
ನವದೆಹಲಿ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಖ್ಯಾತ ಶಿಲ್ಪಿ ಹಾಗೂ ಏಕತಾ ಪ್ರತಿಮೆಯ ಶಿಲ್ಪಕಾರ ರಾಮ್ ಸುತಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮ್ ಸುತಾರ್ ಅವರನ್ನು ಅಸಾಧಾರಣ ಕಲಾವಿದ ಎಂದು ಬಣ್ಣಿಸಿದ ಪ್ರಧಾನಿ, ಅವರ ಕಲಾತ್ಮಕ ಪ್ರತಿಭೆ ಭಾರತಕ್ಕೆ ಏಕತಾ ಪ್ರತಿಮೆ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸಂದೇಶ ಪ್ರಕಟಿಸಿದ ಮೋದಿ, ರಾಮ್ ಸುತಾರ್ ಅವರ ಶಿಲ್ಪಗಳು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಸಾಮೂಹಿಕ ಮನೋಭಾವದ ಶಕ್ತಿಶಾಲಿ ಅಭಿವ್ಯಕ್ತಿಗಳಾಗಿವೆ ಎಂದು ಹೇಳಿದರು.
“ಅವರು ಮುಂದಿನ ಪೀಳಿಗೆಗಳಿಗೆ ರಾಷ್ಟ್ರೀಯ ಹೆಮ್ಮೆಯನ್ನು ಅಮರಗೊಳಿಸಿದ್ದಾರೆ. ಅವರ ಕೃತಿಗಳು ಕಲಾವಿದರು ಮಾತ್ರವಲ್ಲ, ಸಾಮಾನ್ಯ ನಾಗರಿಕರಿಗೂ ಸದಾ ಸ್ಫೂರ್ತಿಯ ಮೂಲವಾಗಿರುತ್ತವೆ” ಎಂದು ಪ್ರಧಾನಿ ತಿಳಿಸಿದ್ದಾರೆ.
ರಾಮ್ ಸುತಾರ್ ಅವರ ನಿಧನದಿಂದ ತಮಗೆ ತೀವ್ರ ದುಃಖವಾಗಿದೆ ಎಂದು ಹೇಳಿದ ಮೋದಿ, ಅವರ ಕೊಡುಗೆಗಳನ್ನು ಭಾರತೀಯ ಕಲಾ ಜಗತ್ತು ಸದಾಕಾಲ ಸ್ಮರಿಸಲಿದೆ ಎಂದು ಹೇಳಿದರು. ದಿವಂಗತ ಶಿಲ್ಪಿಯ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಅವರ ಜೀವನ ಮತ್ತು ಕೃತಿಗಳಿಂದ ಪ್ರೇರಣೆ ಪಡೆದ ಎಲ್ಲರಿಗೂ ಪ್ರಧಾನಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa