
ರಾಯಚೂರು, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇ-ಪೋತಿ ಅಂದೋಲನವನ್ನು ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳ0ದು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಅಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಕೋರಿದ್ದಾರೆ.
ಇ-ಪೋತಿ ಅಂದೋಲನಕ್ಕೆ ಮೃತ ಖಾತೆದಾರರ ಹೆಸರಿನಲ್ಲಿ ಇರುವ ಜಮೀನನ್ನು ಅವರ ಕುಟುಂಬ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರದ ಆದೇಶ ಸಂಖ್ಯೆ ಸಂ/ಕA-ಇ/169/ಟಿ.ಆರ್.ಎ0. ದಿನಾಂಕ 20-03-2025ರ ಪ್ರಕಾರ ಮೃತ ಖಾತೆದಾರರ ಖಾತೆ ಬದಲಾವಣೆ ಮಾಡಲು ಆದೇಶಿಸಲಾಗಿದ್ದು, ಅದರಂತೆ ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 19,363 ಪೋತಿ ಪ್ರಕರಣಗಳಲ್ಲಿ ಪಟ್ಟೆದಾರರು ಮರಣ ಹೊಂದಿದ್ದು, ಈ ಪಟ್ಟೆದಾರರ ಹೆಸರಿಗೆ ಇರುವ ಜಮೀನುಗಳನ್ನು ಇ- ಪೋತಿ ತಂತ್ರಾ0ಶದ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಇ-ಪೋತಿ ತಂತ್ರಾ0ಶದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಲು ಸೂಚಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲೆ ಅತಿ ಹೆಚ್ಚು ಪೋತಿ ಪ್ರಕರಣಗಳು ಭಾಕಿ ಇರುವುದರಿಂದ ರಾಯಚೂರು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳ ಗ್ರಾ.ಮ ಲೆಕ್ಕ .ವೃತ್ತವಾರು ದಿನಾಂಕಗಳನ್ನು ನಿಗದಿಪಡಿಸಿದ್ದು, ಇ-ಪೋತಿ ಆಂದೋಲನ ಪ್ರಾರಂಭವಾಗುವ ಮುಂಚೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಡಂಗೂರ ಮುಖಾಂತರ ಹಾಗೂ ಮೈಕ್ ಮುಖಾಂತರ ಈ ದಿನಾಂಕಗಳ0ದು ಸೂಕ್ತ ದಾಖಲೆಗಳೊಂದಿಗೆ ಮುಟೇಷನ್ ಮಾಡಿಸಿಕೊಳ್ಳಲು ದಾಖಲೆಗಳನ್ನು ಸಲ್ಲಿಸಲು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು.
ಈ ದಿನಾಂಕಗಳ0ದು ಉಪ ತಹಶಿಲ್ದಾರರ ನೇತೃತ್ವದಲ್ಲಿ ಸಂಬ0ಧಿಸಿದ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಈ ದಿನಾಂಕಗಳ0ದು ಗ್ರಾಮ.ಲೆಕ್ಕ ವೃತ್ತದಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಮುಟೇಷನ್ ಅರ್ಜಿಗಳನ್ನು ಸ್ವೀಕರಿಸಬೇಕು. ಹಾಗೂ ಈ ಮುಟೇಷನ್ ಅರ್ಜಿಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಇ-ಪೋತಿ ತಂತ್ರಾ0ಶದಲ್ಲಿ ಅಥವಾ ಭೂಮಿ ಕೇಂದ್ರದಲ್ಲಿ ಬಂದು ಅದೇ ದಿನ ನೊಂದಣಿ ಮಾಡಿಸಲು ಸಂಭAದಿಸಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೂ ತಮ್ಮ ವ್ಯಾಪ್ತಿಯಲ್ಲಿ ಭಾಕಿ ಇರುವ ಆಧಾರ ಸೀಡಿಂಗ್‌ನ್ನು ಮಾಡಲು ಸೂಚಿಸಲಾಗಿದೆ.
ಹೋಬಳಿವಾರು ಇ-ಪೋತಿ ಆಂದೋಲನ ದಿನಾಂಕಗಳು: ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಹೋಬಳಿಯಲ್ಲಿ ಡಿಸೆಂಬರ್ 16ರಂದು ಗ್ರಾಮ ಆಡಳಿತ ಅಧಿಕಾರಿ ಭಾರತಿ ಅವರ ನೇತೃತ್ವದಲ್ಲಿ ಗಾಣಧಾಳ, ಗುಂಡ್ರವೇಲಿ, ಚಿಕ್ಕಮಂಚಾಲಿ ಬುಡದಿನ್ನಿ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ವಾಜೇಂದ್ರ ಅವರ ನೇತೃತ್ವದಲ್ಲಿ ಬಿಚ್ಚಾಲಿ, ತುಂಗಭದ್ರ, ಗಟ್ಟುಬಿಚ್ಚಾಲಿ, ತಲಮಾರಿ, ಗಂಗಾವರ, ಎನ್.ಮಲ್ಕಾಪುರು, ಮಿರ್ಜಾಪುರು, ಮೀರಾಪುರ. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ಚಂದ್ರಶೇಖರ ಅವರ ನೇತೃತ್ವದಲ್ಲಿ ತುರಕಂಡೊಣ, ಯದ್ಲಾಪುರು, ಮೂಡಲದಿನ್ನಿ. ಡಿಸೆಂಬರ್ 19ರಂದು ಗ್ರಾಮ ಆಡಳಿತ ಅಧಿಕಾರಿ ಹೀರೆ ಲಿಂಗರಾಜ ಅವರ ನೇತೃತ್ವದಲ್ಲಿ ಇಡಪನೂರು. ಡಿಸೆಂಬರ್ 20ರಂದು ಗ್ರಾಮ ಆಡಳಿತ ಅಧಿಕಾರಿ ರಮೇಶ ಅವರ ನೇತೃತ್ವದಲ್ಲಿ ಮಟಮಾರಿ. ಡಿಸೆಂಬರ್ 20ರಂದು ಗ್ರಾಮ ಆಡಳಿತ ಅಧಿಕಾರಿ ಆಪ್ರೀನ್ ಅವರ ನೇತೃತ್ವದಲ್ಲಿ ಹನುಮಾಪುರ, ಹೀರಾಪುರ, ಕಟಕನೂರು, ಕೋತಿಗುಡ್ಡದಲ್ಲಿ ನಡೆಯಲಿದೆ.
ಚಂದ್ರಬ0ಡ ಹೋಬಳಿಯಲ್ಲಿ ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಶಾರದ ಅವರ ನೇತೃತ್ವದಲ್ಲಿ ಚಂದ್ರಬ0ಡ, ಕಡಗಂದೊಡ್ಡಿ, ಅರಸಿಗೇರಾ. ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಸಾಯಿಬಣ್ಣ ಅವರ ನೇತೃತ್ವದಲ್ಲಿ ಕಟ್ಲಟಕೂರು, ಗಣಮೂರು. ಡಿಸೆಂಬರ್ 16ರಂದು ಸಿಂಗನೋಡಿ, ಮಂಡಲಗೇರ, ವಡ್ಲಂದೊಡ್ಡಿ, ಕುರುಬದೊಡ್ಡಿ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ಯಂಕಮ್ಮ ಅವರ ನೇತೃತ್ವದಲ್ಲಿ ಯಾಪಲದಿನ್ನಿ, ಗಾಜರಾಳ, ಬುಡದಿಪಾಡ, ಕೂರ್ತಿಪ್ಲಿ, ಅಪ್ಪನದೊಡ್ಡಿ, ರಾಳದೊಡ್ಡಿ. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ದೇಶಪಾಂಡೆ ಅವರ ನೇತೃತ್ವದಲ್ಲಿ ಡಿ.ರಾಂಪುರ, ಆಗ್ರಹಾರ, ಕುರ್ವಕುರ್ದಾ, ವಡ್ಡೆಪಲ್ಲಿ, ಕುರ್ವಕಲಾ. ಡಿಸೆಂಬರ್ 19ರಂದು ಗ್ರಾಮ ಆಡಳಿತ ಅಧಿಕಾರಿ ಬಾಬು ಅವರ ನೇತೃತ್ವದಲ್ಲಿ ಕೂಡ್ಲೂರು, ಇಬ್ರಾಹಿಂದೊಡ್ಡಿ, ವಡ್ಲೂರು. ಡಿಸೆಂಬರ್ 20ರಂದು ಗ್ರಾಮ ಆಡಳಿತ ಅಧಿಕಾರಿ ಸುರೇಶ ಅವರ ನೇತೃತ್ವದಲ್ಲಿ ಆತ್ಕೂರಿನಲ್ಲಿ ಇ-ಪೋತಿ ಅಂದೋಲನ ನಡೆಯಲಿದೆ.
ಕಲಮಲಾ ಹೋಬಳಿಯಲ್ಲಿ ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಶರಣಬಸವ ಅವರ ನೇತೃತ್ವದಲ್ಲಿ ಕಲಮಲಾ. ಡಿಸೆಂಬರ್ 16ರಂದು ಗ್ರಾಮ ಆಡಳಿತ ಅಧಿಕಾರಿ ರಾಜಶೇಖರ ಅವರ ನೇತೃತ್ವದಲ್ಲಿ ನೆಲಹಾಳ, ಮಮದಾಪುರ, ಆಶಾಪುರ, ಅರಳಿಬೆಂಚಿ, ಹೊಸೂರು. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ಹಸನ್ ಅವರ ನೇತೃತ್ವದಲ್ಲಿ ಹುಣಸಿಹಾಳಹುಡ, ಗೊನ್ಹಾಳ. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ರಂಗಬಸವರಾಜ ಅವರ ನೇತೃತ್ವದಲಿ ಸುಲ್ತಾನಪುರ, ಮುರಾನಪುರ, ರಘುನಾಥನಹಳ್ಳಿ, ಅರಳಪ್ಪನಹುಡ, ಹಾಳವೆಂಕಟಾಪುರ ಹಾಗೂ ಡಿಸೆಂಬರ್ 19ರಂದು ಎ.ಮಲ್ಲಾಪುರ, ಶ್ರೀನಿವಾಸಪುರ, ಹೆಂಬೆರಾಳ, ಜಿ.ತಿಮ್ಮಾಪುರ, ಜಿ.ಹನುಮಾಪುರ. ಡಿಸೆಂಬರ್ 20ರಂದು ಗ್ರಾಮ ಆಡಳಿತ ಅಧಿಕಾರಿ ಶೇತ್ವ ಅವರ ನೇತೃತ್ವದಲ್ಲಿ ಜೇಗರಕಲ್. ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಮಹಾಂತೇಶ ಅವರ ನೇತೃತ್ವದಲ್ಲಿ ಜಾಗೀರವೆಂಕಟಾಪುರ. ಡಿಸೆಂಬರ್ 16ರಂದು ಗ್ರಾಮ ಆಡಳಿತ ಅಧಿಕಾರಿ ನೀಲವೇಣಿ ಅವರ ನೇತೃತ್ವದಲ್ಲಿ ಚಿಕ್ಕಸೂಗೂರ, ಹೊಸಪೇಟ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ಶ್ರೀನಿವಾಸ ಅವರ ನೇತೃತ್ವದಲ್ಲಿ ಮನ್ಸಲಾಪುರ, ಕುಕನೂರು. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ಶಾಂತಾ ಅವರ ನೇತೃತ್ವದಲ್ಲಿ ಮರ್ಚೆಟಹಾಳ, ಪೆಸಲದಿನ್ನಿ, ಗಾರಲದಿನ್ನಿ. ಡಿಸೆಂಬರ್ 19ರಂದು ಗ್ರಾಮ ಆಡಳಿತ ಅಧಿಕಾರಿ ಮಹೆಬೂಬ್ ಅವರ ನೇತೃತ್ವದಲ್ಲಿ ಮರ್ಚೇಡನಲ್ಲಿ ಅಂದೋಲನ ನಡೆಯಲಿದೆ.
ದೇವಸುಗೂರು ಹೋಬಳಿಯಲ್ಲಿ ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಸುರೇಶ ಅವರ ನೇತೃತ್ವದಲ್ಲಿ ದೇವಸೂಗೂರು, ಹೆಗ್ಗಸನಹಳ್ಳಿ, ಹನುಮಾನದೊಡ್ಡಿ, ಗಂಜಳ್ಳಿ. ಡಿಸೆಂಬರ್ 16ರಂದು ಕಾಡ್ಲೂರು, ಮೀರಾಪುರ, ಅರಶಿಣಗಿ, ಗುರ್ಜಾಪುರ, ಹೆಚ್.ತಿಮ್ಮಾಪುರ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ಸಂಗೀತಾ ಅವರ ನೇತೃತ್ವದಲ್ಲಿ ಕೊರ್ತಕುಂದ, ಕೊರ್ವಿಹಾಳ, ರಾಮಗಡ್ಡಿ, ಮಾಮಿಡಿದೊಡ್ಡಿ. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ವೆಂಕಟೇಶ ಅವರ ನೇತೃತ್ವದಲ್ಲಿ ಯದ್ಲಾಪುರ, ಕರೆಕಲ್, ರಂಗಾಪುರ, ಬೇವಿನಬೆಂಚಿ, ನಾಗಲಾಪುರ. ಡಿಸೆಂಬರ್ 19ರಂದು ಗ್ರಾಮ ಆಡಳಿತ ಅಧಿಕಾರಿ ಬಸವರಾಜ ಅವರ ನೇತೃತ್ವದಲ್ಲಿ ಸಗಮಕುಂಟಾ, ಯರಗುಂಟಾ, ಶಾಖವಾದಿ, ಪಲವಲದೊಡ್ಡಿ, ಮಾಡಮಾನದೂಡ್ಡಿ, ಕೊತ್ತದೊಡ್ಡಿ, ನಾಗನದೊಡ್ಡಿಯಲ್ಲಿ ಇ-ಪೋತಿ ಅಂದೋಲನ ನಡೆಯಲಿದೆ.
ಯರಗೇರಾ ಹೋಬಳಿಯಲ್ಲಿ ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಸಚೀನ್ ಅವರ ನೇತೃತ್ವದಲ್ಲಿ ಯರಗೇರಾ, ದಿನ್ನಿ. ಡಿಸೆಂಬರ್ 16ರಂದು ಗ್ರಾಮ ಆಡಳಿತ ಅಧಿಕಾರಿ ಮಧುಕಾಂತ್ ಅವರ ನೇತೃತ್ವದಲ್ಲಿ ಲಿಂಗನಖಾನದೊಡ್ಡಿ, ಜುಲುಂಗೇರಾ, ವೈ.ಮಲ್ಲಾಪುರ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ಸುನೀತಾ ಅವರ ನೇತೃತ್ವದಲ್ಲಿ ಗಧಾರ, ಉಪ್ರಾಳ, ಗುಡಿಹಾಳ. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ರಾಮಲಿಂಗಪ್ಪ ಅವರ ನೇತೃತ್ವದಲ್ಲಿ ಪೂರ್ತಿಪ್ಲಿ, ಅಲ್ಕೂರು. ಡಿಸೆಂಬರ್ 19ರಂದು ಗ್ರಾಮ ಆಡಳಿತ ಅಧಿಕಾರಿ ಸುರೇಂದ್ರ ಅವರ ನೇತೃತ್ವದಲ್ಲಿ ಉಡುಂಗಲ್ಲು, ಖಾನಾಪುರ, ನಾಗಲಾಪುರ, ಜಾಲಿಬೆಂಚಿ. ಡಿಸೆಂಬರ್ 20ರಂದು ಗ್ರಾಮ ಆಡಳಿತ ಅಧಿಕಾರಿ ಶಿವುಕುಮಾರ ಅವರ ನೇತೃತ್ವದಲ್ಲಿ ಗುಂಜಳ್ಳಿ. ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಸೋಮನಾಥ ಅವರ ನೇತೃತ್ವದಲ್ಲಿ ಗೊನ್ವಾರ, ಅನ್ವರ, ಕಮಲಾಪುರ, ಮಂಜೆರ್ಲಾ. ಡಿಸೆಂಬರ್ 16ರಂದು ಗ್ರಾಮ ಆಡಳಿತ ಅಧಿಕಾರಿ ನಲ್ಲಾರೆಡ್ಡಿ ಅವರ ನೇತೃತ್ವದಲ್ಲಿ ತುಂಟಾಪುರ, ಮುರ್ಕಿದೊಡ್ಡಿ, ಬಸಾಪುರ, ಮಾಸದೊಡ್ಡಿ, ಅಯಾಜಪುರ, ರಾಜಲಬಂಡಾ, ಉಂಡ್ರಾಳದೊಡ್ಡಿ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ಮೌನೇಶ್ ಅವರ ನೇತೃತ್ವದಲ್ಲಿ ಪುಚ್ಚಲದಿನ್ನಿ, ಕನ್ನೆದೊಡ್ಡಿ, ಮಾಳದೊಡ್ಡಿ, ಡಿ.ಬಾಪೂರ, ಕೊತ್ತದೊಡ್ಡಿ, ಜಂಬಲದಿನ್ನಿ, ಮಿಡಗಲದಿನ್ನಿಯಲ್ಲಿ ಇ-ಪೋತಿ ಅಂದೋಲನ ನಡೆಯಲಿದೆ.
ರಾಯಚೂರು ಹೋಬಳಿಯಲ್ಲಿ ಡಿಸೆಂಬರ್ 15ರಂದು ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ಅವರ ನೇತೃತ್ವದಲ್ಲಿ ರಾಯಚೂರು. ಡಿಸೆಂಬರ್ 16ರಂದು ಗ್ರಾಮ ಆಡಳಿತ ಅಧಿಕಾರಿ ಹನುಮೇಶ್ ಅವರ ನೇತೃತ್ವದಲ್ಲಿ ಅಸ್ಕಿಹಾಳ, ರಾಂಪುರ. ಡಿಸೆಂಬರ್ 17ರಂದು ಗ್ರಾಮ ಆಡಳಿತ ಅಧಿಕಾರಿ ನಾಗರತ್ನ ಅವರ ನೇತೃತ್ವದಲ್ಲಿ ಯಕ್ಲಾಸಪುರ, ಫತೆಪುರ. ಡಿಸೆಂಬರ್ 18ರಂದು ಗ್ರಾಮ ಆಡಳಿತ ಅಧಿಕಾರಿ ಸುಭಾಷ್ ಅವರ ನೇತೃತ್ವದಲ್ಲಿ ಸಿದ್ದರಾಂಪುರ, ಮಲಿಯಾಬಾದ, ಮಿಟ್ಟಿಮಲ್ಕಾಪುರ, ದೇವನಪಲ್ಲಿ. ಡಿಸೆಂಬರ್ 19ರಂದು ಗ್ರಾಮ ಆಡಳಿತ ಅಧಿಕಾರಿ ಗಂಗಪ್ಪ ಅವರ ನೇತೃತ್ವದಲ್ಲಿ ಬಾಯಿದೊಡ್ಡಿ, ವಡ್ವಟ್ಟಿ, ಗೌಸನಗರ, ಬೊಳಮಾನದೊಡ್ಡಿ, ಬಾಪುರ, ಬಿಜನಗೇರಾ, ತಮ್ಮಲಗಟ್ಟ, ಹಾರ್ಕನದೊಡ್ಡಿ, ಆಗಾಪುರ. ಡಿಸೆಂಬರ್ 20ರಂದು ಗ್ರಾಮ ಆಡಳಿತ ಅಧಿಕಾರಿ ಬಾಬು ಅವರ ನೇತೃತ್ವದಲ್ಲಿ ಯರಮರಸ, ಸಂಕನೂರ, ಪೋತ್ಗಲ್, ಏಗನೂರು ಹಾಗೂ ಪಲ್ಕಂದೊಡ್ಡಿಯಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷೀ ಯೋಜನೆಯಾದ ಇ-ಪೋತಿ ಅಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇರದ ಸದುಪಯೋಗವನ್ನು ಪಡೆಯಬೇಕೆಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್