ಮಾನವೀಯ ಹಣತೆಯನ್ನು ಮಕ್ಕಳ ಮೂಲಕ ಬಿತ್ತಿದ ಸಾ.ರಘುನಾಥ್
ಮಾನವೀಯ ಹಣತೆಯನ್ನು ಮಕ್ಕಳ ಮೂಲಕ ಬಿತ್ತಿದ ಸಾ.ರಘುನಾಥ್
ಸಾಹಿತ್ಯ ಕಮ್ಮಟದಲ್ಲಿ ಮಕ್ಕಳೇ ರಚಿಸಿ ಸಾಹಿತಿ ಸಾ.ರಘುನಾಥ್ ಮೊರಸನಾಡು ಪ್ರಕಾಶನದ ಮೂಲಕ ಪ್ರಕಟಿಸಿರುವ ;ಬಿತ್ತನೆ'ಮಕ್ಕಳ ಕವನ ಸಂಕಲನವನ್ನು ಪತ್ರಕರ್ತಮತ್ತು ಸಾಹಿತಿ ಚ.ಹ.ರಘುನಾಥ್ ಬೆಂಗಳೂರಿನ ತಾರಾ ಡಾ.ವೆಂಕಟಪ್ಪ ಬಿಡುಗಡೆ ಮಾಡಿದರು.


ಕೊಲಾರ, ೧೫ ಡಿಸೆಂಬರ್ (ಹಿ.ಸ. ) :

ಆ್ಯಂಕರ್ : ಇತರರನ್ನು ಸಮಾನವಾಗಿ ಕಾಣುವ ಧರ್ಮ ಚಿನ್ನಕ್ಕೆ ಸಮಾನ. ಸಮಾನವಾಗಿ ಕಾಣದಿದ್ದರೆ ಅಂತಹ ಧರ್ಮ ಕಸಕ್ಕೆ ಸಮ ಎಂದು ಕವಿರಾಜಮಾರ್ಗದಲ್ಲಿ ಎಂಟು ನೂರು ವರ್ಷಗಳ ಹಿಂದೆ ಹೇಳಲಾಗಿತ್ತು. ಅಂತಹ ಸಮತೆಯ ದೀಪ ಹಚ್ಚುವ ಪರಂಪರೆಯನ್ನು ಬಿತ್ತನೆ ಕವನ ಸಂಕಲನದಲ್ಲಿ ರಿಷಿಕಾ ಹೇಳಿದ್ದಾಳೆ. ಮಕ್ಕಳು ಅನ್ನದಾತರ ಬಗ್ಗೆ ಕೌಟುಂಬಿಕ ತಲ್ಲಣಗಳ ಬಗ್ಗೆ ಮಾತನಾಡಿದ್ದಾರೆ. ಜೀವನ ಪ್ರೀತಿಯನ್ನು ಕಳೆದುಕೊಳ್ಳುವ ಇಂದಿನ ದುರಿತ ಸಮಯದಲ್ಲಿ ಅನಾರೋಗ್ಯ ಮತ್ತು ಹಣಕಾಸಿನ ಮುಗ್ಗಟ್ಟಿನ ನಡುವೆ ಬಿತ್ತನೆ ಕಾವ್ಯ ಸಂಕಲನದ ಮೂಲಕ ಸಮಾಜದ ಆರೋಗ್ಯಕ್ಕಾಗಿ ಸಾ. ರುಘುನಾಥ್ ಹೊಸ ಪ್ರಯೋಗ ಮಾಡಿದ್ದಾರೆ. ಮಾನವೀಯ ಹಣತೆಯನ್ನು ಸಾ.ರಘುನಾಥ್ ಬಿತ್ತನೆ ಮಾಡಿದ್ದಾರೆ. ಹಣತೆಯ ಬೆಳಕಿನಲ್ಲಿ ಮಕ್ಕಳು ನಾಳಿನ ಆರೋಗ್ಯಕರ ಬದುಕನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ಸಾಹಿತಿ ಹಾಗು ಪತ್ರಕರ್ತ ಚ.ಹ.ರಘುನಾಥ್ ಅಭಿಪ್ರಾಯಪಟ್ಟರು.

ಮೊರಸುನಾಡು ಪ್ರಕಾಶನದಿಂದ ಹೊರತರಲಾದ ಬಿತ್ತನೆ ಕವನ ಸಂಕಲನ ಕೃತಿ ಕುರಿತು ಮಾತನಾಡಿದರು.ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಉದ್ದೀಪನಗೊಳಿಸುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಇಂತಹ ಕೆಲಸವನ್ನು ಸಾಹಿತ್ಯ ಅಕಾಡಮಿ, ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸಗಳನ್ನು ಸಾ.ರಘುನಾಥ್ ಮಾಡಿದ್ದಾರೆ.

ಧಾರವಾಡ ಬಾಲವಿಕಾಸ ಸಂಸ್ಥೆ ಎನು ಮಾಡುತ್ತಿದೆ ತಿಳಿಯದು. ನಿರ್ಲಕ್ಷಕ್ಕೆ ಒಳಗಾಗಿರುವ ಮಕ್ಕಳನ್ನು ಕರೆದು ಬನ್ನಿ ನಿಮಗೆ ಕಥೆ ಹೇಳುತ್ತೇನೆ. ಸಾಹಿತ್ಯದ ಕಥೆಗಳನ್ನು ಹೇಳುತ್ತೇನೆ.ಮಕ್ಕಳು ತಮ್ಮ ಭಾಷೆಯ ಮೂಲಕ ಅಭಿವ್ಯಕ್ತಗೊಳಿಸಲು ರಘುನಾಥ್ ವೇದಿಕೆ ಸೃಷ್ಟಿಮಾಡಿದ್ದಾರೆ.ವಿಭಾಷೆ ಮತ್ತು ವ್ಯಾಕರಣ ದೃಷ್ಟಿಯಿಂದ ಬಿತ್ತನೆ ಕವನ ಸಂಕಲನ ತೊದಲು ನುಡಿ ಆಗಿದೆ. ತೊದಲು ನುಡಿಗಳು ಕನ್ನಡದ ವಿವೇಕಕ್ಕೆ ಕಡಿಮೆ ಇಲ್ಲ. ಸಮತೆಯ ದೀಪ ಹಚ್ಚಿ ಸಾಮರಸ್ಯದ ಸಂದೇಶವನ್ನು ಬಿತ್ತನೆ ಕವನ ಸಂಕಲನದ ಮೂಲಕ ಸಾರಲಾಗಿದೆ ಎಂದು ವಿಶ್ಲೇಷಿಸಿದರು.

ಇದು ಮಕ್ಕಳ ಸಾಹಿತ್ಯದ ಸಮೃದ್ದಿಯ ಕಾಲಘಟ್ಟವಾಗಿದೆ. ಹಲವಾರು ಕಾರ್ಪರೇಟ್ ಸಂಸ್ಥೆಗಳು ಹಾಗು ಎನ್.ಜಿ.ಓಗಳು ರಾಶಿರಾಶಿ ಮಕ್ಳಳ ಸಾಹಿತ್ಯವನ್ನು ಪ್ರಕಟಿಸುತ್ತಿವೆ. ಪುಸ್ತಕಗಳ ಮೂಲಕ ಸಂಗತಿಗಳನ್ನು ತಲುಪಿಸಬೇಕೆಂಬ ಪರಿಕಲ್ಪನೆ ಪುಸ್ತಕಗಳಲ್ಲಿ ಇಲ್ಲವಾಗಿದೆ.ಬಿತ್ತನೆ ಕವನ ಕವನ ಸಂಕಲನದ ಮೂಲಕ ರಘುನಾಥ್‌ರವರು ಸಾಹಿತ್ಯದ ಪರಿಕಲ್ಪನೆಯನ್ನು ಹೇಳುತ್ತಿದ್ದಾರೆ.

ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಹೇಳಿಕೊಡುತ್ತಿರುವುದು ಸವಾಲಿನ ಕೆಲಸ ಆಗಿದೆ. ಆದರೆ ರಘುನಾಥ್ ಭಾಷೆಯ ಮೂಲಕ ಮಕ್ಕಳ ಮನೋವಿಕಾಸ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀವಾಗಿದೆ. ಬಿತ್ತನೆ ಕವನ ಸಂಕಲನದ ಅಂತಿಮ ಫಲಿತಾಂಶ ಮಕ್ಳಳಲ್ಲಿ ಜೀವನ ಪ್ರೀತಿ ತುಂಬುವುದು ಆಗಿದೆ. ಎಲ್ಲ ಅಡೆತಡೆಗಳನ್ನು ಮೆಟ್ಟಿ ಮಕ್ಕಳಲ್ಲಿ ಜೀವನ ಪ್ರೀತಿಯನ್ನು ಬಿತ್ತಿದ್ದಾರೆ. ಮಾನವೀಯ ಹಣತೆಯ ಬಿತ್ತನೆಯ ಮೂಲಕ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಹಾಗು ನಾಳೆಗಳ ಆರೋಗ್ಯಕರ ಬದುಕನ್ನು ರೂಪಿಸಿಕೊಳ್ಳಲು ರಘುನಾಥ್ ಮಕ್ಕಳ ಸಾಹಿತ್ಯದ ಕಮ್ಮಟವನ್ನು ನಡೆಸಿದ್ದಾರೆ ಎಂದು ತಿಳಿಸಿದರು.

ಶಾಲೆಯಲ್ಲಿ ಮತ್ತು ಮನೆಗಳಲ್ಲಿ ಇಂದು ಮೊಬೈಲ್‌ಗಳು ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಒಂದು ಸಮೀಕ್ಷೆಯ ಪ್ರಕಾರ ಲಕ್ಷಾಂತರ ಮಕ್ಕಳು ದೃಷ್ಟಿಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಸ್ಕಿçÃನ್‌ಗೆ ಅಂಟಿಕೊಳ್ಳುತ್ತಿದ್ದು ದೃಷ್ಟಿದೋಶ ಮತ್ತು ಮಾನಸಿಕ ಒತ್ತಡದಿಂದ ಮಕ್ಕಳು ಬಳಲುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮೊಬೈಲ್ ಹಾನಿ ಮಾಡುತ್ತಿದೆ. ಮನುಷ್ಯ ಸಂಬ0ಧಗಳಿ0ದ ನಮ್ಮನ್ನು ಸೇರಿದಂತೆ ಮಕ್ಕಳು ವಿಮುಖರಾಗುತ್ತಿದ್ದಾರೆ. ಮಕ್ಕಳ ಮನೋವಿಕಾಸ ಆಟದ ಮೈದಾನದಲ್ಲಿ ಆಗುತ್ತಿಲ್ಲ. ಬಾಲ್ಯ ಆಟದ ಮೈದಾನದಲ್ಲಿ ವಿಕಸನಗೊಳ್ಳಬೇಕು. ಗೆಳೆಯರ ಸಂಘ ಆಟದ ಮೈದಾನದಲ್ಲಿ ಇಲ್ಲ. ಬಂದು ಮಿತ್ರರ ಸಂಘವಿಲ್ಲ. ಮೊಬೈಲ್ ಮಕ್ಕಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಚ.ಹ ರಘುನಾಥ್ ಕಳವಳ ವ್ಯಕ್ತಪಡಿಸಿದರು.

ಇಂತಹ ದುರಿತ ಸ್ಥಿತಿಯಲ್ಲಿ ಮಕ್ಕಳನ್ನು ಆರೋಗ್ಯಕರ ಸ್ಥಿತಿಗೆ ತೆಗೆದುಕೊಂಡು ಹೋಗಲು ಪುಸ್ತಕ ನೀಡಬೇಕಾದ ಅಗತ್ಯವಿದೆ. ಪಠ್ಯಪುಸ್ತಕದ ಆಚೆ ಮಕ್ಕಳನ್ನು ಕೊಂಡೊಯ್ಯುವ ಪರಿಸರ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಮಕ್ಕಳು ಮುಗ್ದತೆಯನ್ನು ಕಳೆದುಕೊಳ್ಳುತ್ತಿದ್ಧಾರೆ. ಅದನ್ನು ಸಂಪಾದಿಸುವುದು ಮಕ್ಕಳ ಸಾಂಗತ್ಯದಿ0ದ ಮಾತ್ರ ಸಾಧ್ಯ. ನಮ್ಮಲ್ಲಿ ಮಕ್ಕಳ ಕಿಶೋರತನ ಇರತ್ತದೆ.ಅದು ಮಕ್ಕಳ ಸಾಂಗತ್ಯದಲ್ಲಿ ಮಾತ್ರ ಸಾಧ್ಯ.ಶಿಶು ಜಾಗೃತಗೊಳ್ಳುವುದು ಇಂತಹ ಕಮ್ಮಟಗಳಿಂದ ಸಾಧ್ಯ. ವಿಚಾರದ ಬಿತ್ತನೆ ಆಗಬೇಕಾಗಿದೆ. ಈವತ್ತಿನ ಸಂದರ್ಭದಲ್ಲಿ ಶಿವನ ಕೈಗೆ ಕಪಾಲ ಅಂಟಿಕೊ0ಡ0ತೆ ಮಕ್ಕಳ ಕೈಗೆ ಮೊಬೈಲ್ ಅಂಟಿಕೊ0ಡಿದೆ. ಮಕ್ಕಳ ಕಲಿಕೆ ಮೊಟಕು ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮಕ್ಕಳು ಕಲ್ಪನಾಶಕ್ತಿಯ ದಾರಿದ್ರö್ಯದಿಂದ ಬಳಲುತ್ತಿದ್ದಾರೆ.ಮೊಬೈಲ್ ಇಡೀ ಜಗತ್ತನ್ನು ನಮ್ಮ ಕಣ್ಣು ಮುಂದೆ ತೆರೆದು ಇಡುತ್ತದೆ. ಮೊಬೈಲ್ ಆಚಿನ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುಸ್ತಗಳ ಮೂಲಕ ಸಂಗತಿಗಳನ್ನು ತಲುಪಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.ಬಿತ್ತನೆ ಕವನ ಕಮ್ಮಟ ಆ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಕೃತಿಯ ಸಂಪಾದಕ ಸಾ.ರಘುನಾಥ್ ಮಾತನಾಡಿ ನಾನು ಕಳೆದುಕೊಂಡಿದ್ದನ್ನು ಸಮಾಜ ಮತ್ತು ಮಕ್ಕಳು ನೀಡಿದ್ದಾರೆ. ಕಳೆದುಕೊಂಡ ಜೀವನದ ಪ್ರೀತಿಯನ್ನು ಮಕ್ಕಳು ಕವನ ಕಮ್ಮಟದಲ್ಲಿ ನೀಡಿದ್ದಾರೆ. ಬೆಂಗಳೂರು ಮತ್ತು ಕೋಲಾರ ಭಾವನಾತ್ಮಕವಾಗಿ ಬೆಸೆದು ಕೊಂಡಿದೆ. ನಾನು ಕೆಲಸ ಮಾಡುತ್ತಲೇ ಸಾಯಲು ಬಯಸುತ್ತೇನೆ. ಸರಸ್ವತಿ ನನ್ನ ನಾಲಿಗೆಯನ್ನು ಕಿತ್ತುಕೊಳ್ಳುವ ಮೊದಲು ಸಾಯಲು ಬಯಸುತ್ತೇನೆ. ರೈತ ಚಳವಳಿ ಅಥವಾ ಮಕ್ಕಳ ಕವನ ಕಮ್ಮಟದಲ್ಲಿ ಪ್ರಾಣ ಬಿಡಲು ಬಯಸುತ್ತೇನೆ. ಅಸಹಾಯಕನಾಗಿ ರೋಗ ಬಂದು ನರಳುತ್ತ ಸಾಯುವ ಬದಲು ಕೆಲಸ ಮಾಡುತ್ತಲೇ ಸಾಯಬೇಕು ಎಂಬುದು ನನ್ನ ಆಸೆಯಾಗದೆ. ನಾನು ಹಲವರನ್ನು ಕಾಡಿದದ್ದೇನೆ. ಆದರೆ ನನ್ನನ್ನು ಯಾರು ನೋಯಿಸಿಲ್ಲ. ಬದಲಾಗಿ ನನ್ನನ್ನು ಪ್ರೀತಿಸಿ ಆದರಿಸಿದ್ದಾರೆ. ಜೀವನ ಪ್ರೀತಿ ತೋರಿಸಿದ್ದಾರೆ ಎಂದು ಭಾವುಕರಾಗಿ ಹೇಳಿದರು.

ಕೃತಿಯ ಬಿಡುಗಡೆ ಮಾಡಿ ಮಾತನಾಡಿದ ತಾರಾ ಡಾಕ್ಟರ್ ವೆಂಟಪ್ಪ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸುವ ಕೆಲಸವನ್ನು ಇಂತಹ ಕಮ್ಮಟಗಳಿಂದ ಸಾಧ್ಯ.ಮಕ್ಕಳೇ ರಚಿಸಿರುವ ಕವಿತೆಗಳು ಸೊಗಸಾಗಿ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.

ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ. ಗೋಪಾಲ ಗೌಡ ಮಾತನಾಡಿ ಮಕ್ಕಳ ಕವನ ಕಮ್ಮಟದ ಮೂಲಕ ಅವರ ಕನಸುಗಳನ್ನು ಅಭಿವ್ಯಕ್ತಗೊಳಿಸಲಾಗಿದೆ. ಇದೊಂದು ವಿನೂತನವಾದ ಪ್ರಯೋಗವಾಗಿದೆ. ಬಾಲ್ಯದಲ್ಲೇ ಮಕ್ಕಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಶ್ರೀನಿವಾಸಪುರದ ವೈದ್ಯ ಡಾ.ವೆಂಕಟಾಚಲ ಮಾತನಾಡಿ ಮೊಬೈಲ್ ಬಳಕೆ ಮಕ್ಕಳಲ್ಲಿ ತಲ್ಲಣಗಳನ್ನು ಸೃಷ್ಠಿ ಮಾಡಿದೆ. ಅಮ್ಮನ ಮಾತು ಕೇಳದ ಮಕ್ಕಳು ಮೈಬೈಲ್ ಸಂದೇಶಗಳನ್ನು ಪಾಲಿಸುತ್ತಾರೆ. ಮಕ್ಕಳ ಕಮ್ಮಟದ ಮೂಲಕ ಮಕ್ಕಳ ಸಾಹಿತ್ಯವನ್ನು ಅಭಿವ್ಯಕ್ಕಗೊಳಿಸಲಾಗಿದೆ. ಮಕ್ಕಳ ಮನಸ್ಸು ಭೂಮಿ ಇದ್ದಂತೆ.ಭೂಮಿಗೆ ಬಿತ್ತಿದ್ದನ್ನು ವಾಪಸ್ ನೀಡುತ್ತದೆ. ಮಕ್ಕಳಲ್ಲಿ ಜ್ಙಾನ ಮತ್ತು ಮೌಲ್ಯ ಬಿತ್ತಿದ್ದರೆ ಒಳ್ಳೆಯ ಫಸಲು ಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಾಹಿತಿ ಹೆಚ್.ಎ.ಪುರುಷೋತ್ತಮ ರಾವ್ ಮಾತನಾಡಿ ರಘುನಾಥ್ ಮಕ್ಕಳ ಮೂಲಕ ಹಲವಾರು ಪ್ರಯೋಗಗಳನ್ನು ರಘುನಾಥ್ ಮಾಡಿದ್ದಾರೆ. ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ತುಂಬಿದ್ದಾರೆ. ಮಕ್ಕಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ತುಂಬೇಕು.ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ಚಿನ್ಮಯ ಶಾಲೆಯ ಅಧ್ಯಕ್ಷ ಚಂದ್ರ ಪ್ರಕಾಶ್ ಜಾನಪದ ಕಲಾವಿದ ಮುಳಬಾಲಪ್ಪ,ರಂಗಕರ್ಮಿ ಗಾನಹಳ್ಳಿ ಸ್ವಾಮಿಯವರನ್ನು ಸನ್ಮಾಮಿಸಲಾಯಿತು.

ಚಿತ್ರ; ಸಾಹಿತ್ಯ ಕಮ್ಮಟದಲ್ಲಿ ಮಕ್ಕಳೇ ರಚಿಸಿ ಸಾಹಿತಿ ಸಾ.ರಘುನಾಥ್ ಮೊರಸನಾಡು ಪ್ರಕಾಶನದ ಮೂಲಕ ಪ್ರಕಟಿಸಿರುವ ;ಬಿತ್ತನೆ'ಮಕ್ಕಳ ಕವನ ಸಂಕಲನವನ್ನು ಪತ್ರಕರ್ತಮತ್ತು ಸಾಹಿತಿ ಚ.ಹ.ರಘುನಾಥ್ ಬೆಂಗಳೂರಿನ ತಾರಾ ಡಾ.ವೆಂಕಟಪ್ಪ ಬಿಡುಗಡೆ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande