯದಲ್ಲಿ ನೇರವಾಗಿ ವೇಮಗಲ್ ಪೋಲಿಸ್ ಠಾಣೆಗೆ ಬಂದು ಶರಣಾದಾಗ ಪೊಲೀಸರೇ ಒಂದು ನಿಮಿಷ ಶಾಕ್ ಆಗುತ್ತಾರೆ.

ಕೊಲೆ ಮಾಡಿದ ಆರೋಪಿಗಳು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಹಿನ್ನಲೆ ಹುಡುಕಾಟ ತಪ್ಪಿದ್ದು, ಇನ್ನು ಕೊಲೆಗೆ ನಿಖರವಾದ ಕಾರಣ ಪತ್ತೆ ಹಚ್ಚಿ ಜನತೆಗೆ ತಿಳಿಸಬೇಕಿದೆ ಎಂದು ಜನತೆಯ ಒತ್ತಾಯವಾಗಿದೆ.

ಸಾರ್ವಜನಿಕ ವಲಯದಲ್ಲಿ ಚರ್ಚೆ : ಹೌದು ಕ್ಷುಲ್ಲಕ ಕಾರಣಕ್ಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಈ ರೀತಿ ವಿಕೃತವಾಗಿ ದೇಹವನ್ನೆಲ್ಲ ಸೀಳುವಷ್ಟು ಕೋಪ ಇದೆ ಅಂದರೇ ಇದರ ಹಿಂದೆ ಬೇರೆ ಏನೋ ದೊಡ್ಡ ವಿಷಯವೇ ನಡೆದಿರುತ್ತದೆ, ಈ ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಲ್ಲಿಯೇ ಹೊರ ಬೀಳಬೇಕಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೊರ ರಾಜ್ಯಗಳಿಂದ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಲು ಬರುವ ಕಾರ್ಮಿಕರಿಗೆ ಮನೆ ಬಾಡಿಗೆ ಮುನ್ನ ಬಹಳ ಎಚ್ಚರದಿಂದ ಅವರ ದಾಖಲೆಯನ್ನೆಲ್ಲ ತನಿಖೆ ಮಾಡಿ ನೀಡಬೇಕಿದೆ. ಜೊತೆಗೆ ಪೊಲೀಸರು ಸಹ ಬಾಡಿಗೆ ಮನೆಗಳಲ್ಲಿ ವಾಸಿಸುವ ಕಾರ್ಮಿಕರ ಮಾಹಿತಿಯನ್ನು ಪಡೆದುಕೊಂಡರೇ ಎಲ್ಲ ರೀತಿಯಲ್ಲಿಯು ಉಪಯುಕ್ತವಾಗುತ್ತದೆ, ಈ ರೀತಿ ಘಟನೆಗಳು ನಡೆದಾಗ ಸ್ಥಳೀಯರು ಬಹಳ ಭಯದಿಂದ ಓಡಾಟ ಮಾಡಬೇಕಾಗುತ್ತದೆ. ಹಾಗಾಗಿ ಬಾಡಿಗೆಗೆ ಬಂದಿರುವ ಕಾರ್ಮಿಕರಿಗೆ ಒಮ್ಮೆ ಒಂದು ಕಡೆ ಸೇರಿಸಿ ಅಥವಾ ಆಯಾ ಕಂಪನಿಗಳಿಗೆ ಅರಿವು ಮೂಡಿಸುವುದರ ಜೊತೆಗೆ ಕೆಲ ಪುಂಡ ಪೋಕರಿಗಳಿಗೆ ಎಚ್ಚರಿಕೆಯನ್ನು ನೀಡಬೇಕಿದೆ ಎಂದು ಸಾರ್ವಜನಿಕರು ಒತ್ತಾಹಿಸಿದ್ದಾರೆ.

ಅನಿರುಧ್ ನನ್ನು ಪೊಲೀಸರು ಬಂಧಿಸಿದ್ದು, ಒಟ್ಟು ೩ ಜನರು ಪೊಲೀಸರ ವಶದಲ್ಲಿದ್ದಾರೆ. ಸ್ಥಳಕ್ಕೆ ವೇಮಗಲ್ ಇನ್ಸ್ ಪೆಕ್ಟರ್ ಮಂಜು ರವರು ಬೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಚಿತ್ರ : ಕೊಲೆಯಾದ ಸಂದೀಪ್ ಕುಮಾರ್ ಸಿಂಗ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande