
ನವದೆಹಲಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗೋವಾದ ಐಎನ್‌ಎಸ್ ಹನ್ಸಾದಲ್ಲಿ ಭಾರತೀಯ ನೌಕಾಪಡೆಯು ಅಮೆರಿಕನ್ ನಿರ್ಮಿತ MH-60R ‘ರೋಮಿಯೋ’ ಸೀಹಾಕ್ ಹೆಲಿಕಾಪ್ಟರ್‌ಗಳ ಎರಡನೇ ಸ್ಕ್ವಾಡ್ರನ್‌ನ್ನು ಬುಧವಾರ ನಿಯೋಜಿಸಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರ ಸಮ್ಮುಖದಲ್ಲಿ ಐಎನ್‌ಎಎಸ್ 335 ಅನ್ನು ಸೇವೆಗೆ ಸೇರಿಸಲಾಯಿತು.
ಈ ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ಸೇರ್ಪಡೆಯಿಂದ ಪಾಕಿಸ್ತಾನ ಹಾಗೂ ಚೀನಾದ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ನಾಶಪಡಿಸುವಲ್ಲಿ ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ಬಲವಾಗಿದೆ. ಜಲಾಂತರ್ಗಾಮಿ ವಿರೋಧಿ ಯುದ್ಧ (ASW), ಮೇಲ್ಮೈ ಯುದ್ಧ, ಕ್ಷಿಪಣಿ ದಾಳಿ, ಕಣ್ಗಾವಲು, ಹುಡುಕಾಟ–ರಕ್ಷಣೆ ಹಾಗೂ ವೈದ್ಯಕೀಯ ಸ್ಥಳಾಂತರ ಕಾರ್ಯಗಳಿಗೆ ‘ರೋಮಿಯೋ’ ವಿನ್ಯಾಸಗೊಳಿಸಲಾಗಿದೆ.
ಹೆಲ್‌ಫೈರ್ ಕ್ಷಿಪಣಿಗಳು, MK-54 ಟಾರ್ಪಿಡೊಗಳು, ರಾಕೆಟ್‌ಗಳು, ಸುಧಾರಿತ ರಾಡಾರ್‌ಗಳು ಮತ್ತು ಸಂವೇದಕಗಳೊಂದಿಗೆ ಸಜ್ಜುಗೊಂಡಿರುವ ಈ ಹೆಲಿಕಾಪ್ಟರ್‌ಗಳು ನೈಜ ಸಮಯದಲ್ಲೇ ನೀರಿನ ಅಡಗಿನ ಗುರಿಗಳನ್ನು ಪತ್ತೆಹಚ್ಚಲಿವೆ. ನಾಲ್ಕು ಆರೋಹಣ ಬಿಂದುಗಳು ಮತ್ತು 7.62 ಎಂಎಂ ಮೆಷಿನ್ ಗನ್ ಅಳವಡಿಕೆಯ ಆಯ್ಕೆಯೂ ಇದೆ.
ಭಾರತವು ಲಾಕ್‌ಹೀಡ್ ಮಾರ್ಟಿನ್‌ನಿಂದ $2.6 ಬಿಲಿಯನ್ ವೆಚ್ಚದಲ್ಲಿ 24 MH-60R ಹೆಲಿಕಾಪ್ಟರ್‌ಗಳನ್ನು ಖರೀದಿಸಿದ್ದು, ಇದೀಗ ಎರಡನೇ ಪೂರ್ಣ ಪ್ರಮಾಣದ ಸ್ಕ್ವಾಡ್ರನ್ ರೂಪುಗೊಂಡಿದೆ. ಇದರಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಭಾರತೀಯ ನೌಕಾಪಡೆಯ ಕಡಲ ಉಪಸ್ಥಿತಿ ಮತ್ತು ಯುದ್ಧ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa