
ಕೋಲಾರ, ೨೫ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಾಗೃತಿ ಸೇವಾ ಸಂಸ್ಥೆಯನ್ನು ಸ್ಥಾಪಿಸಿ ದೀನದಲಿತರ ಸೇವೆ, ಹಿರಿಯ ನಾಗರೀಕರಿಗೆ ನೆರವು, ಅನಾಥಾಶ್ರಮದ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದ ದಿವಂಗತ ಕೆ.ಆರ್.ಧನರಾಜ್ ಜನರ ಮನದಲ್ಲಿ ಉಳಿದು ಹೋಗಿದ್ದು, ಇಂದು ಅವರ ಕುಟುಂಬದವರು ಅಂತರಗ0ಗಾ ವಿಶೇಷ ಚೇತನ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ, ಊಟ ನೀಡುವ ಮೂಲಕ ಅವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಅವರ ಪತ್ನಿ ಶೋಭಾ ಧನರಾಜ್, ತಮ್ಮ ದಿವಂಗತ ಪತಿಯನ್ನು ಸ್ಮರಿಸಿ, ಅವರು ಈ ಆಶ್ರಮದ ಮಕ್ಕಳೊಂದಿಗೆ ಬದುಕಿದ್ದಷ್ಟು ಕಾಲವೂ ದೀಪಾವಳಿ, ಯುಗಾದಿ ಆಚರಿಸಿ ಅವರೊಂದಿಗೆ ಸಂಭ್ರಮಿಸುತ್ತಿದ್ದರು ಎಂದು ಸ್ಮರಿಸಿದರು. ಧನರಾಜ್ ಅವರಿಗಿದ್ದ ಸಾಮಜಿಕ ಕಾಳಜಿ ಕುರಿತು ಪ್ರಸ್ತಾಪಿಸಿದ ಅವರು, ಮುಸ್ಸಂಜೆ ಮನೆ ವೃದ್ದಾಶ್ರಮದ ಮೂಲಕ ಅನೇಕ ಅನಾಥರ ಬದುಕಿಗೆ ದಾರಿದೀಪವಾಗಿದ್ದರು ಎಂದು ಸ್ಮರಸಿದರು.
ದಿವಂಗತ ವಕೀಲ ಕೆ. ಆರ್. ಧನರಾಜ್ ಅವರ ಸ್ಮರಣಾರ್ಥವಾಗಿ, ಅವರ ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳಿಗೆ ಪುಸ್ತಕಗಳು ಮತ್ತು ಸಂಜೆ ಉಪಹಾರವನ್ನು ವಿತರಿಸಿ ಅವರ ಸ್ಮರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಿವಂಗತ ಧನರಾಜ್ ಅವರ ಪತ್ನಿ ಶೋಭಾ ಧನರಾಜ್, ಮಕ್ಕಳಾದ ದಿವ್ಯಾ ಧನರಾಜ್ ಮತ್ತು ತೇಜಾ ಧನರಾಜ್, ಕುಟುಂಬದ ಸದಸ್ಯರಾದ ಮುನಿರಾಜು, ವೆಂಕಟೇಶ್ ರಾಜು, ಮಂಜು, ಸುನಿಲ್ ಕುಮಾರ್ ಹಾಗೂ ನವೀನ್ ಕುಮಾರ್ ಭಾಗವಹಿಸಿದ್ದರು.
ಚಿತ್ರ : ಕೋಲಾರದ ಅಂತರಗ0ಗಾ ವಿಶೇಷ ಚೇತನ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ, ಊಟ ನೀಡುವ ಮೂಲಕ ಸಮಾಜಸೇವಕ ದಿವಂಗತ ಕೆ.ಆರ್.ಧನರಾಜ್ ಅವರ ಪುಣ್ಯಸ್ಮರಣೆಯನ್ನು ಅವರ ಕುಟುಂಬದವರು ಆಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್