ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಚಿತ್ರದ ರೋಮಾಂಚಕಾರಿ ಮೊದಲ ಝಲಕ್‌ ಬಿಡುಗಡೆ
ಬೆಂಗಳೂರು, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪ್ಯಾನ್–ಇಂಡಿಯಾ ಸಿನಿಮಾ ಮೈಸಾ ಮೊದಲ ಗ್ಲಿಮ್ಸ್‌ ವರ್ಷಾಂತ್ಯಕ್ಕೆ ವಿಶೇಷ ಉಡುಗೊರೆಯಾಗಿ ಬಿಡುಗಡೆಯಾಗಿದೆ. ಇದುವರೆಗೆ ಕಾಣಿಸದ ರಾ ಅಂಡ್ ರಗಡ್ ಲುಕ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಸಿನಿಮಾ ಮೇಲಿನ ಕು
Misaa


ಬೆಂಗಳೂರು, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪ್ಯಾನ್–ಇಂಡಿಯಾ ಸಿನಿಮಾ ಮೈಸಾ ಮೊದಲ ಗ್ಲಿಮ್ಸ್‌ ವರ್ಷಾಂತ್ಯಕ್ಕೆ ವಿಶೇಷ ಉಡುಗೊರೆಯಾಗಿ ಬಿಡುಗಡೆಯಾಗಿದೆ. ಇದುವರೆಗೆ ಕಾಣಿಸದ ರಾ ಅಂಡ್ ರಗಡ್ ಲುಕ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಸಿನಿಮಾ ಮೇಲಿನ ಕುತೂಹಲವನ್ನು ಹಲವು ಪಟ್ಟು ಹೆಚ್ಚಿಸಿದೆ. ಟೈಟಲ್ ಮತ್ತು ಫಸ್ಟ್ ಲುಕ್‌ನಿಂದಲೇ ಸದ್ದು ಮಾಡಿದ್ದ ‘ಮೈಸಾ’ ಇದೀಗ ಗ್ಲಿಮ್ಸ್ ಮೂಲಕ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

‘ಮೈಸಾ’ ಮೂಲಕ ರವೀಂದ್ರ ಪುಲ್ಲೆ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅನ್‌ಫಾರ್ಮ್ಯುಲಾ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಭಾರೀ ಬಜೆಟ್ ಚಿತ್ರವು ಪ್ಯಾನ್–ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿದೆ. ಬಿಡುಗಡೆಯಾದ ಗ್ಲಿಮ್ಸ್‌ನಲ್ಲಿ ರಶ್ಮಿಕಾ ಅವರ ಉಗ್ರ, ಬಲಿಷ್ಠ ಹಾಗೂ ಭಾವನಾತ್ಮಕ ಅವತಾರ ಚಿತ್ರಕ್ಕೆ ಹೊಸ ಆಯಾಮ ನೀಡಿದೆ.

ಇದುವರೆಗೆ ಹೆಚ್ಚಾಗಿ ಕಮರ್ಷಿಯಲ್ ಪಾತ್ರಗಳಲ್ಲಿ ಮಿಂಚಿದ್ದ ರಶ್ಮಿಕಾ, ಇದೇ ಮೊದಲ ಬಾರಿಗೆ ಸಂಪೂರ್ಣ ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಪಾತ್ರಕ್ಕಾಗಿ ಅವರು ವಿಶೇಷ ತಯಾರಿಯನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗ್ಲಿಮ್ಸ್ ಆರಂಭವಾಗುವುದು ನಾಯಕಿಯ ತಾಯಿಯ ಶಕ್ತಿಶಾಲಿ ವಾಯ್ಸ್‌ಓವರ್‌ನೊಂದಿಗೆ. “ಅವಳು ಮರಣವನ್ನೇ ಎದುರಿಸಿ ನಿಲ್ಲುವ ಶಕ್ತಿ ಹೊಂದಿದ್ದಾಳೆ. ಈ ಹೆಸರನ್ನು ನೆನಪಿಟ್ಟುಕೊಳ್ಳಿ — ಮೈಸಾ” ಎಂಬ ಸಂದೇಶವು ಪ್ರೇಕ್ಷಕರನ್ನು ಬೆಚ್ಚಿಬೀಳಿಸುತ್ತದೆ.

ಗೋಂಡಿ ಸಮುದಾಯದ ಮಹಿಳಾ ನಾಯಕಿಯನ್ನು ಅತ್ಯಂತ ಬಲಿಷ್ಠ, ಉಗ್ರ ಮತ್ತು ಆಳವಾದ ಭಾವನಾತ್ಮಕ ನೆಲೆಯಲ್ಲಿ ಚಿತ್ರಿಸುವ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ‘ಮೈಸಾ’ ಪಾತ್ರವಾಗುತ್ತಿದೆ. ಚಿತ್ರದಲ್ಲಿ ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಂತ್ರಿಕವಾಗಿ ಕೂಡ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಶ್ರೀಯಾಸ್ ಪಿ ಕೃಷ್ಣ ಅವರ ಛಾಯಾಗ್ರಹಣ ಚಿತ್ರಕ್ಕೆ ವಿಶೇಷ ಮೆರಗು ನೀಡಲಿದ್ದು, ಜೇಕ್ಸ್ ಬೆಜೋಯ್ ಅವರ ಸಂಗೀತ ಚಿತ್ರಕ್ಕೆ ಜೀವ ತುಂಬಲಿದೆ. ಅಂತರರಾಷ್ಟ್ರೀಯ ಖ್ಯಾತಿಯ ಸ್ಟಂಟ್ ನಿರ್ದೇಶಕ ಆಂಡಿ ಲಾಂಗ್ ನೇತೃತ್ವದಲ್ಲಿ ಆ್ಯಕ್ಷನ್ ದೃಶ್ಯಗಳು ಅದ್ದೂರಿಯಾಗಿ ಮೂಡಿಬರುತ್ತಿವೆ. ಸದ್ಯ ತೆಲಂಗಾಣ ಮತ್ತು ಕೇರಳದ ಅರಣ್ಯ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಟೀಸರ್ ಬಿಡುಗಡೆಗೆ ಇನ್ನಷ್ಟು ಕಾತರ ಹೆಚ್ಚಾಗಿದೆ. ಆ್ಯಕ್ಷನ್ ಪ್ರಧಾನ ಚಿತ್ರವಾಗಿರುವುದರಿಂದ ನಿರ್ಮಾಪಕರು ಯಾವುದೇ ವಿಷಯದಲ್ಲೂ ಕಾಂಪ್ರಮೈಸ್ ಮಾಡದೇ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

 rajesh pande