ಹೊಲ ಉಳುವ ರೈತನೇ ಭೂಮಿ ಉಳಿಸುವ ಜೀವದಾತ : ಪ್ರಹ್ಲಾದ ಜೋಶಿ
ಬೆಂಗಳೂರು, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಗತ್ತಿಗೆ ಅನ್ನ ನೀಡುವ ನಾಡಿನ ಸಮಸ್ತ ರೈತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸಂದೇಶ ಹಂಚಿಕೊಂಡಿರುವ ಅವರು
Farmers day


ಬೆಂಗಳೂರು, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಗತ್ತಿಗೆ ಅನ್ನ ನೀಡುವ ನಾಡಿನ ಸಮಸ್ತ ರೈತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಸಂದೇಶ ಹಂಚಿಕೊಂಡಿರುವ ಅವರು, ರೈತನು ಹೊಲ ಉಳುವ ಮೂಲಕ ಭೂಮಿಯನ್ನು ಉಳಿಸುತ್ತಾನೆ; ಆ ಮೂಲಕ ಸಮಾಜದ ಜೀವನಾಡಿಯಾಗಿದ್ದಾನೆ ಎಂದು ಅವರು ಹೇಳಿದರು.

ಬೆವರು ಸುರಿಸಿ ಬೆಳೆ ಬೆಳೆಸುವ ಅನ್ನದಾತನಿಗೆ ಸದಾ ಗೌರವ ಸಲ್ಲಿಸಬೇಕಾಗಿದೆ. ದೇಶದ ಅನ್ನ ಭದ್ರತೆ ರೈತರ ಶ್ರಮದ ಫಲವಾಗಿದ್ದು, ರೈತ ಸಮುದಾಯದ ತ್ಯಾಗ ಮತ್ತು ಪರಿಶ್ರಮಕ್ಕೆ ನನ್ನ ಹೃತ್ಪೂರ್ವಕ ನಮನಗಳು ಎಂದು ಜೋಶಿ ಅವರು ತಿಳಿಸಿದ್ದಾರೆ.

ರೈತರ ಅಭಿವೃದ್ಧಿ, ಕಲ್ಯಾಣ ಹಾಗೂ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಕೃಷಿ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸುವ ದಿಸೆಯಲ್ಲಿ ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande