




ಕೊಪ್ಪಳ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರತಿಯೊಬ್ಬರ ಜೀವನದಲ್ಲೂ ಮಾರುಕಟ್ಟೆ ಕಲೆಯೂ ಅವಶ್ಯಕವಾಗಿ ಬೇಕಾಗುತ್ತದೆ, ವೇಗವಾಗಿ ಚಲಿಸುತ್ತಿರುವ ದೇಶ ಮತ್ತು ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಸವಾಲು ಹಾಕಲು ಕಲಿಕೆ ಬಹಳ ಮುಖ್ಯ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರು ತಿಳಿಸಿದ್ದಾರೆ.
ಕುಷ್ಟಗಿ ರಸ್ತೆಯಲ್ಲಿರುವ ಎನ್.ಕೆ.ಪಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಡಿಜಿಟಲ್ ಯುಗದಲ್ಲಿ ಮಕ್ಕಳ ಮೇಳ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆಯಲ್ಲಿ ಬರುವ ಎಲ್ಲಾ ವಸ್ತುಗಳನ್ನು ನಂಬುವ ಹಾಗಿಲ್ಲ, ವ್ಯಾಪಾರಿ ಬುದ್ಧಿಯಿಂದ ಸಮಾಜ ಕೆಡುತ್ತಿದೆ, ಪ್ರತಿಯೊಬ್ಬರೂ ಸಹ ಮಕ್ಕಳಿಗೆ ಏನು ಕೊಡಬೇಕು ಕೊಡಬಾರದು ಎಂಬುದರ ಬಗ್ಗೆ ಹೆಚ್ಚು ಯೋಚಿಸಲಿ. ಫ್ರೀ ದುನಿಯಾದಲ್ಲಿ ಸುಳ್ಳಿಗೆ ಆಧ್ಯತೆಯಾಗಿದೆ, ಯಾವುದು ಏನು ಎಂದು ತಿಳಿದುಕೊಳ್ಳುವ ಜ್ಞಾನ ಇಂತಹ ಮೇಳಗಳಿಂದ ಬರುತ್ತದೆ ಎಂದರು.
ಸಂಸ್ಥೆಯ ಸಂಸ್ಥಾಪಕರಾದ ಬಿ. ಕೆ. ಪಟ್ಟಣಶೆಟ್ಟಿ ಅವರು, ಮಕ್ಕಳು, ಪೋಷಕರು ಮತ್ತು ಶಿಕ್ಷಕರ ಸಹಕಾರದಿಂದ ಇಷ್ಟು ಸೊಗಸಾದ ಕಾರ್ಯಕ್ರಮ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ, ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೂ ಆಧ್ಯತೆ ನೀಡಲಾಗಿದೆ, ಗುಣಾತ್ಮಕ ಶಿಕ್ಷಣ ತಮ್ಮ ಆಧ್ಯತೆ ಎಂದರು.
ಈ ಸಂದರ್ಭದಲ್ಲಿ ಮಧುಮತಿ ಬಿ. ಪಟ್ಟಣಶೆಟ್ಟಿ, ಸವಿತಾ ಗೌಡರ್, ರಂಗಮ್ಮ ಕೆ., ಲಕ್ಷ್ಮೀ ವ್ಯಾಸಮುದ್ರಿ, ಸವಿತಾ ಸಾಕ್ರೆ, ಶರಣವ್ವ, ವಿಜೇತಾ, ವೆಂಕಟಲಕ್ಷ್ಮೀ, ಬಿಂದಿಯಾ ಬಿ., ಜ್ಯೋತಿ ಕೆ., ನಿತಿನ್ ವಿ., ಉದಯಕುಮಾರ್ ಕೆ., ಮಲ್ಲಪ್ಪ ಕಿನ್ನಾಳ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್