ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ 46ನೇ ದಿನದ ಧರಣಿ
PÉÆ¥Àà¼À,15 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇಶ ಹಾಳಾದರೂ ಸರಿ ತಮ್ಮ ಕೋಶ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ, ಜನಪರವಾಗಿ ನಿಲ್ಲಲು ನಿಷ್ಟುರತೆ ಬೇಕು. ಬೂದಿ, ಹೊಗೆ, ವಿಷಾನೀಲದಿಂದ ಬದುಕು ಹಾಳಾಗಿದೆ ಎಂದು ದಳಪತಿ ಸಂಘದ ಅಧ್ಯಕ್ಷರಾದ ಶರಣಬಸನಗೌಡ ಹೊರಪೇಟೆ ಅವರು ತಿಳಿಸಿದ್ದಾರೆ. ಕಂಪನಿಗಳನ
ಕೊಪ್ಪಳ: ದೇಶ ಹಾಳಾದರೂ ಕೋಶ ತುಂಬಬೇಕು


PÉÆ¥Àà¼À,15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇಶ ಹಾಳಾದರೂ ಸರಿ ತಮ್ಮ ಕೋಶ ತುಂಬಬೇಕು ಎನ್ನುವ ರಾಜಕಾರಣಿಗಳಿದ್ದಾರೆ, ಜನಪರವಾಗಿ ನಿಲ್ಲಲು ನಿಷ್ಟುರತೆ ಬೇಕು. ಬೂದಿ, ಹೊಗೆ, ವಿಷಾನೀಲದಿಂದ ಬದುಕು ಹಾಳಾಗಿದೆ ಎಂದು ದಳಪತಿ ಸಂಘದ ಅಧ್ಯಕ್ಷರಾದ ಶರಣಬಸನಗೌಡ ಹೊರಪೇಟೆ ಅವರು ತಿಳಿಸಿದ್ದಾರೆ.

ಕಂಪನಿಗಳನ್ನು ಆದಷ್ಟು ಬೇಗ ಒದ್ದೋಡಿಸಬೇಕು. ಗಾಳಿ ಯಂತ್ರಗಳಿಂದ ಭೂಮಿಯ ತೇವ ಉಳಿಸಿಕೊಳ್ಳಬೇಕಾದ ಸವಾಲು ಸಹ ನಮ್ಮ ಮುಂದಿದೆ, ಉತ್ತಮ ಗಾಳಿ ಮುಖ್ಯ ಎಂದು ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಕೊಪ್ಪಳ ಪಕ್ಕದಲ್ಲಿ ಬಲ್ನೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ-ಸುಮಿ, ಎಕ್ಸ್ ಇಂಡಿಯಾ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಬೇಡ, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತಗೊಳಿಸಿ 46ನೇ ದಿನದ ಧರಣಿ ಬೆಂಬಲಿಸಿ ಮಾತನಾಡಿದರು.

ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಚಾರಣ ಬಳಗದ ಡಾ. ಶಿವಕುಮಾರ್ ಮಾಲಿಪಾಟೀಲ್, ತಿಮ್ಮಣ್ಣ ಭೋವಿ ಬೆಂಕಿನಗರ, ಗ್ರಾಮದ ದಳಪತಿಗಳಾದ ದೊಡ್ಡನಗೌಡ ಮುದ್ದಲಗುಂದಿ, ಸಂಗಯ್ಯ ಕರ್ಕಿಹಳ್ಳಿ, ಬಾಲನಗೌಡ ಬೆನ್ನೂರು, ಕಲ್ಲನಗೌಡ ಮಾಸ್ತಿಕಟ್ಟಿ, ಉಮೇಶಗೌಡ ಹೂವಿನಹಾಳ, ಶರಣೇಗೌಡ ಮುದ್ದಾಬಳ್ಳಿ, ಯಮನಪ್ಪ ಕಿಡದಾಳ, ದೇವನಗೌಡ ಯ್ಯಾಟಿ, ಬಸನಗೌಡ ಕೋಳೂರು, ಸೋಮಲಿಂಗಪ್ಪ ಸಂಗನಾಳ, ಹನುಮನಗೌಡ ಹುಲಿಯಾಪುರ, ಹನುಮಗೌಡ ಬಗನಾಳ, ಸಂಗಮೇಶ ಪುರ, ಅಮರೇಗೌಡ ಮ್ಯಾದರಡೊಕ್ಕಿ, ಸಂಘಟಕರಾದ ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರ್, ಡಿ. ಎಂ. ಬಡಿಗೇರ, ಮಹಾದೇವಪ್ಪ ಮಾವಿನಮಡು, ರವಿ ಕಾಂತನವರ, ಮೂಕಣ್ಣ ಮೇಸ್ತ್ರೀ, ಎಸ್. ಬಿ. ರಾಜೂರ, ಮಖ್ಬೂಲ್ ರಾಯಚೂರು, ಭೀಮಪ್ಪ ಯಲಬುರ್ಗಾ, ಸುಭಾನ್, ಸುರೇಶ ಪೂಜಾರ, ರಮೇಶ ಬೋಚನಹಳ್ಳಿ ಗಂಗಮ್ಮ ಕವಲೂರು ಧರಣಿಯಲ್ಲಿ ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande