
ಬಳ್ಳಾರಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾರ್ಯದ ನಿಮಿತ್ತ ದುರಸ್ತಿ/ಕಬ್ಬಿಣ ಕಂಬಗಳ ಬದಲಾವಣೆ ಕಾಮಗಾರಿಯನ್ನು ಕೈಗೊಂಡಿರುವುದರಿಂದ ಡಿ.21 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಎಫ್-24 ಫೀಡರ್ ವ್ಯಾಪ್ತಿಯ ಬಂಡಿಮೋಟ್, ಬಾಪೂಜಿ ನಗರ, ಕುರಿಕಮೇಲ, ಕಮೇಲ ರಸ್ತೆ, ಬೆಂಗಳೂರು ರಸ್ತೆ, ತೇರು ಬೀದಿ, ಬ್ರೂಸ್‍ಪೇಟ್ ಪೊಲೀಸ್ ಠಾಣೆ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್