
ರಾಯಚೂರು, 15 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟಿಯ ಆರೋಗ್ಯ ಅಭಿಯಾನದಡಿ ಸಂಚಾರಿ ಆರೋಗ್ಯ ಘಟಕಗಳಿಗೆ ಅವಶ್ಯಕವಾದ ಒಟ್ಟು 06 ವಾಹನಗಳು ತಾಲೂಕು ಮಟ್ಟದಲ್ಲಿ ಸಂಚಾರಿ ಆರೋಗ್ಯ ತಂಡಗಳಿಗೆ ವಾಹನಗಳನ್ನು ಸರಬರಾಜು ಮಾಡಲು ಅರ್ಹ ಸಂಸ್ಥೆಗಳಿ0ದ ಅರ್ಜಿ ಆಹ್ವಾನಿಸಲಾಗಿದೆ.
2026ರ ಜನವರಿಯಿಂದ 2026ರ ಮಾರ್ಚ ತಿಂಗಳಿನವರೆಗೂ ಒಟ್ಟು ಮೂರು ತಿಂಗಳ ಅವಧಿಗೆ ಸೇವೆಯನ್ನು ಒದಗಿಸಬೇಕು. ಆಸಕ್ತರು ಡಿಸೆಂಬರ 18 ರ ಸಂಜೆ 5:30 ಗಂಟೆಯೊಳಗೆ ಅರ್ಜಿಗಳನ್ನು ವೆಬ್‌ಸೈಟ್ ವಿಳಾಸ: https://kppp.karnataka.gov.in ನಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ, ಡಿ.ಪಿ.ಎಂ.ಯು. ವಿಭಾಗಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್