
ಕೋಲಾರ, ೧೫ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದಿ0ದ ಡಿಸೆಂಬರ್ ೨೦ರಂದು ನಡೆಯಲಿರುವ ಕೋಲಾರ ಜಿಲ್ಲಾ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಂತಿಮ ಹಂತದ ಚಟುವಟಿಕೆಗಳು ಚುರುಕಿನಿಂದ ನಡೆಯುತ್ತಿದ್ದು, ಎಲ್ಲರ ಪ್ರಯತ್ನದಿಂದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುವುದರ ಜೊತೆಗೆ ಶಿಕ್ಷಣ ಪ್ರೇಮಿ ವ್ಯಕ್ತಿತ್ವಗಳಿಗೆ ಗೌರವ ನೀಡುವ ಅವಕಾಶ ಕೂಡಿ ಬಂದಿದೆ ಎಂದು ಸಮಾರಂಭದ ಜವಾಬ್ದಾರಿ ವಹಿಸಿಕೊಂಡಿರುವ ಸಂಘದ ಕಾರ್ಯಾಧ್ಯಕ್ಷ ಗಿರೀಶ್ ಕುಮಾರ್ ತಿಳಿಸಿದರು.
ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶದ ಅಂತಿಮ ಭೌತಿಕ ಸಭೆಯಲ್ಲಿ ಉಪಸ್ಥಿತರಿದ್ದು ಸಮಾವೇಶವನ್ನು ವಿವಿಧ ಉಪ ಸಮಿತಿಗಳ ಮೂಲಕ ಆಯೋಜಿಸಿದ್ದು ,ಜಿಲ್ಲೆಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಪ್ರಮುಖರನ್ನು ಆಹ್ವಾನಿಸಿ ಸಮಾರಂಭವನ್ನು ವಿಶೇಷವಾಗಿ ಯೋಜಿಸಲಾಗಿದೆ. ಸಮಾವೇಶ ಸಂಭ್ರಮದ ಬದಲಾಗಿ ಸಂಘದ ಅಸ್ತಿತ್ವ ಹಾಗೂ ಉದ್ದೇಶವನ್ನು ಶಿಕ್ಷಕ ಸಮುದಾಯದಲ್ಲಿ ಸ್ಪಷ್ಟ ಪಡಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಆರ್ ಮಂಜುಳಾ ಮಾತನಾಡಿ, ಸಮಾರಂಭ ಯಶಸ್ವಿಯಾಗಲು ಜಿಲ್ಲೆಯ ಆರು ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡ0ತೆ ಪೂರ್ವಭಾವಿ ಸಭೆಯನ್ನು ಆಯೋಜಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರ್ಯ ಯೋಜನೆಯನ್ನು ರೂಪಿಸಬೇಕು ಎಂದು ತಾಲೂಕು ಅಧ್ಯಕ್ಷರಿಗೆ ತಾಕೀತು ಮಾಡಿದರು.
ರಾಜ್ಯಾಧ್ಯಕ್ಷ ಎಸ್ ಚೌಡಪ್ಪ ಮಾತನಾಡಿ, ಇದೊಂದು ಮಾದರಿ ಸಮಾವೇಶ ಆಗಬೇಕಾದರೆ ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸಬೇಕು ಜಿಲ್ಲೆಯ ವಿವಿಧ ವೃಂದ ಸಂಘಗಳಲ್ಲದೆ ಜಿಲ್ಲೆಯಲ್ಲಿ ಸಂಘಟನೆಗಳು ಬಲಗೊಳ್ಳಲು ಕಾರಣಕರ್ತರಾದ ಹಿರಿಯ ನೌಕರ ಮುಖಂಡರನ್ನು ಸಮಾರಂಭಕ್ಕೆ ಆಹ್ವಾನಿಸುವುದಲ್ಲದೆ ಅವರ ಮಾರ್ಗದರ್ಶನ ಪಡೆದುಕೊಳ್ಳುವುದು ಅಗತ್ಯ. ದಿನಾಂಕ ಡಿಸೆಂಬರ್ ೨೧ರಂದು ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯನ್ನು ಮಂತ್ರಾಲಯದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲಾ ಪದಾಧಿಕಾರಿಗಳು ಸೇರಿ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಬಿ ಎಂ ಮುನಿರಾಮಯ್ಯ ಮಾತನಾಡಿ ಸರ್ವಸಮ್ಮತ ಕಾರ್ಯಯೋಜನೆಗಳು ಹಾಗೂ ಜಿಲ್ಲೆ ಮತ್ತು ತಾಲೂಕು ಸಮಿತಿಗಳ ಪದಾಧಿಕಾರಿಗಳ ನೆರವಿನ ಹಸ್ತವಿದೆ. ಸಮಿತಿಗಳ ರೂಪದಲಿ ನೀಡಿರುವ ಕಾರ್ಯಗಳಲ್ಲಿ ಸಕ್ರಿಯವಾಗುವಂತೆ ಕೋರಿದರು.
ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷೆ ಕವಿತಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಮನೋಹರ್, ಬೆಂಗಳೂರು ವಿಭಾಗೀಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಹಿರಿಯ ಉಪಾಧ್ಯಕ್ಷೆ ಬಿ ಎಂ ರಾಧಮ್ಮ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಕೋಲಾರ ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಜಿಲ್ಲಾ ಖಜಾಂಚಿ ಮಂಜುನಾಥ ಆಚಾರಿ ಉಪಾಧ್ಯಕ್ಷೆ ಲಲಿತ ಕಲಾ ಸಂಘಟನಾ ಕಾರ್ಯದರ್ಶಿ ವರಲಕ್ಷಿ÷್ಮ ಕಾರ್ಯದರ್ಶಿಗಳಾದ ತ್ಯಾಗರಾಜ್ ಮತ್ತು ಆರ್ ಪಿ ನಾರಾಯಣಸ್ವಾಮಿ ಪದಾಧಿಕಾರಿಗಳಾದ ಜಯಂತಿ ನಾಗವೇಣಿ, ಸತೀಶ್ ಮತ್ತಿತರರು ಭಾಗವಹಿಸಿದ್ದರು.
ಚಿತ್ರ ; ಕೋಲಾರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದಿ0ದ ಡಿಸೆಂಬರ್ ೨೦ರಂದು ನಡೆಯಲಿರುವ ಕೋಲಾರ ಜಿಲ್ಲಾ ಸಮಾವೇಶ ಅಂತಿಮ ಹಂತದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್