ರಾಯಚೂರು : ನಾಳೆ ವಿದ್ಯುತ್ ವ್ಯತ್ಯಯ
ರಾಯಚೂರು, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಎಪಿಎಮ್‍ಸಿ ಯಾರ್ಡ ಉಪಕೇಂದ್ರದಲ್ಲಿ ಪರಿವರ್ತಕ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ನಾಳೆ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವ
ರಾಯಚೂರು : ನಾಳೆ ವಿದ್ಯುತ್ ವ್ಯತ್ಯಯ


ರಾಯಚೂರು, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಎಪಿಎಮ್‍ಸಿ ಯಾರ್ಡ ಉಪಕೇಂದ್ರದಲ್ಲಿ ಪರಿವರ್ತಕ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ನಾಳೆ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ನಾಳೆ ಬೆಳಿಗ್ಗೆ 10 ರಿಂದ ವಾಟರ್ ಸಪ್ಲೈ, ಕೆ.ಐ.ಎ.ಡಿ.ಬಿ ಇಂಡಸ್ಟ್ರೀಯಿಲ್ ಏರಿಯಾ, ಯರಮರಸ್ ಕೈಗಾರಿಕಾ ಪ್ರದೇಶ, ನಂದಿನಿ ಹಾಲು ಡೈರಿ, ಗೆಸ್ಟ್ ಹೌಸ್, ಮಂಚಲಾಪುರ ರಸ್ತೆ, ಬೈಪಾಸ್ ರಸ್ತೆಯಲ್ಲಿರುವ ಇಂಡಸ್ಟ್ರೀಯಿಲ್ ಏರಿಯಾ, ಶಾಂತಿ ಫೀಡರ್, ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಎಸ್.ಎಲ್.ಎನ್. ಎಂಜಿನಿಯರಿಂಗ್ ಕಾಲೇಜ್, ಐ.ಐ.ಐಟಿ ಯರಮರಸ್ ಕ್ಯಾಂಪ್, ಪೋತಗಲ್, ಅಮರಾವತಿ, ಯರಮರಸ್ ದಂಡು, ಏಗನೂರು ಹಾಗೂ ಸುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 24*7 ಗ್ರಾಹಕರ ನಿರಂತರ ಸೇವಾ ಕೇಂದ್ರ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ 2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande