ರಾಜ್ಯದ ಶಿಕ್ಷಣ ಕ್ಷೇತ್ರ ಅಧೋಗತಿಗೆ ತಲುಪಿದೆ‌ : ಅಶೋಕ
ಬೆಂಗಳೂರು, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶೈಕ್ಷಣಿಕ ವರ್ಷ ಅಂತ್ಯಕ್ಕೆ ಕೇವಲ ಮೂರು ತಿಂಗಳು ಉಳಿದಿದ್ದರೂ ಇನ್ನೂ ಶಾಲಾ ಮಕ್ಕಳಾಗಿ ಶೂ, ಸಾಕ್ಸ್ ವಿತರಿಸದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಓಡಾಡಬೇಕಾದ ದುಸ್ಥಿತಿ ಸೃಷ್ಟಿಸಿದೆ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯ
ರಾಜ್ಯದ ಶಿಕ್ಷಣ ಕ್ಷೇತ್ರ ಅಧೋಗತಿಗೆ ತಲುಪಿದೆ‌ : ಅಶೋಕ


ಬೆಂಗಳೂರು, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶೈಕ್ಷಣಿಕ ವರ್ಷ ಅಂತ್ಯಕ್ಕೆ ಕೇವಲ ಮೂರು ತಿಂಗಳು ಉಳಿದಿದ್ದರೂ ಇನ್ನೂ ಶಾಲಾ ಮಕ್ಕಳಾಗಿ ಶೂ, ಸಾಕ್ಸ್ ವಿತರಿಸದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಓಡಾಡಬೇಕಾದ ದುಸ್ಥಿತಿ ಸೃಷ್ಟಿಸಿದೆ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ಥಿಗೆ ದುಡ್ಡಿಲ್ಲ, ಅತಿಥಿ ಶಿಕ್ಷಕರ ನೇಮಕಕ್ಕೆ ದುಡ್ಡಿಲ್ಲ, ಪಠ್ಯ ಪುಸ್ತಕಗಳ ಮುದ್ರಣಕ್ಕೆ ದುಡ್ಡಿಲ್ಲ, ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಶಿಕ್ಷಣ ಕ್ಷೇತ್ರ ಅಧೋಗತಿಗೆ ತಲುಪಿದೆ‌ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande