
ಕೋಲಾರ, ೨೫ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಕೆಜಿಎಫ್ ನಗರದಲ್ಲಿ ರೈಲ್ವೆ ಕೋಚಸ್ ಸರ್ವೀಸಿಂಗ್ ಘಟಕ ಆರಂಭಿಸಲು ಬಿಜಿಎಂಎಲ್‌ಗೆ ಸೇರಿದ ೫೦೦ ಎಕರೆ ಜಾಗ ಬಳಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಸಿಗಲಿದೆ ಎಂದು ಸಂಸದ ಮಲ್ಲೇಶಬಾಬು ತಿಳಿಸಿದರು.
ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿಯ ತೊಟ್ಲಿ ಗೇಟ್‌ನಲ್ಲಿರುವ ಅವಧೂತ ದತ್ತಾತ್ರೇಯ,ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ೪೮ನೇ ದಿನದ ಮಂಡಲ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ರೈಲ್ವೆ ಕೋಚ್ ಸರ್ವೀಸಿಂಗ್ ಘಟಕ ಚೆನ್ನೆöÊಗೆ ಹೋಗುವುದಿತ್ತು ಆದರೆ ಕರ್ನಾಟಕದಲ್ಲಿ ೫೦೦ ಎಕರೆ ಜಮೀನು ಸಿಗಲಿಲ್ಲ ಎಂಬ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಈ ಸಂಬ0ಧ ರೈಲ್ವೆ ಸಚಿವರು, ರಾಜ್ಯ ಸಚಿವರನ್ನು ಭೇಟಿಯಾಗಿ ಭಾರತ ಚಿನ್ನದ ಗಣಿಗೆ ಸೇರಿದ ೫೦೦ ಎಕರೆ ಜಾಗ ಬಳಸಿಕೊಳ್ಳಲು ತಿಳಿಸಿದ್ದು, ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ರೈಲ್ವೆ ಮಾರ್ಗ ಹಾದುವ ಹೋಗುವ ಜಾಗಗಳಲ್ಲಿ ರಸ್ತೆಗಳ ಮೇಲೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ತಮ್ಮ ಮನವಿಗೆ ಸ್ಪಂದಿಸಿದ್ದು, ಐದು ಕಡೆಗಳಲ್ಲಿ ಮೇಲ್ಸೇತುವೆ ಕಾಮಗಾರಿ ಶೀಘ್ರ ಆರಂಭವಾಗುವ ಮುನ್ಸೂಚನೆ ನೀಡಿದರು.
ನಗರ ಹೊರವಲಯದ ಸ್ಯಾನಿಟೋರಿಯಂ ಬಳಿ, ನಗರದ ಟೇಕಲ್ ರಸ್ತೆ ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ, ಬಂಗಾರಪೇಟೆ ಎಸ್‌ಎನ್ ರೆಸಾರ್ಟ್ ಬಳಿ, ದೇಶಿಹಳ್ಳಿ, ಕಾಮಸಮುದ್ರ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಕೋಲಾರದಿಂದ ನೇರ ಬೆಂಗಳೂರಿಗೆ ರೈಲು ಮಾರ್ಗ ನಿರ್ಮಾಣ ತಮ್ಮ ಕನಸಾಗಿದ್ದು, ಇದಕ್ಕೆ ಸಚಿವರಿಂದ ಸೂಕ್ತ ಸ್ಪಂದನೆ ಸಿಕ್ಕಿದೆ ಎಂದ ಅವರು, ರಾಜ್ಯ ಸರ್ಕಾರ ಜಮೀನು ನೀಡಿದ ಕೂಡಲೇ ಕಾಮಗಾರಿ ಆರಂಭಿಸಲು ಕ್ರಮವಹಿಸಲಾಗುವುದು ಎಂದರು.
ಶಾಸಕ ವೆಂಕಟಶಿವಾರೆಡ್ಡಿ ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕಿನ ಎದುರೂರು ಸಮೀಪ ೨೫೦೦ ಎಕರೆ ಜಮೀನಿನಲ್ಲಿ ಹಾಗೂ ಲಕ್ಷಿö್ಮÃಪುರ ಸಮೀಪವೂ ಕೈಗಾರಿಕೆಗಳ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ ಅವರು, ಪಕ್ಷಬೇಧ ಮರೆತು ಸಹಕರಿಸಿಲು ತಮ್ಮ ವಿರೋಧಿಗಳಲ್ಲಿ ಕೋರಿದರು.
ನನ್ನನ್ನು ಐದು ಬಾರಿ ಈ ಕ್ಷೇತ್ರದ ಜನತೆ ಶಾಸಕರನ್ನಾಗಿಸಿದ್ದಾರೆ, ಅವರ ಋಣ ನನ್ನ ಮೇಲಿದೆ ಎಂದ ಅವರು, ಕೈಗಾರಿಕೆಗಳು ಇಲ್ಲಿಗೆ ಬಂದರೆ ತಾಲ್ಲೂಕಿನ ಅಭಿವೃದ್ದಿಯಾಗುತ್ತದೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗವೂ ಸಿಗುತ್ತದೆ ಎಂದು ತಿಳಿಸಿ, ಕ್ಷೇತ್ರದ ರೈತರು ಜಮೀನು ನೀಡಲು ಸಿದ್ದರಿದ್ದಾರೆ ಎಂದರು.
ರಾಜ್ಯ ಸರ್ಕಾರ ಕೆಲವು ಶಾಸಕರಿಗೆ ವಿಶೇಷ ಅನುದಾನ ನೀಡಿದೆ, ನಾವು ಶಾಸಕರಲ್ಲವೇ ಎಂದು ಪ್ರಶ್ನಿಸಿದ ಅವರು, ಈ ಕುರಿತು ನ್ಯಾಯಾಲಯದ ಕದ ತಟ್ಟಲಾಗಿದೆ, ಜನವರಿ ತಿಂಗಳಲ್ಲಿ ಕೋರ್ಟ್ ತೀರ್ಪು ತಮ್ಮ ಪರವಾಗಿ ಬರುವ ಆಶಯವಿದೆ ಎಂದ ಅವರು ಹಿಂದುಳಿದಿರುವ ಶ್ರೀನಿವಾಸಪುರ ತಾಲೂಕಿನ ಅಭಿವೃದ್ದಿಗೂ ವಿಶೇಷ ಅನುದಾನದ ಅಗತ್ಯವಿದೆ ಎಂದರು.
ಮುಖ0ಡ ಮದನಹಳ್ಳಿ ಶಶಿಧರ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ಚೌಡರೆಡ್ಡಿ, ಮುಖಂಡ ಸುಬ್ರಮಣಿ, ನಿವೃತ್ತ ಪೊಲೀಸ್ ಅಧಿಕಾರಿ ಅಶ್ವಥ್ಥರೆಡ್ಡಿ, ಸಮಾಜಸೇವಕ ನರಸಿಂಹಯ್ಯ, ಕಾಡುಗೌಡಹಳ್ಳಿ ತಿಮ್ಮಾರೆಡ್ಡಿ, ಸೀಕಲ್ ರಾಮಕೃಷ್ಣಪ್ಪ, ಉರಟಿ ಅಗ್ರಹಾರ ಸಂಪತ್, ವೆಂಕಟೇಗೌಡ ಮತ್ತಿತರರು ಉಪಸ್ಥಿತರಿರುವರು.
ಚಿತ್ರ ;ಕೋಲಾರ ತಾಲ್ಲೂಕಿನ ಚಿಟ್ನಹಳ್ಳಿಯ ತೊಟ್ಲಿ ಗೇಟ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಂಸದ ಮಲ್ಲೇಶಬಾಬು ಮಾಧ್ಯಮದೊಂದಿಗೆ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್