ಜನವರಿ 8ಕ್ಕೆ ಪಿಯೂಷ್ ಗೋಯಲ್ ಬ್ರಸೆಲ್ಸ್ ಭೇಟಿ
ನವದೆಹಲಿ, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮುಂದಿನ ವರ್ಷ ಜನವರಿ 8ರಂದು ಬ್ರಸೆಲ್ಸ್‌ಗೆ ಭೇ
Piyush goal


ನವದೆಹಲಿ, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವಿನ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮುಂದಿನ ವರ್ಷ ಜನವರಿ 8ರಂದು ಬ್ರಸೆಲ್ಸ್‌ಗೆ ಭೇಟಿ ನೀಡಲಿದ್ದಾರೆ.

ಎರಡು ದಿನಗಳ (ಜನವರಿ 8–9) ಬ್ರಸೆಲ್ಸ್ ಭೇಟಿಯ ವೇಳೆ ಗೋಯಲ್ ಅವರು ಯುರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ವ್ಯಾಪಾರ ಆಯುಕ್ತರಾದ ಮಾರೋಸ್ ಸೆಫ್ಕೊವಿಕ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಭಾರತ–EU ನಡುವಿನ ಸಮಗ್ರ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತವನ್ನು ತಲುಪಿವೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಭೇಟಿಗೆ ಮುನ್ನ, ಗೋಯಲ್ ಅವರು ಜನವರಿ 7ರಂದು ಲಿಚ್ಟೆನ್‌ಸ್ಟೈನ್‌ಗೆ ಭೇಟಿ ನೀಡಲಿದ್ದು, ಬಳಿಕ ಬ್ರಸೆಲ್ಸ್‌ನಲ್ಲಿ ವ್ಯಾಪಾರ ಸಂಬಂಧಿತ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟ ಎರಡೂ ಕಡೆಯವರು ಸಾಧ್ಯವಾದಷ್ಟು ಬೇಗ ಸಮತೋಲಿತ, ಸಮಗ್ರ ಮತ್ತು ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸಿರುವುದು ಗಮನಾರ್ಹವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande