ನಾಳೆ ಹೊಳಲ್ಕೆರೆ ಪುರಸಭೆಯ ಆಯವ್ಯಯ ತಯಾರಿಕೆ ಸಭೆ
ಚಿತ್ರದುರ್ಗ, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪುರಸಭೆಯ 2026-27ನೇ ಸಾಲಿನ ಆಯ-ವ್ಯಯ ತಯಾರಿಕೆ ಕುರಿತಂತೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಮಹೆಬೂಬ್ ಜೀಲಾನಿ ಖುರೇಷಿ ಅವರ ಉಪಸ್ಥಿತಿಯಲ್ಲಿ ಡಿ.26 ಬೆಳಿಗ್ಗೆ 11 ಗಂಟೆಗೆ ಪುರಸಭಾ ಸಭಾಂಗಣದಲ್ಲಿ
ನಾಳೆ ಹೊಳಲ್ಕೆರೆ ಪುರಸಭೆಯ ಆಯವ್ಯಯ ತಯಾರಿಕೆ ಸಭೆ


ಚಿತ್ರದುರ್ಗ, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪುರಸಭೆಯ 2026-27ನೇ ಸಾಲಿನ ಆಯ-ವ್ಯಯ ತಯಾರಿಕೆ ಕುರಿತಂತೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಮಹೆಬೂಬ್ ಜೀಲಾನಿ ಖುರೇಷಿ ಅವರ ಉಪಸ್ಥಿತಿಯಲ್ಲಿ ಡಿ.26 ಬೆಳಿಗ್ಗೆ 11 ಗಂಟೆಗೆ ಪುರಸಭಾ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.

ಅಭಿವೃದ್ಧಿ ಯೋಜನೆಗಳ ಕುರಿತು ಪಟ್ಟಣದ ಗಣ್ಯವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು,ನೌಕರರು, ಪತ್ರಕರ್ತರು, ಹಿರಿಯ ನಾಗರೀಕರು, ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಭಾಗವಹಿಸಿ ಅಥವಾ ಲಿಖಿತ ರೂಪದಲ್ಲಿ ನೀಡಬಹುದು ಎಂದು ಪುರಸಭೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande