ರೈಲು ಪ್ರಯಾಣ ದರ ಏರಿಕೆ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ
ನವದೆಹಲಿ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರವು ರೈಲು ಪ್ರಯಾಣಿಕರ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದು, ಇದರ ನೇರ ಹೊರೆ ಸಾಮಾನ್ಯ ಪ್ರಯಾಣಿಕರ ಮೇಲೇ ಬೀಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಅಜಯ್ ಕುಮಾರ್ ಸೋಮವಾರ ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಪ್
Cong


ನವದೆಹಲಿ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರವು ರೈಲು ಪ್ರಯಾಣಿಕರ ದರವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದು, ಇದರ ನೇರ ಹೊರೆ ಸಾಮಾನ್ಯ ಪ್ರಯಾಣಿಕರ ಮೇಲೇ ಬೀಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಅಜಯ್ ಕುಮಾರ್ ಸೋಮವಾರ ತೀವ್ರವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ರೈಲು ಪ್ರಯಾಣ ದರಗಳು ಶೇಕಡಾ 107ರಷ್ಟು ಏರಿಕೆಯಾಗಿದ್ದು, ಸಾರ್ವಜನಿಕರಿಗೆ ರೈಲಿನಲ್ಲಿ ಪ್ರಯಾಣಿಸುವುದೇ ಕಷ್ಟಕರವಾಗಿದೆ ಎಂದು ಹೇಳಿದರು. ಪ್ರಯಾಣ ದರ ಹೆಚ್ಚಳದಿಂದ ರೈಲ್ವೆಗೆ ₹600 ಕೋಟಿ ಲಾಭವಾಗಲಿದೆ ಎಂದು ರೈಲ್ವೆ ಸಚಿವರು ಹೇಳಿಕೊಳ್ಳುತ್ತಿರುವುದಾದರೂ, ಈ ಲಾಭದ ಬೆಲೆ ಪ್ರಯಾಣಿಕರೇ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಸರ್ಕಾರವು ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರೈಲು ಪ್ರಯಾಣ ರಿಯಾಯಿತಿಯನ್ನು ರದ್ದುಗೊಳಿಸಿದೆ ಎಂದು ಹೇಳಿದ ಅಜಯ್ ಕುಮಾರ್, 2014ರಲ್ಲಿ ₹30 ಇದ್ದ ರೈಲು ಊಟದ ಬೆಲೆ ಈಗ ₹120ಕ್ಕೆ ಏರಿದೆ ಎಂದು ಉದಾಹರಣೆ ನೀಡಿದರು. ಅಲ್ಲದೆ, ರೈಲು ನಿಲ್ದಾಣಗಳಲ್ಲಿ ಕಾರು ಪಾರ್ಕಿಂಗ್‌ಗೆ 30 ನಿಮಿಷಗಳ ನಂತರವೇ ₹500 ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ಹೇಳಿದರು.

ಫೆಬ್ರವರಿಯಲ್ಲಿ ರೈಲ್ವೆಯಲ್ಲಿ ನಡೆದ ಕಾಲ್ತುಳಿತ ಘಟನೆಯನ್ನು ಉಲ್ಲೇಖಿಸಿದ ಅವರು, ಆ ಸಂದರ್ಭದಲ್ಲಿ ಕೇವಲ 1,700 ಪ್ರಯಾಣಿಕರ ಸಾಮರ್ಥ್ಯವಿರುವ 17 ಸಾಮಾನ್ಯ ದರ್ಜೆಯ ಬೋಗಿಗಳನ್ನು ಮಾತ್ರ ನಿಯೋಜಿಸಲಾಗಿತ್ತು. ಆದರೆ ಸರ್ಕಾರವು 9,600 ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು ಎಂದು ಗಂಭೀರ ಆರೋಪ ಮಾಡಿದರು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ವ್ಯಂಗ್ಯವಾಗಿ ಉಲ್ಲೇಖಿಸಿದ ಅಜಯ್ ಕುಮಾರ್, 2024ರಲ್ಲಿ ಸರ್ಕಾರ ರಚನೆಯಾದ ನಂತರ ರೈಲು ದರವನ್ನು ಈಗಾಗಲೇ ಎರಡು ಬಾರಿ ಹೆಚ್ಚಿಸಲಾಗಿದೆ ಎಂದು ಹೇಳಿದರು. ಸರ್ಕಾರವು ಪ್ರತಿ ಕಿಲೋಮೀಟರಿಗೆ ಕೇವಲ 1–2 ಪೈಸೆ ಹೆಚ್ಚಳವಾಗಿದೆ ಎಂದು ಹೇಳಿಕೊಂಡರೂ, ವಾಸ್ತವದಲ್ಲಿ ಪ್ರಯಾಣಿಕರಿಗೆ 100ರಿಂದ 200 ರೂಪಾಯಿಗಳವರೆಗೆ ಹೆಚ್ಚುವರಿ ಹೊರೆಯಾಗುತ್ತಿದೆ ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande