ಒಂದು ರಾಷ್ಟ್ರ–ಒಂದು ಚುನಾವಣೆ ರಾಷ್ಟ್ರಹಿತದ ಅಭಿಯಾನ : ಶಿವರಾಜ್ ಸಿಂಗ್ ಚೌಹಾನ್
ನವದೆಹಲಿ, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನಿರಂತರವಾಗಿ ನಡೆಯುವ ಚುನಾವಣೆಗಳು ಅಭಿವೃದ್ಧಿಗೆ ಅತಿದೊಡ್ಡ ಅಡ್ಡಿಯಾಗಿವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ. ‘ಒಂದು ರಾಷ್ಟ್ರ–ಒಂದು ಚುನಾವಣೆ’ ರಾಷ್ಟ್ರಹಿತದ, ರಾಜಕೀಯಾತೀತ ಅಭಿಯಾನವಾಗಿದ್ದು, ಇದು ಬಿಜೆಪಿ ಅಭಿಯಾನವಲ್ಲ
Chawan


ನವದೆಹಲಿ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನಿರಂತರವಾಗಿ ನಡೆಯುವ ಚುನಾವಣೆಗಳು ಅಭಿವೃದ್ಧಿಗೆ ಅತಿದೊಡ್ಡ ಅಡ್ಡಿಯಾಗಿವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ. ‘ಒಂದು ರಾಷ್ಟ್ರ–ಒಂದು ಚುನಾವಣೆ’ ರಾಷ್ಟ್ರಹಿತದ, ರಾಜಕೀಯಾತೀತ ಅಭಿಯಾನವಾಗಿದ್ದು, ಇದು ಬಿಜೆಪಿ ಅಭಿಯಾನವಲ್ಲ, ದೇಶದ ಅಭಿಯಾನ ಎಂದು ಅವರು ಸ್ಪಷ್ಟಪಡಿಸಿದರು.

ದೆಹಲಿಯ ಎನ್‌ಡಿಎಮ್‌ಸಿ ಕನ್‌ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದರ ನಂತರ ಒಂದಾಗಿ ಜಾರಿಯಾಗುವ ಚುನಾವಣಾ ನೀತಿ ಸಂಹಿತೆಯಿಂದ ಹೊಸ ಯೋಜನೆಗಳು ಆರಂಭವಾಗದೇ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ ಎಂದರು. ಇದರಿಂದ ಸಮಯ ಮತ್ತು ಸಂಪನ್ಮೂಲಗಳ ಭಾರೀ ನಷ್ಟವಾಗುತ್ತಿದೆ ಎಂದು ಹೇಳಿದರು.

ಈ ಉಪಕ್ರಮವನ್ನು ಜನಾಂದೋಲನವಾಗಿಸಲು ಕರೆ ನೀಡಿದ ಚೌಹಾನ್, ‘ವಿಮೆನ್ ಫಾರ್ ಒನ್ ನೇಷನ್, ಒನ್ ಎಲೆಕ್ಷನ್’, ‘ಡಾಕ್ಟರ್‌ಗಳು’, ‘ಪ್ರೊಫೆಸರ್‌ಗಳು’ ಸೇರಿದಂತೆ ವಿವಿಧ ವೃತ್ತಿಪರ ವೇದಿಕೆಗಳನ್ನು ರಚಿಸುವಂತೆ ಮನವಿ ಮಾಡಿದರು. ದೇಶ ಈಗ ವೇಗವಾಗಿ ಮುನ್ನಡೆಯಬೇಕಿದ್ದು, ಎಲ್ಲರೂ ಕರ್ತವ್ಯಭಾವದಿಂದ ಈ ಅಭಿಯಾನದಲ್ಲಿ ತೊಡಗಿದರೆ ಯಾವುದೇ ಗುರಿಯೂ ಅಸಾಧ್ಯವಲ್ಲ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande