
ಗಂಗಾವತಿ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗಂಗಾವತಿಯ ಬಹುಜನರ ಆರಾಧ್ಯ ಗ್ರಾಮದೇವತೆ ಶ್ರೀದುರ್ಗಾದೇವಿಯ ಜಾತ್ರಾ ಮಹೋತ್ಸವವು ಡಿಸೆಂಬರ್ 18, 19, 20 ಮತ್ತು 21 ರ ನಾಲ್ಕು ದಿನಗಳ ಕಾಲ ನಡೆಯಲಿದೆ.
ಶ್ರೀದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣ ನಾಯಕ ಅವರು ಈ ಮಾಹಿತಿ ನೀಡಿದ್ದು, ಡಿಸೆಂಬರ್ 18 ರ ಗುರುವಾರ ಬೆಳಗ್ಗೆ 09 ರಿಂದ ಶ್ರೀ ಕಲ್ಮಠ ಸಮೀಪದ ಗಾಳೆಮ್ಮ ದೇವಿ ದೇವಸ್ಥಾನದಿಂದ ಪೂರ್ಣ ಕುಂಬ ಹೊರಡಲಿದ್ದು, ಗಾಂಧಿ ವೃತ್ತದ ಮೂಲಕ ಶ್ರೀ ದುರ್ಗಾದೇವಿ ದೇವಸ್ಥಾನ ತಲುಪಲಿದೆ.
ನಂತರ ಮಹಾಸಂಕಲ್ಪ ಶ್ರೀದುರ್ಗಾ ಸಪ್ತಪತಿ ಪಾರಾಯಣ, ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ಬಳಿಕ ಸಂಜೆ 6 ಗಂಟೆಗೆ ಕುಂಕುಮಾರ್ಚನೆ ನೆರವೇರಲಿದೆ. ಡಿಸೆಂಬರ್ 19 ಶುಕ್ರವಾರ ಬೆಳಗ್ಗೆ 09:15 ರಿಂದ ಶ್ರೀ ಗಣಪತಿ ಪೂಜೆ, ಮಹಾಸಂಕಲ್ಪ ಪುಣ್ಯಾಹವಾಚನ, ಶ್ರೀ ದುರ್ಗಾ ಸಪ್ತಪತಿ ಪಾರಾಯಣ ಅನ್ನ ಸಂತರ್ಪಣೆ ನಂತರ ಸಂಜೆ 6 ಯಿಂದ ಲಿಲಿತ ಸಹಸ್ರ ನಾಮ ಪಾರಾಯಣ ಮಾಡಲಾಗುವುದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ ಮಾತನಾಡಿ, ಡಿ. 20 ರಂದು ಶನಿವಾರ ಬೆಳಗ್ಗೆ 9: 15ಕ್ಕೆ
ಶ್ರೀ ನವಚಂಡಿ ಹೋಮ, ಪೂರ್ಣಾಹುತಿ ಮಧ್ಯಾಹ್ನ 1-30ಕ್ಕೆ ಮಹಾ ಪ್ರಸಾದ, ಸಂಜೆ 6-30 ರಿಂದ ಶ್ರೀ ಕಲ್ಮಠ ಹತ್ತಿರದ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದಿಂದ ಶ್ರೀ ದುರ್ಗಾದೇವಿ ದೇವಸ್ಥಾನದವರೆಗೆ ಡೊಳ್ಳು ಬಾಜಾ ಬಜೆಂತ್ರಿ ಸಕಲ ವಾದ್ಯ ವೈಭವದೊಂದಿಗೆ, ಅದ್ಧೂರಿ ಬಾಣ ಬಿರುಸು ಪ್ರದರ್ಶನ, ದೇವಿ ವಿಗ್ರಹದ ಭವ್ಯ ಮೆರಣೆಗೆ ಜರುಗಲಿದೆ ಎಂದರು.
ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನರಸಪ್ಪ ಅಮರಜ್ಯೋತಿ ಮಾತನಾಡಿ, ಡಿಸೆಂಬರ್ 21 ರವಿವಾರದಂದು ಶ್ರೀದುರ್ಗಾದೇವಿಗೆ ಅಭಿಷೇಕ, ಅಲಂಕಾರ ಪೂಜೆ, ಮಹಾ ಮಂಗಳಾರತಿ ಜರುಗಲಿದ್ದು, ಮಧ್ಯಾಹ್ನ 12 ಕ್ಕೆ ಮಹಾ ಪ್ರಸಾದ ನೆರವೇರಲಿದ್ದು ಗಂಗಾವತಿ ಹಾಗು ಸುತ್ತಮುತ್ತಲಿನ ಸರ್ವ ಸಮಾಜ ಬಾಂಧವರು ತನುಮನಧನದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಶ್ರೀದುರ್ಗಾದೇವಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ವೆಂಕಟೇಶ್ ಅಮರಜ್ಯೋತಿ, ವೀರಭದ್ರಪ್ಪ ನಾಯಕ, ಶಿರವಾರ ಲಕ್ಷ್ಮಣಪ್ಪ, ನೀಲಕಂಠ ಕಟ್ಟಿಮನಿ, ನಾಗರಾಜು ಲಿಂಗರಾಜಪ್ಪ, ಗೀತಾ ವಿಕ್ರಮ್, ಅನ್ನಪೂರ್ಣ ಸಿಂಗ್, ರಮೇಶ್ ಚೌಡ್ಕಿ, ಜೋಗದ ದುರುಗಪ್ಪ ದಳಪತಿ, ಚಂದ್ರಶೇಖರ್ ಬಿಚ್ಛಾಲಿ, ಎಸ್‍ಎಸ್ ಪಟ್ಟಣಶೆಟ್ಟಿ ವಕೀಲರು, ರಂಗನಾಥ್ ವಕೀಲರು ಹಾಗು ಹನುಮಂತಪ್ಪ ಆದಾಪುರ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್