ಸುಕ್ಮಾದಲ್ಲಿ ಎನ್‌ಕೌಂಟರ್‌ : ಮೂವರು ನಕ್ಸಲರು ಹತ
ರಾಯ್‌ಪುರ, 18 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಗೊಲ್ಲಪಲ್ಲಿ ಪ್ರದೇಶದ ಅರಣ್ಯದಲ್ಲಿ ಬುಧವಾರ ಬೆಳಿಗ್ಗೆಯಿಂದ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ ಒಬ್ಬ ಮಹಿಳಾ ನಕ್ಸಲ ಸೇರಿದಂತೆ ಮೂವರು ನಕ್ಸಲರು ಸಾವನ್ನಪ್
Sukma  sp office


ರಾಯ್‌ಪುರ, 18 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಗೊಲ್ಲಪಲ್ಲಿ ಪ್ರದೇಶದ ಅರಣ್ಯದಲ್ಲಿ ಬುಧವಾರ ಬೆಳಿಗ್ಗೆಯಿಂದ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ಎನ್‌ಕೌಂಟರ್‌ನಲ್ಲಿ ಒಬ್ಬ ಮಹಿಳಾ ನಕ್ಸಲ ಸೇರಿದಂತೆ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿರುವ ಶಂಕೆ ಇದೆ.

ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಅವರು ಎನ್‌ಕೌಂಟರ್ ನಡೆದಿರುವುದನ್ನು ಹಾಗೂ ಮೂವರು ನಕ್ಸಲರ ಹತ್ಯೆಯನ್ನು ದೃಢಪಡಿಸಿದ್ದಾರೆ. ಪೊಲೀಸ್ ಅಧೀಕ್ಷಕರ ಕಚೇರಿಯ ಮಾಹಿತಿ ಪ್ರಕಾರ, ಹತರಾದ ನಕ್ಸಲರು ಕಿಸ್ತಾರಾಮ್ ಪ್ರದೇಶ ಸಮಿತಿಯ ಸಕ್ರಿಯ ಸದಸ್ಯರಾಗಿದ್ದು, ಮದ್ವಿ ಜೋಗಾ ಅಲಿಯಾಸ್ ಮುನ್ನಾ ಅಲಿಯಾಸ್ ಜಗತ್ (ಎಸಿಎಂ), ಸೋಧಿ ಬಂಡಿ (ಎಸಿಎಂ) ಹಾಗೂ ಮಹಿಳಾ ನಕ್ಸಲೈಟ್ ನುಪ್ಪೋ ಬಜ್ನಿ (ಎಸಿಎಂ) ಎಂದು ಗುರುತಿಸಲಾಗಿದೆ.

ಭದ್ರತಾ ಪಡೆಗಳ ಡಿಆರ್ ತಂಡಗಳು ಅರಣ್ಯ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಮುಂದುವರೆಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande