ವಾಲ್ಮೀಕಿ ವಿವಿಯಲ್ಲಿ ಚೋಮನ ದುಡಿ ಚಲನಚಿತ್ರ ಪ್ರದರ್ಶನ
ರಾಯಚೂರು, 20 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಾಹಿತ್ಯ ಓದುವ ಬರೆಯುವ ಆಸಕ್ತಿಯನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ಯುವ ಮನಸ್ಸುಗಳಿಗೆ ಸಾಹಿತ್ಯ ಸಂಸ್ಕೃತಿಯನ್ನು ಹೆಚ್ಚಿಸಲು ಓದುವ ಜೊತೆಗೆ ಕಾದಂಬರಿ ಆಧಾರಿತ ಚಲನಚಿತ್ರ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ರಚಿಸುವ ವಿಶ್ಲೇಷಿಸುವ ವಿಮ
ವಾಲ್ಮೀಕಿ ವಿವಿಯಲ್ಲಿ ಚೋಮನ ದುಡಿ ಚಲನಚಿತ್ರ ಪ್ರದರ್ಶನ


ವಾಲ್ಮೀಕಿ ವಿವಿಯಲ್ಲಿ ಚೋಮನ ದುಡಿ ಚಲನಚಿತ್ರ ಪ್ರದರ್ಶನ


ರಾಯಚೂರು, 20 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಾಹಿತ್ಯ ಓದುವ ಬರೆಯುವ ಆಸಕ್ತಿಯನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ಯುವ ಮನಸ್ಸುಗಳಿಗೆ ಸಾಹಿತ್ಯ ಸಂಸ್ಕೃತಿಯನ್ನು ಹೆಚ್ಚಿಸಲು ಓದುವ ಜೊತೆಗೆ ಕಾದಂಬರಿ ಆಧಾರಿತ ಚಲನಚಿತ್ರ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ರಚಿಸುವ ವಿಶ್ಲೇಷಿಸುವ ವಿಮರ್ಶಿಸುವ ಕ್ರೀಯಾಶೀಲತೆ ಮತ್ತು ಸೃಜನಶಕ್ತಿ ಒದಗಿಸಬಹುದು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದ್ದಾರೆ.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿಂದು ಕನ್ನಡ ಅಧ್ಯಯನ ವಿಭಾಗ ಹಾಗೂ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಶಿವರಾಂ ಕಾರಂತರ ಕಾದಂಬರಿ ಆಧಾರಿತ ಸಿನಿಮಾ ಚೋಮನ ದುಡಿ ಪ್ರದರ್ಶನ ಉದ್ಘಾಟಿಸಿದ ಅವರು ಮಾತನಾಡಿದರು.

ಚೋಮನ ದುಡಿ ಕಾದಂಬರಿಯು ಕನ್ನಡದಲ್ಲಿ ಒಂದು ಪ್ರಮುಖ ಕೃತಿಯಾಗಿದ್ದು, ಅಂದಿನ ಕಾಲದ ಕಟು ವಾಸ್ತವತೆ ಸಮಾಜದ ಮುಂದಿಟ್ಟ ಸಾಹಿತ್ಯ ಮತ್ತು ಚಲನಚಿತ್ರ ಚೋಮನ ದುಡಿಯಾಗಿದೆ ಸ್ವಾತಂತ್ರ್ಯ ಪೂರ್ವ ಕಾಲದ ದಲಿತರ ಬದುಕು, ಅಸ್ಪøಶ್ಯತೆ ಜಾತಿವ್ಯವಸ್ಥೆ ಭೂಮಾಲೀಕ-ಭೂಮಿರಹಿತ ಕಾರ್ಮಿಕರ ನಡುವಿನ ಶೋಷಣೆಯನ್ನು ತೀರ್ವವಾಗಿ ಟೀಕಿಸುತ್ತದೆ ನಾಡು-ದೇಶ ಹೆದರುಸುತ್ತಿರುವ ಸಮಸ್ಯೆಯನ್ನಿಟ್ಟುಕೊಂಡು ರಚಿಸಿದ ಕೃತಿಯಲ್ಲಿ ಚೋಮ ಎಂಬ ಅಸ್ಪøಶ್ಯ ಕೃಷಿಕನ ಕನಸುಗಳು, ಬವಣೆಗಳು ಮತ್ತು ಸಮಾಜದ ಕೌರ್ಯದ ಬಲಗೊಂಬೆಯಾಗಿ ಅಸಹಾಯಕನಾಗಿ ಜೀವಿಸುವ ಚಿತ್ರಣವನ್ನು ನೀಡುವ ಮೂಲಕ ಸಾಮಾಜಿಕ ಅಸಮಾನತೆಗಳ ಬಗ್ಗೆ ಬಿಂಬಿಸುವ ಈ ಕಾದಂಬರಿ ಅನೇಕ ತಾಂತ್ರಿಕ ಕೌಶಲ್ಯಗಳನ್ನು ಒಳಗೊಂಡು ಸಿನಿಮಾವಾಗಿ ರೂಪತಾಳಿದ ಇದು ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಹಾಗೂ ಸಿನಿಮಾವನ್ನು ವಿಶ್ಲೇಷಿಸುವ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.

ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಇತರ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಆಸಕ್ತಿಮೂಡಿಸಿಕೊಳ್ಳಬೇಕು ನಮ್ಮ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಕಾರಣ ವಿದ್ಯಾರ್ಥಿಗಳಲ್ಲಿ ಜ್ಞಾನರ್ಜನೆ ಮೂಡಿಸುವುದು ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಸರ ಅಭಿವೃದ್ಧಿಗೊಳಿಸುವುದಾಗಿದೆ. ಕಾದಂಬರಿ ಆಧಾರಿತ ಹಾಗೂ ಕಲಾತ್ಮಕ ಸಿನಿಮಾ ಪ್ರದರ್ಶನದ ಮುಖ್ಯ ಉದ್ದೇಶ ಓದಿಕಲಿಯುವುದಕ್ಕಿಂತ ನೋಡಿಕಲಿಯುವುದಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದಾಗಿದೆ ಎಂದು ಅವರು ತಿಳಿಸಿದರು.

ವೇದಿಕೆ ಮೇಲೆ ಕುಲಸಚಿವರಾದ(ಮೌಲ್ಯಮಾಪನ) ಡಾ.ಜ್ಯೋತಿ ಧಮ್ಮ ಪ್ರಕಾಶ್, ಉಪಕುಲಚಿವರಾದ ಡಾ.ಕೆ.ವೆಂಕಟೇಶ್, ಡೀನರಾದ ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್., ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಪಾರ್ವತಿ.ಸಿ.ಎಸ್, ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಸುಯಮೀಂದ್ರ ಕುಲಕರ್ಣಿ, ಕನ್ನಡ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಶಿವರಾಜ ಯತಗಲ್, ಕಾರ್ಯಕ್ರಮದಲ್ಲಿ ಡಾ.ಶರಣಪ್ಪ ಚಲುವಾದಿ, ಡಾ.ಗೀತಾಂಜಲಿ ವಿವಿಧ ವಿಭಾಗಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ರಾಜೇಶ್ವರಿ ಸ್ವಾಗತಿಸಿ ನಿರೂಪಿಸಿದರು, ಡಾ.ಶಿವಲೀಲಾ ಬಸನಗೌಡ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande