
ಹಾಸನ, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರು ಅಂಚೆ ವ್ಯವಸ್ಥೆಯ ಕುಂದು ಕೊರತೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ನೀಡಲು ಅಂಚೆ ಅದಾಲತ್ ನ್ನು ಡಿ.16 ರಂದು ಬೆಳಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಹಾಸನದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರು ಅಂಚೆ ಸೇವೆಯ ಬಗ್ಗೆ ಕುಂದು ಕೊರತೆಗಳು ಏನಾದರು ಇದ್ದಲ್ಲಿ ಈ ಕಚೇರಿಗೆ ಸದರಿ ದಿನಾಂಕದಂದು ಬೆಳಗ್ಗೆ 11 ಗಂಟೆಯ ಒಳಗೆ ಸಲ್ಲಿಸಲು ಹಾಸನ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa