
ಕೋಲಾರ, ೨೫ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಗತ್ತಿಗೆ ಶಾಂತಿ ಸಂದೇಶ ಸಾರಿದ ಕ್ರಿಸ್ತ ಜಯಂತಿಯನ್ನು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ನಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಕೆ.ಜಿ.ಎಫ್.ನಲ್ಲಿ ಆಚರಿಸುವ ಕ್ರಿಸ್‌ಮಸ್ ಹಬ್ಬಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಬ್ರಿಟೀಷರು ಗಣಿಕಾರಿಕೆ ಆರಂಭಿಸಿದಾಗ ಕ್ರಿಸ್‌ಮಸ್ ಹಬ್ಬ ಆಚರಣೆಗೆ ಬಂದಿತು. ಸ್ವಾತಂತ್ರö್ಯ ಪೂರ್ವದಲ್ಲಿ ನಿರ್ಮಿಸಲಾದ ಹಲವಾರು ಚರ್ಚುಗಳು ಈಗಲೂ ಇತಿಹಾಸದ ಹೆಗ್ಗುರುತಾಗಿ ಉಳಿದಿವೆ.
ಎಲ್ಲ ಧರ್ಮೀಯರು ಕ್ರಿಸ್‌ಮಸ್ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ.ಇಡೀ ಕೆ.ಜಿ.ಎಫ್ ನಗರ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿದೆ. ಚರ್ಚುಗಳು ವಿದ್ಯುತ್ ದೀಪಾಲಂಕಾರದಿ0ದ ಕಂಗೊಳಿಸುತ್ತಿವೆ. ಕೆ.ಜಿ.ಎಫ್ ನಗರದ ಎಲ್ಲೆಡೆ ಮನೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಮನೆಗಳನ್ನು ಶೃಂಗರಿಸಲಾಗಿದೆ. ಮನೆಗಳ ಮುಂದೆ ಕ್ರಿಸ್ ಮಸ್ ದೀಪವನ್ನು ಕಟ್ಟಿ ಕ್ರಿಸ್ ಮಸ್ ಹಬ್ಬವನ್ನು ಸ್ವಾಗತಿಸಲಾಯಿತು. ಮಾರುಕಟ್ಟೆಯಲ್ಲಿ ಕ್ರಿಸ್ ಮಸ್ ಹಬ್ಬದ ಶುಭಾಶಯಗಳ ಪತ್ರಗಳು ಹಾಗು ಬೇಕರಿಗಳಲ್ಲಿ ಕೇಕ್ ಬಿರುಸಿನಿಂದ ಮಾರಾಟವಾದವು. ಮಧ್ಯ ರಾತ್ರಿಯವರೆಗೆ ಚರ್ಚುಗಳಲ್ಲಿ ವಿಶೇಷವಾದ ಆರಾದನೆ ನಡೆಯಿತು.ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಕೋರಲಾಯಿತು.
ಕೆ.ಜಿ.ಎಫ್ ನಿವಾಸಿ ತಂಗರಾಜು ಮಾತನಾಡಿ ಕೆ.ಜಿ.ಎಫ್ ಕ್ರಿಸ್‌ಮಸ್ ಆಚರಣೆಗೆ ಐತಿಹಾಸಿಕ ಹಿನ್ನಲೆ ಇದೆ. ಕೆ.ಜಿ.ಎಫ್ ಕ್ರಿಸ್‌ಮಸ್ ಹಬ್ಬ ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ.ಹಬ್ಬಕ್ಕಾಗಿ ತಯಾರಿಸಲಾದ ಸಿಹಿ ತಿನುಸುಗಳನ್ನು ನೆರೆಹೊರೆಯರಿಗೆ ಹಂಚಿ ಸಂಭ್ರಮಿಸಲಾಗುವುದು.ಒAದು ವಾರಗಳ ಕಾಲ ಹಬ್ಬದ ಸಂಭ್ರಮವಿರುತ್ತದೆ ಎಂದು ತಿಳಿಸಿದರು.
ಮತ್ತೊಬ್ಬ ನಿವಾಸಿ ವಕೀಲ ಜ್ಯೋತಿ ಬಸು ಮಾತನಾಡಿ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ಕ್ರಿಸ್‌ಮಸ್ ಆಚರಿಸಲಾಗುವುದು.ಜಾಗತಿಕವಾಗಿ ಕ್ರಿಸ್‌ಮಸ್ ಆಚರಿಸುವ ರೀತಿಯಲ್ಲೇ ಕೆ.ಜಿ.ಎಫ್‌ನಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದರು
ಕೆ.ಜಿ.ಎಫ್‌ನ ರಾಬರ್ಟ್ಸನ್ ಪೇಟೆಯಲ್ಲಿರುವ ಸಂತ ಪೌಲ ದೇವಾಲಯದ ಧರ್ಮಾಧಿಕಾರಿ ರಾಬಿನ್ ಮಾರ್ಷಲ್ ಮಾತನಾಡಿ ಕ್ರಿಸ್ ಮಸ್ ಹಬ್ಬ ಎಂದರೆ ಶಾಂತಿ ಮತ್ತು ಪ್ರೀತಿಯ ಸಂಕೇತವಾಗಿದೆ. ದೇವರು ಮನುಷ್ಯನಾಗಿ ಹುಟ್ಟಿ ಇಡೀ ಲೋಕ್ಕೆ ಶಾಂತಿ ಮತ್ತು ಪ್ರೀತಿಯನ್ನು ಕೊಡುಗೆಯಾಗಿ ನೀಡಿದ. ನೂರ ಹದಿನೈದು ವರ್ಷಗಳ ಇತಿಹಾಸವಿರುವ ಸಂತ ಪೌಲ್ ಚರ್ಚ್ನಲ್ಲಿ ಕನ್ನಡ .ಇಂಗ್ಲೀಷ್ ಭಾಷೆಗಳಲ್ಲಿ ಆರಾಧನೆ ನಡೆಯುತ್ತದೆ ಎಂದು ತಿಳಿಸಿದರು.
ಕೋಲಾರದಲ್ಲೂ ಕ್ರಿಸ್ತ ಜಯಂತಿಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯತು. ಜಗತ್ತಿಗೆ ಶಾಂತಿ ಸಂದೇಶ ಸಾರುವ ಕ್ರಿಸ್‌ಮಸ್ ಆಚರಣೆಗೆ ಜಿಲ್ಲೆಯ ಚರ್ಚ್ಗಳು ದೀಪಾಲಂಕಾರದಿAದ ಝಗಮಗಿಸುತ್ತಿವೆ. ಕ್ರೈಸ್ತ ಸಮುದಾಯದವರು ಗುರುವಾರ ಕ್ರಿಸ್‌ಮಸ್ ಹಬ್ಬ ಆಚರಿಸಲಾಯಿತು.
ಕ್ಯಾರಲ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಈಗಾಗಲೇ ಆರಂಭಗೊ0ಡಿತು. ನಗರದ ರಂಗಮ0ದಿರ ಎದುರು ಇರುವ ಮೆಥೊಡಿಸ್ಟ್ ಚರ್ಚ್, ಮೆಕ್ಕೆ ವೃತ್ತದಲ್ಲಿರುವ ಮೇರಿ ಚರ್ಚ್, ಬೆತ್ತನಿ ಚರ್ಚ್, ಚಿಕ್ಕಬಳ್ಳಾಪುರ ರಸ್ತೆಯ ಈಲಂ ಚರ್ಚ್ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಚರ್ಚ್ಗಳೂ ಸಿಂಗಾರಗೊ0ಡಿವೆ.
ಚರ್ಚ್ ಆವರಣದಲ್ಲಿ ವೈವಿಧ್ಯಮಯದ ಗೋದಳಿಗಳನ್ನು ನಿರ್ಮಿಸಲಾಗಿದೆ. ಏಸು ಕ್ರಿಸ್ತ ಹುಟ್ಟಿದಾಗಿನಿಂದ ಹಿಡಿದು ಶಿಲುಬೆಗೆ ಏರಿಸುವ ತನಕ ಸಾಗಿಬಂದ ಬದುಕಿನ ಕಥನ ಹೇಳುತ್ತಿವೆ. ಅವುಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದು, ಬೆಳಕಿನ ಲೋಕವೇ ಸೃಷ್ಟಿಯಾಗಿದೆ. ಮಕ್ಕಳ ಮನಸೂರೆಗೊಳ್ಳುವ ಸಂತಾಕ್ಲಾಸ್ ಪ್ರತಿಕೃತಿಗಳು ಆಕರ್ಷಣೆಯ ಕೇಂದ್ರ ಬಿಂದು ಎನಿಸಿವೆ.
ಗುರುವಾರ ಬೆಳಿಗ್ಗೆ ಚರ್ಚ್ಗಳಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ, ಕ್ರಿಸ್ತನ ಆರಾಧನೆ, ಹಬ್ಬದ ಶುಭಾಶಯ ವಿನಿಮಯ ನಡೆಯಲಿದೆ. ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.
ಕ್ರೈಸ್ತ ಧರ್ಮೀಯರ ಮನೆಗಳಲ್ಲೂ ಹಬ್ಬದ ಸಂಭ್ರಮ ಗರಿಗೆದರಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ತರಹೇವಾರಿ ಆಲಂಕಾರಿಕ ವಸ್ತುಗಳನ್ನು ತಂದು ಮನೆಯನ್ನು ಅಲಂಕರಿಸುವ ಕಾಯಕದಲ್ಲಿ ತೊಡಗಿದ್ದರು. ಕೆಂಪು ಬಣ್ಣದ ನಕ್ಷತ್ರ, ಬಣ್ಣ ಬಣ್ಣದ ಆಕಾಶಬುಟ್ಟಿಗಳು, ಕಿರುದೀಪಗಳಲ್ಲಿ ನಗು ತುಳುಕಿಸುತ್ತಿದ್ದ ಹಸಿರು ಕ್ರಿಸ್‌ಮಸ್ ಟ್ರೀ ಇವೆಲ್ಲವೂ ಮನೆಯ ಕಳೆ ಹೆಚ್ಚಿಸಿದ್ದವು. ಅದಕ್ಕಾಗಿ ಎರಡು ದಿನಗಳಿಂದ ತಯಾರಿ ನಡೆದಿದೆ.
ಕ್ರಿಸ್‌ಮಸ್ ಅಂಗವಾಗಿ ಬೇಕರಿಗಳಲ್ಲಿ ವಿವಿಧ ವಿನ್ಯಾಸದ ಕೇಕ್‌ಗಳ ಮಾರಾಟ ಜೋರಾಗಿದೆ. ವಿವಿಧ ಶಾಲೆಗಳಲ್ಲಿ ಬುಧವಾರವೇ ಕ್ರಿಸ್‌ಮಸ್ ಆಚರಿಸಲಾಯಿತು. ಪುಟಾಣಿ ಮಕ್ಕಳು ಕೆಂಪು ಟೊಪ್ಪಿ ಧರಿಸಿ, ಸಾಂಟಾ ಕ್ಲಾಸ್ ವೇಷಧಾರಿಯಿಂದ ಕೇಕು, ಚಾಕೊಲೆಟ್ ಸ್ವೀಕರಿಸಿ ಖುಷಿ ಪಟ್ಟರು.
ಬುಧವಾರ ರಾತ್ರಿ ಕ್ರಿಸ್‌ಮಸ್ ಕ್ಯಾರಲ್ಸ್ ನಂತರ ಮಹೋನ್ನತ ಗೀತೆಯೊಂದಿಗೆ ವಿಶೇಷ ಪೂಜೆ ನಡೆಯುತ್ತದೆ. ಏಸುಕ್ರಿಸ್ತರ ಸಂದೇಶವನ್ನು ಚರ್ಚ್ಗಳಲ್ಲಿ ಹರ್ಷಗೀತೆಗಳ (ಕ್ಯಾರಲ್ಸ್) ಮೂಲಕ ರಾತ್ರಿ ಸಾದರಪಡಿಸಲಾಗುತ್ತದೆ. ಚರ್ಚ್ಗಳಲ್ಲಿ ಸಂಜೆಯಿ0ದಲೇ ನೂರಾರು ಮಂದಿ ಕ್ರೈಸ್ತ ಸಮುದಾಯದವರು ಸೇರಿದ್ದರು.
ಚಿತ್ರ : ಕೋಲಾರ ನಗರದ ಮೆಥೊಡಿಸ್ಟ್ ಚರ್ಚ್ಗೆ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್