ಮತದಾನದ ಮಹತ್ವದ್ದು : ಡಾ.ಈರಣ್ಣ ಕೋಸಗಿ
ರಾಯಚೂರು, 15 ಡಿಸೆಂಬರ್ (ಹಿ.ಸ.) : ಆ್ಯಂಕರ್ : ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟಿಯ ಮತದಾರರ ದಿನಾಚರಣೆಯ ಅಂಗವಾಗಿ ರಾಯಚೂರು ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆ ಹಾಶ್ಮಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿ
ಮತದಾನದ  ಮಹತ್ವದ್ದು: ಡಾ.ಈರಣ್ಣ ಕೋಸಗಿ


ರಾಯಚೂರು, 15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟಿಯ ಮತದಾರರ ದಿನಾಚರಣೆಯ ಅಂಗವಾಗಿ ರಾಯಚೂರು ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆ ಹಾಶ್ಮಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಯಿತ್ತು.

ಕಾರ್ಯಕ್ರಮಕ್ಕೆ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಈರಣ್ಣ ಕೋಸಗಿ ಅವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ, ಅವರು ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಒಂದೊ0ದು ಮತವು ಅತ್ಯಮೂಲ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿಯ ಮೂಡಿಸಲು ಪ್ರತಿ ವರ್ಷ ರಾಷ್ಟಿಯ ಮತದಾರ ದಿನಾಚರಣೆ ಹಿನ್ನಲೆಯಲ್ಲಿ ಹಲವಾರು ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯಮಟ್ಟಕ್ಕೆ ಆಯ್ಕೆ ಆಗುವುದರ ಮೂಲಕ ರಾಯಚೂರು ತಾಲೂಕಿಗೆ ಕೀರ್ತಿ ತರಬೇಕೆಂದರು.

ಈ ವೇಳೆ ಮತದಾರರ ಸಾಕ್ಷರತಾ ಕ್ಲಬ್ ಜಿಲ್ಲಾ ನೂಡಲ್ ಅಧಿಕಾರಿ ಡಾ.ದಂಡಪ್ಪ ಬಿರಾದಾರ್ ಅವರು ಮಾತನಾಡಿ, ನಮ್ಮದು ಪ್ರಜಾಪ್ರಭುತ್ವ ರಾಷ್ಟ ಲಿಖಿತ ಸಂವಿಧಾನ ಹೊಂದಿರುವ0ತಹ ದೇಶ. ನಮ್ಮ ದೇಶದಲ್ಲಿ ಜನನಾಯಕನ ಆಯ್ಕೆ ಮಾಡಲು ಮತದಾನದ ಮೂಲಕ ಆಯ್ಕೆ ಮಾಡುತ್ತಿರುವುದು ತಮಗೆಲ್ಲ ತಿಳಿದಿರುವ ವಿಷಯ. ಈ ಒಂದು ಪ್ರಬಂಧ ಸ್ಪರ್ಧೆಯನ್ನು ಶಾಲಾ ಮಟ್ಟದಲ್ಲಿ ಮುಖ್ಯ ಗುರುಗಳು ನೇತೃತ್ವದಲ್ಲಿ ನಡೆಯುತ್ತದೆ. ತಾಲೂಕ ಮಟ್ಟದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತದೆ. ವಿದ್ಯಾರ್ಥಿಗಳು ಈ ಒಂದು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಜಿಲ್ಲಾ ಮಟ್ಟಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಂತ ವಿದ್ಯಾರ್ಥಿಗಳ ಹೆಸರನ್ನ ಕಳಿಸಿಕೊಡಲಾಗುತ್ತದೆ. ತಾಲೂಕ ಜಿಲ್ಲಾ ಮತ್ತು ರಾಜ್ಯ ಮಟ್ಟಕೆ ಆಯ್ಕೆ ಆದಂತಹ ವಿದ್ಯಾರ್ಥಿಗಳಿಗೆ ರಾಷ್ಟಿçÃಯ ಮತದಾರ ದಿನಾಚರಣೆ ದಿನದಂದು ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಕೊಟ್ಟು ಗೌರವಿಸಲಾಗುವುದು ಎಂದರು.

ಈ ವೇಳೆ ಹಾಸ್ಮಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಹದೇವಪ್ಪ ಮಿರ್ಜಾಪುರ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಬಗ್ಗೆ ಜೊತೆಗೆ ರಾಷ್ಟಿçÃಯ ಮತದಾರರ ದಿನಾಚರಣೆಯ ವಿಷಯ ತಿಳಿದುಕೊಳ್ಳಲು ಇದು ಅತ್ಯುತ್ತಮ ಕಾರ್ಯಕ್ರಮ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕ ಮತದಾರ ಸಾಕ್ಷರತಾ ಕ್ಲಬ್ ನೋಡಲ್ ಸಂಯೋಜಕ ಸಿ.ಪಿ.ಓದಿಸೋಮಠ, ಶಿಕ್ಷಣ ಸಂಯೋಜಕ ರಾಘವೇಂದ್ರ, ಶಿಕ್ಷಕರಾದ ಸೌಮ್ಯಶ್ರೀ, ವೆಂಕಟೇಶ ನವಲಿ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande