
ಕೊಪ್ಪಳ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗಲು ಜಾತ್ರಾ ಮಹೋತ್ಸವದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀ ಗಮಿಮಠದ ಶಾಲಾ ಕಾಲೇಜು ಹಾಗೂ ವಿವಿಧ ಶಾಲಾ ಕಾಲೇಜು ಸಂಘ ಸಂಸ್ಥೆಗಳ ಕಲ್ಯಾಣ ಮಂಟಪ, ಸಭಾಭವನಗಳಲ್ಲಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಭಕ್ತರಿಗೆ ವಸತಿ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ವಸತಿ ನಿಲಯದಲ್ಲಿನ ಸೌಲಭ್ಯಗಳು:
• ವಸತಿ ಕೇಂದ್ರಗಳಲ್ಲಿ ಸ್ನಾನ, ಶೌಚಾಲಯ ವ್ಯವಸ್ಥೆಯ ಜೊತೆಗೆ ಸೊಳ್ಳೆಬತ್ತಿ, ಮೇಣದ ಬತ್ತಿ, ಜಮಖಾನ, ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
• ವಸತಿ ನೀಡುವ ಪ್ರತಿಯೊಂದು ಸ್ಥಳ ಮತ್ತು ಕೊಠಡಿಗಳಲ್ಲಿ ಸಮರ್ಪಕ ವಿದ್ಯುತ್, ಸುರಕ್ಷತೆ ಮತ್ತು ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.
• ಸ್ತ್ರಿಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ.
• ವಸತಿ ನೀಡುವ ಪ್ರತಿಯೊಂದು ಸ್ಥಳಗಳಲ್ಲಿ ವೈದ್ಯಕೀಯ ಸಿಬ್ಬಂದಿ, ಎಲೆಕ್ಟ್ರೀಷಿಯನ್ನ, ಪ್ಲಂಬರ, ಸೆಕ್ಯುರಿಟಿ ಗಾರ್ಡ ನಿಯೋಜನೆ ಮಾಡಲಾಗಿದೆ.
• ಭಕ್ತರಿಗೆ ಪ್ರತಿ ದಿನ ಬೆಳಗ್ಗೆ ದಿನ ಪತ್ರಿಕೆಯನ್ನು ಕೊಡಲಾಗುವದು.
• ದಿನದ 24 ಘಂಟೆಯು ಕತ್ರ್ಯವ್ಯ ನಿರ್ವಹಿಸಲು ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿದೆ.
• ಶ್ರೀ ಮಠದ ಆವರಣದಲ್ಲಿ ವಸತಿ ನೋಂದಣಿ ಕೇಂದ್ರವನ್ನು ಆರಂಭಿಸಲಾಗುವದು.
• ಭಕ್ತರು ವಸತಿ ನೋಂದಣಿ ಸ್ಥಳದಲ್ಲಿ ತಮ್ಮ ಹೆಸರು ಊರಿನ ಹೆಸರು ನೋಂದಾಯಿಸಿ ವಸತಿ ನೀಡುವ ಸ್ಥಳದ ರಶೀದಿಯನ್ನು ಪಡೆದುಕೊಳ್ಳಬೇಕು.
•
ವಸತಿ ಕೇಂದ್ರಗಳ ಮಾಹಿತಿ ಈ ಕೆಳಗಿನಂತಿವೆ.
ಶ್ರೀ ಗವಿಸಿದ್ಧೇಶ್ವರ 2000 ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಕೊಪ್ಪಳ, ಶ್ರೀಮತಿ ಶಾರದಮ್ಮ ವಿ. ಕೊತಬಾಳ ಬಿಬಿಎಮ್ ಕಾಲೇಜು ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ ಕೊಪ್ಪಳ, ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆ ಕೊಪ್ಪಳ, ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆ ಕೊಪ್ಪಳ, ಶ್ರೀ ಕೇತೇಶ್ವರ ಕಲ್ಯಾಣ ಮಂಟಪ ಕೊಪ್ಪಳ. ಪಾಂಡುರಂಗ ದೇವಸ್ಥಾನ, ಸ್ವಾಮಿ ವಿವೇಕಾನಂದ ಸಿಬಿಎಸ್‍ಇ ಗೊಂಡಬಾಳ್ ರೋಡ್, ಕೊಪ್ಪಳ, ವಾಸವಿ ಮಂಗಲ ಭವನ, ಮಧುಶ್ರೀ ಗಾರ್ಡನ್ ರೂಮ್, ಮಾಸ್ತಿ ಪಬ್ಲಿಕ್ ಸ್ಕೂಲ್, ಕೊಪ್ಪಳ. ಬಾಲಾಜಿ ಫಂಕ್ಷನ್ ಹಾಲ್ ಹತ್ತಿರ ರೂಮ್, ಭಾವಸಾರ ಕ್ಷತ್ರೀಯ ಸಮಾಜ ಶ್ರೀ ಪಾಂಡುರಂಗ ದೇವಸ್ಥಾನ ಮಾರ್ಕೆಟ್ ಹತ್ತಿರ, ಕೊಪ್ಪಳ ಮಳೇಮಲ್ಲೇಶ್ವರ ಯಾತ್ರಾ ನಿವಾಸ. ಈ ಸ್ಥಳದಲ್ಲಿ ಭಕ್ತರಿಗೆ ಉಚಿತವಾಗಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ ಭಕ್ತಾಧಿಗಳು ಇದರ ಸದುಪಯೋಗ ಪಡೆಯಬಹುದು.
ಉಚಿತ ವಸತಿ ನೋಂದಣಿ ಸ್ಥಳ : ಶ್ರೀ ಗವಿಮಠ ಆವರಣ
ಹೆಚ್ಚಿನ ಮಾಹಿತಿಗಾಗಿ, ಡಾ.. ಶಾಂತವೀರ ಶಿರೂರ್ ಮಠ-9845394735 ಶ್ರೀ ಮಂಜುನಾಥಸ್ವಾಮಿ ಬಿ-8310525457, ಶ್ರೀ ಪ್ರವೀಣ ಯರಗಟ್ಟಿ-8050356291 ಸಂಪರ್ಕಿಸಲು ಶ್ರೀಮಠ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್