

ಕಾರಟಗಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಮನೋಭಾವ ಅತೀ ಅವಶ್ಯ.ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಲ್ ವೀರಭದ್ರ ರಾವ್ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಿಗೆ ವೈಜ್ಞಾನಿಕ ವಿಷಯಗಳ ಜತೆ ಕಲಾ, ಸಾಹಿತ್ಯದ ಆಸಕ್ತಿ ಮೂಡಿಸಬೇಕು,ಚಿಕ್ಕ ಮಕ್ಕಳು ಒಂದು ನಿಧಿ, ಅವರ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಮನೋಭಾವ ಅತೀ ಅವಶ್ಯ.ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.
ಕೌಶಲಾಧರಿತ ಗುಣಮಟ್ಟದ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜತೆಗೆ ಹೊಸ ಹೊಸ ವಿಷಯದಲ್ಲಿಚಿಂತನೆ ಮಾಡಲು ಹುರಿದುಂಬಿಸುವ ಮೂಲಕ ಹೊಸ ಜಗತ್ತಿನ ಅನಾವರಣ ಮಾಡಬೇಕು ಎಂದರು.
ಪುಟಾಣಿಗಳ ಕಲರವ ತುಂಬಿತ್ತು. ಪಾಲಕರೂ ಅತ್ಯಧಿಕ ಸಂಖ್ಯೆಯಲ್ಲಿದ್ದರು. ಎಕ್ಸ್‌ಪೋ ವಿಜ್ಞಾನ ಜಾತ್ರೆಯಂತೆ ಕಂಗೊಳಿಸುತ್ತಿತ್ತು.
ನರ್ಸರಿ, ಎಲ್ ಕೆ ಜಿ, ಯು ಕೆ ಜಿ, ಮಕ್ಕಳು ಇಂಗ್ಲಿಷ್ ವಿಜ್ಞಾನ ಮಾದರಿಗಳು, ಗಣಿತ ಮಾದರಿಗಳು, ಕನ್ನಡ ಜ್ಞಾನಕೋಶ ವಿಭಾಗಗಳಲ್ಲಿ ತಾವು ಸಿದ್ಧಪಡಿಸಿದ ಮಾದರಿಗಳ ಬಗ್ಗೆ ಮಕ್ಕಳು ಪಟಪಟಾ ಅಂತ ಹೇಳುತ್ತಿದ್ದುದು ಪಾಲಕರಲ್ಲಿ ಖುಷಿ ಮೂಡಿಸಿತ್ತು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ, ಡಾ ಮೊಹಮ್ಮದ್ ರಫೀಕ್ ಪ್ರಾಚಾರ್ಯರು, ಶ್ರೀದೇವಿ ಕೊಲ್ಲಾ ಶಾಲೆಯ ಮುಖ್ಯಸ್ಥರು, ಸಾಜಿದ ಬೇಗಂ, ಗಂಗಮ್ಮ ಹಿರೇಮಠ, ಶಿಕ್ಷಕಿಯರು ಲಕ್ಷ್ಮಿ ಅಪರ್ಣ, ಶ್ವೇತಾ, ಪ್ರತಿಭಾ, ಹೇಮಾ, ಶಿಕ್ಷಕ ವೃಂದ ಪಾಲಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್