ಡಾ. ಪ್ರಶಾಂತ್‍ಕೊಂಕಲ್ ಅವರ ‘ಸೆಲ್ ಬಯಾಲಜಿ ಅಂಡ್ ಅನಿಮಲ್ ಹಿಸ್ಟಾಲಜಿ’ ಪುಸ್ತಕ ಬಿಡುಗಡೆ
ಕೊಪ್ಪಳ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಆಯೋಜಿಸಲಾದ “ರಿಸೆಂಟ್ ಟ್ರೆಂಡ್ಸ್ ಅಂಡ್ ಅಡ್ವಾನ್ಸಸ್ ಇನ್ ಪ್ಲಾಂಟ್ ಅಂಡ್ ಅನಿಮಲ್ ಸೈನ್ಸಸ್ ಆರ್‍ಟಿಎಪಿಎಎಸ್ RTAPAS–2025)” ಎಂಬ ಎರಡು
ಡಾ. ಪ್ರಶಾಂತ್‍ಕೊಂಕಲ್ ಅವರ ‘ಸೆಲ್ ಬಯಾಲಜಿ ಅಂಡ್ ಅನಿಮಲ್ ಹಿಸ್ಟಾಲಜಿ’ ಪುಸ್ತಕ ಬಿಡುಗಡೆ


ಕೊಪ್ಪಳ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಆಯೋಜಿಸಲಾದ “ರಿಸೆಂಟ್ ಟ್ರೆಂಡ್ಸ್ ಅಂಡ್ ಅಡ್ವಾನ್ಸಸ್ ಇನ್ ಪ್ಲಾಂಟ್ ಅಂಡ್ ಅನಿಮಲ್ ಸೈನ್ಸಸ್ ಆರ್‍ಟಿಎಪಿಎಎಸ್ RTAPAS–2025)” ಎಂಬ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ್‍ಕೊಂಕಲ್ ರಚಿಸಿರುವ‘ಸೆಲ್ ಬಯಾಲಜಿ ಅಂಡ್ ಅನಿಮಲ್ ಹಿಸ್ಟಾಲಜಿ (Cell Biology and Animal Histology) ಎಂಬ ಪಠ್ಯಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಸಿ.ಬಿ. ಗಣೇಶ್ ಮಾತನಾಡಿ ಈ ಪುಸ್ತಕವು ಜೀವಶಾಸ್ತ್ರ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗಿದ್ದು, ಸೆಲ್ ಬಯಾಲಜಿ ಮತ್ತು ಅನಿಮಲ್ ಹಿಸ್ಟಾಲಜಿಯ ಮೂಲಭೂತ ಮತ್ತು ಆಧುನಿಕ ಅಂಶಗಳನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದೆ ಎಂದು ಅಭಿಪ್ರಾಯಪಟ್ಟರು.

ಈ ಸಮಾರಂಭದಲ್ಲಿ ಕೇರಳದ ಕೇಂದ್ರ ವಿಶ್ವವಿದ್ಯಾಲಯ, ಗೌರವಾನ್ವಿತ ಕುಲಪತಿಗಳಾದ ಪೆÇ್ರ.ಸಿದ್ದು ಪಿ.ಅಲುಗೂರು ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪೆÇ್ರ.ಬಿ.ಕೆ.ರವಿ ಹಾಗೂ ಸಿಎಸ್‍ಐಆರ್ –ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ, ಪುಣೆಯ ಹಿರಿಯ ವಿಜ್ಞಾನಿ ಡಾ. ಸಯ್ಯಿದ್ ದಸ್ತಗೀರ್ ಅವರು ಉಪಸ್ಥಿತರಿದ್ದು, ಲೇಖಕರ ಪುಸ್ತಕದ ಕುರಿತು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಚನ್ನಬಸವ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದಡಾ.ಸುಂದರ ಮೇಟಿ, ಮಲ್ಲನಗೌಡ, ಹಿರಿಯ ಪ್ರಾಧ್ಯಾಪಕರಾಡಾ.ವಿಜಯಕುಮಾರ ಮಲಶೆಟ್ಟಿ, ಡಾ.ಅಮರೇಶಛಬ್ಬಿ ಡಾ.ಶ್ರೀನಾಥ ಡಾ.ಶಿವರಾಜ್ ಸೇರಿದಂತೆ ಮತ್ತುಸಮ್ಮೇಳನದಲ್ಲಿ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ಆಗಮಿಸಿದ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande