
ಬಳ್ಳಾರಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಹ ಶಿಕ್ಷಕರುಗಳಿಗೆ ಜಿಲ್ಲಾ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಡಿ.22 ರಂದು ಬೆಳಿಗ್ಗೆ 10 ಗಂಟೆಗೆ ನಗರದ ವಾಡ್ರ್ಲಾ ಜೂನಿಯರ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಪ್ರಬಂಧ ಸ್ಪರ್ಧೆಯ ವಿಷಯಗಳು:
ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ: ಗುಣಮಟ್ಟದ ಶಿಕ್ಷಣದಲ್ಲಿ ಸಮಕಾಲೀನ ಕಲೀಕಾ ಪದ್ಧತಿಗಳು, ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮತ್ತು ಮಹತ್ವ, ಪರಿಸರ ಮಾಲಿನ್ಯ.
ಪ್ರೌಢಶಾಲಾ ಶಿಕ್ಷಕರಿಗಾಗಿ: ನನ್ನ ಅನಿಸಿಕೆಯಲ್ಲಿ ಹವಮಾನ ವೈಪರೀತ್ಯಗಳನ್ನು ತಡೆಯಲು ಅನುಸರಿಸಬಹುದಾದ ನಾವೀನ್ಯತಾ ಚಟುವಟಿಕೆಗಳು, ಆನ್ ಲೈನ್ ಶಿಕ್ಷಣದ ಸಾಧಕ-ಭಾದಕ, ಮಕ್ಕಳ ಕಲಿಕೆಯಲ್ಲಿ ಸಮೂಹ ಮಾಧ್ಯಮಗಳ ಮಹತ್ವ, ಅನುಕೂಲ ಮತ್ತು ಅನಾನುಕೂಲಗಳು.
ಚಿತ್ರಕಲಾ ಸ್ಪರ್ಧೆಯ ವಿಷಯಗಳು:
ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ: ಗ್ರಾಮೀಣ ಉದ್ಯೋಗಗಳು, ಹವಮಾನ ವೈಪರೀತ್ಯಗಳು, ಕಾಡು ಬೆಳೆಸಿ ದೇಶ ಉಳಿಸಿ.
ಪ್ರೌಢಶಾಲಾ ಶಿಕ್ಷಕರಿಗಾಗಿ: ಕಲಿಕಾ ಸ್ನೇಹಿ ಪರಿಸರ, ಮಕ್ಕಳ ಕಲಿಕೆ ಮೇಲೆ ಸಾಮಾಜಿಕ ನಡಾವಳಿಗಳ ಪ್ರಭಾವ, ಪರಿಸರ ಮಕ್ಕಳ-ವಿಕಾಸ.
ಸೂಚನೆ: ಮೇಲಿನ ಪ್ರಬಂಧ ಮತ್ತು ಚಿತ್ರಕಲೆಯ ವಿಷಯಗಳನ್ನು ಒಂದನ್ನು ಮಾತ್ರ ಒಂದು ಗಂಟೆಯ ಮುಂಚಿತವಾಗಿ ಸ್ಥಳದಲ್ಲಿಯೇ ಘೋಷಿಸಲಾಗುವುದು.
ಸ್ಪರ್ಧೆಗೆ ತಾಲೂಕು ಮಟ್ಟದಲ್ಲಿ ನಡೆದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕರುಗಳು ತಪ್ಪದೇ ಭಾಗವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮಾದೇವಿ.ಬಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್